HEALTH TIPS

ಒಬ್ಬ ಆರೋಗ್ಯವಂತ ವ್ಯಕ್ತಿ ಪ್ರತಿದಿನ ಇಷ್ಟು ಪ್ರಮಾಣದ ಪ್ರೋಟೀನ್ ಸೇವಿಸಲೇಬೇಕು

 ಪ್ರೋಟೀನ್ ಅಂದಾಕ್ಷಣ ಮೊದಲು ನೆನಪಾಗೋದು ಕೇವಲ ಬಾಡಿ ಬಿಲ್ಡಿಂಗ್ ಅಷ್ಟೇ. ಯಾಕಂದ್ರೆ ಉತ್ತಮ ಸ್ನಾಯು ಬೆಳವಣಿಗೆಗೆ ಪ್ರೋಟೀನ್ ಸೇವಿಸಬೇಕು ಎಂಬ ಮಾತನ್ನು ಆಗಾಗ ಕೇಳ್ತಾ ಇರುತ್ತೇವೆ. ಆದರೆ, ವಾಸ್ತವವಾಗಿ ಪ್ರೋಟೀನ್ ಪ್ರತಿಯೊಬ್ಬ ವ್ಯಕ್ತಿಗೂ ಅತ್ಯಗತ್ಯವಾಗಿದೆ. ನಾವು ವ್ಯಾಯಾಮ ಮಾಡಲಿ, ಮಾಡದಿರಲಿ ಉತ್ತಮ ಆರೋಗ್ಯಕ್ಕೆ ದೈನಂದಿನವಾಗಿ ಪ್ರೋಟೀನ್ ದೇಹದೊಳಕ್ಕೆ ಸೇರಲೇಬೇಕು. ಹಾಗಾದ್ರೆ ಒಬ್ಬ ಆರೋಗ್ಯವಂತ ವ್ಯಕ್ತಿಗೆ ಎಷ್ಟು ಪ್ರೋಟೀನ್ ಅಗತ್ಯವಿದೆ ಎಂಬ ಪ್ರಶ್ನೆ ಮೂಡದೇ ಇರದು. ಇದಕ್ಕೆ ಉತ್ತರ ನಾವಿಂದು ನೀಡಲಿದ್ದೇವೆ.

ಪ್ರೋಟೀನ್ ಎಂದರೇನು?: ಪ್ರೋಟೀನ್ಗಳು ನಿಮ್ಮ ದೇಹದ ಮುಖ್ಯ ಬಿಲ್ಡಿಂಗ್ ಬ್ಲಾಕ್ಸ್ ಆಗಿವೆ. ಇದು ಅಮೈನೋ ಆಮ್ಲಗಳನ್ನು ಒಳಗೊಂಡಿರುವ ಒಂದು ರಚನಾತ್ಮಕ ಅಣುವಾಗಿದ್ದು, ಇವುಗಳಲ್ಲಿ ಕೆಲವನ್ನು ನಿಮ್ಮ ದೇಹ ಉತ್ಪಾದಿಸುತ್ತದೆ. ಆದರೆ, ಸಂಪೂರ್ಣವಾಗಿ ಪಡೆಯಲು ಕೆಲವೊಂದು ಆಹಾರಗಳ ಮೊರೆಹೋಗಬೇಕಾಗುತ್ತದೆ. ಅದಕ್ಕಾಗಿಯೇ ಪ್ರತಿದಿನ ಮಾಂಸ, ಮೀನು, ಮೊಟ್ಟೆ ಅಥವಾ ಡೈರಿಗಳಂತಹ ಪ್ರಾಣಿ ಮೂಲ ಉತ್ಪನ್ನಗಳನ್ನು ತಿನ್ನಲು ಶಿಫಾರಸ್ಸು ಮಾಡುವುದು. ಇದರಿಂದ ಸಾಕಷ್ಟು ಪ್ರೋಟೀನ್ ಪಡೆಯಬಹುದು. ಆದರೆ ನೀವು ಸಸ್ಯಹಾರಿಯಾಗಿದ್ದರೆ, ನಿಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಪ್ರೋಟೀನ್ ಮತ್ತು ಅಗತ್ಯವಾದ ಅಮೈನೋ ಆಮ್ಲಗಳನ್ನು ಪಡೆಯುವುದು ಹೆಚ್ಚು ಸವಾಲಿನ ಸಂಗತಿಯಾಗಿದೆ. ಅದಕ್ಕಾಗಿ ನೀವು ಅಂತಹ ಆಹಾರಗಳ ಬಗ್ಗೆ ತಿಳಿದಿರಬೇಕು.

