ಕುಂಬಳೆ: ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ನೇತೃತ್ವದಲ್ಲಿ ಪುತ್ತಿಗೆ ಬಾಡೂರು ಶಾಲೆಯಲ್ಲಿ ಕನ್ನಡ ಭಾಷಾ ಅಲ್ಪಸಂಖ್ಯಾತ ಮಕ್ಕಳಿಗಾಗಿ ‘ಬಾಲಕಲಾತರಂಗ 2022’ ರಜಾ ಶಿಬಿರವನ್ನು ಆರಂಭಿಸಲಾಗಿದೆ. ಪುತ್ತಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ ಶಿಬಿರವನ್ನು ಉದ್ಘಾಟಿಸಿದರು. ಸಂಘಟನಾ ಸಮಿತಿ ಸಂಚಾಲಕಿ ಎಂ.ಅನಿತಾ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ.ವಿ ಕುಂಞÂ್ಞ ರಾಮನ್, ಓ.ಎಂ.ಬಾಲಕೃಷ್ಣನ್, ಶಾಲಾ ಮುಖ್ಯೋಪಾಧ್ಯಾಯ ಸುಧೀರ್, ಸಿ.ಎ.ಸುಬೈರ್, ವಿಖ್ಯಾತ್ ರೈ, ವಿಠ್ಠಲ್ ರೈ, ಶೋಭಾ ಮಾತನಾಡಿದರು. ಮಕ್ಕಳ ಕಲ್ಯಾಣ ಸಮಿತಿ ಜಿಲ್ಲಾ ಕಾರ್ಯದರ್ಶಿ ಟಿ.ಎಂ.ಎ.ಕರೀಂ ಸ್ವಾಗತಿಸಿ, ಶಿಬಿರದ ಸಂಚಾಲಕ ಶಶಿ ಕುಳೂರು ವಂದಿಸಿದರು. 14ರಂದು ಸಂಜೆ 5 ಗಂಟೆಗೆ ಶಿಬಿರ ಮುಕ್ತಾಯಗೊಳ್ಳಲಿದೆ.