ಪ್ರೋಟೀನ್ ಸೇವನೆಯ ಪ್ರಯೋಜನಗಳೇನು?: ತೂಕ ನಷ್ಟಕ್ಕೆ ಸಹಕಾರಿ ಪ್ರೋಟೀನ್ ಸೇವನೆಯು ನಿಮ್ಮ ಚಯಾಪಚಯ ದರವನ್ನು ಹೆಚ್ಚಿಸುತ್ತದೆ, ಜೊತೆಗೆ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ ಎಂದು ಅನೇಕ ಸಂಶೋಧನೆಗಳು ತಿಳಿಸಿವೆ. ಕೊಬ್ಬು ಅಥವಾ ಕಾರ್ಬೋಹೈಡ್ರೇಟ್‌ಗಳಿಗಿಂತ ಪ್ರೋಟೀನ್ ಸೇವನೆ ಉತ್ತಮವಾಗಿದ್ದು, ಅದು ನಿಮ್ಮ ಹೆಚ್ಚು ಕಾಲ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಈ ಮೂಲಕ ನೀವು ಆಗಾಗ ಆಹಾರ ಸೇವನೆ ಮಾಡುವುದನ್ನ ಕಡಿತಗೊಳಿಸಿ, ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

ಉತ್ತಮ ಸ್ನಾಯುವಿಗೆ ಬೇಕು ಪ್ರೋಟೀನ್ ನೀವು ಜಿಮ್ ಹೋಗುವ ವ್ಯಕ್ತಿಗಳು ಪ್ರೋಟೀನ್ ಬಗ್ಗೆ ಮಾತನಾಡುವುದನ್ನು ಕೇಳಿರಬೇಕು. ಉತ್ತಮ ಸ್ನಾಯುಗಳ ಬೆಳವಣಿಗೆಗೆ ಪ್ರೋಟೀನ್ ಅತ್ಯಗತ್ಯವಾಗಿದೆ. ಸ್ನಾಯುಗಳು ಹೆಚ್ಚಾಗಿ ಪ್ರೋಟೀನ್‌ನಿಂದ ಮಾಡಲ್ಪಟ್ಟಿದೆ. ಪ್ರೋಟೀನ್ ಸ್ನಾಯುವನ್ನು ಬೆಳೆಸುವುದಲ್ಲದೇ, ನಿಮಗೆ ಶಕ್ತಿ ನೀಡುತ್ತದೆ. ಅದಕ್ಕಾಗಿಯೇ ಸ್ನಾಯುಗಳನ್ನು ನಿರ್ಮಿಸಲು ಬಯಸುವ ಜನರು ಹೆಚ್ಚಾಗಿ ಪ್ರೋಟೀನ್ ತಿನ್ನುತ್ತಾರೆ, ಜೊತೆಗೆ ವ್ಯಾಯಾಮ ಮಾಡುತ್ತಾರೆ. ಹೆಚ್ಚಿನ ಪ್ರೋಟೀನ್ ಸೇವನೆಯು ಸ್ನಾಯು ಮತ್ತು ಶಕ್ತಿಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

ಗರ್ಭಾವಸ್ಥೆಯಲ್ಲಿ ಪ್ರೋಟೀನ್ ಗರ್ಭಾವಸ್ಥೆಯಲ್ಲಿ, ಅಂಗಾಂಶಗಳ ಬೆಳವಣಿಗೆಗೆ ದೇಹಕ್ಕೆ ಹೆಚ್ಚಿನ ಪ್ರೋಟೀನ್ ಅಗತ್ಯವಿರುತ್ತದೆ. ಪ್ರೋಟೀನ್ ತಾಯಿ ಮತ್ತು ಮಗುವಿಗೆ ಪ್ರಯೋಜನವನ್ನು ನೀಡುತ್ತದೆ. ಒಂದು ಅಧ್ಯಯನದ ಪ್ರಕಾರ, ಗರ್ಭಾವಸ್ಥೆಯಲ್ಲಿ ಪ್ರತಿದಿನ ಕೆಜಿಗೆ 1.2-1.52 ಗ್ರಾಂ ಪ್ರೋಟೀನ್ ಸೇವಿಸುವಂತೆ ಹೇಳಿದ್ದಾರೆ. ಅಷ್ಟೇ ಅಲ್ಲ, ಹಾಲುಣಿಸುವ ಸಮಯದಲ್ಲೂ, ತಾಯಿಗೆ ಪ್ರೋಟೀನ್ ಸೇವನೆಯ ಅಗತ್ಯವಿದೆ.

ಪ್ರೋಟೀನ್ ಅಗತ್ಯಗಳನ್ನು ಹೆಚ್ಚಿಸುವ ಇತರ ಸಂದರ್ಭಗಳು ಸ್ನಾಯು ಬೆಳವಣಿಗೆ ಮತ್ತು ಮೈಕಟ್ಟು ಗುರಿಗಳ ಹೊರತಾಗಿಯೂ, ದೈಹಿಕವಾಗಿ ಸಕ್ರಿಯವಾಗಿರುವವರಿಗೆ ಕುಳಿತುಕೊಳ್ಳುವವರಿಗಿಂತ ಹೆಚ್ಚಿನ ಪ್ರೋಟೀನ್ ಅಗತ್ಯವಿರುತ್ತದೆ. ನಿಮ್ಮ ಕೆಲಸಕ್ಕೆ ದೈಹಿಕ ಶ್ರಮದಿಂದ ಕೂಡಿದ್ದರೆ, ಹೆಚ್ಚು ನಡೆಯುತ್ತಿದ್ದರೆ, ಓಡುತ್ತಿದ್ದರೆ, ಈಜುತ್ತಿದ್ದರೆ ಅಥವಾ ಯಾವುದೇ ರೀತಿಯ ವ್ಯಾಯಾಮ ಮಾಡಿದರೂ, ಹೆಚ್ಚು ಪ್ರೋಟೀನ್ ಸೇವಿಸಲೇಬೇಕು. ಅದರಲ್ಲೂ ಕ್ರೀಡಾಪಟುಗಳಿಗೆ ಗಮನಾರ್ಹ ಪ್ರಮಾಣದ ಪ್ರೋಟೀನ್ ಅಗತ್ಯವಿರುತ್ತದೆ, ಅಂದರೆ ಸುಮಾರು ಪ್ರತಿ ಕೆಜಿಗೆ 1.2-1.4 ಗ್ರಾಂ ಪ್ರೋಟೀನ್ ಪ್ರತಿದಿನ ಬೇಕಾಗಬಹುದು.

ಪ್ರೋಟೀನ್ ಯಾವುದೇ ಋಣಾತ್ಮಕ ಆರೋಗ್ಯ ಪರಿಣಾಮಗಳನ್ನು ಹೊಂದಿದೆಯೇ? ಸಾಮಾನ್ಯವಾಗಿ ಪ್ರೋಟೀನ್ ಸೇವನೆಯಿಂದ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ. ಆದರೆ, ಇದಕ್ಕೆ ಯಾವುದೇ ಪುರಾವೆಗಳಿಲ್ಲ. ಈಗಾಗಲೇ ಕಿಡ್ನಿ ಸಮಸ್ಯೆ ಇರುವವರಿಗೆ ಇದರ ಕಡಿಮೆ ಸೇವನೆ ಸಹಕಾರಿ. ಆದರೆ, ಆರೋಗ್ಯವಂತ ವ್ಯಕ್ತಿಯಲ್ಲಿ ಮೂತ್ರಪಿಂಡ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂಬ ವಾದಕ್ಕೆ ಯಾವುದೇ ಸಾಕ್ಷಿ ಸಿಕ್ಕಿಲ್ಲ. 

ವಾಸ್ತವವಾಗಿ, ಹೆಚ್ಚಿನ ಪ್ರೋಟೀನ್ ಸೇವನೆಯು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮಧುಮೇಹದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ, ಇದು ಮೂತ್ರಪಿಂಡದ ಕಾಯಿಲೆಗೆ ಎರಡು ಪ್ರಮುಖ ಅಪಾಯಕಾರಿ ಅಂಶಗಳಾಗಿವೆ ಎಂಬುದನ್ನು ಗಮನಿಸಬೇಕು. ಜೊತೆಗೆ ಮೂಳೆಗಳ ಆರೋಗ್ಯಕ್ಕೆ ಸಹಕಾರಿ ಎಂದು ಅಧ್ಯಯನಗಳು ಹೇಳುತ್ತವೆ. ಒಟ್ಟಾರೆಯಾಗಿ, ತಮ್ಮ ಆರೋಗ್ಯವನ್ನು ಉತ್ತಮಗೊಳಿಸಲು ಪ್ರಯತ್ನಿಸುತ್ತಿರುವ ಆರೋಗ್ಯವಂತ ಜನರಲ್ಲಿ ಪ್ರೋಟೀನ್ ಸೇವನೆಯು ಯಾವುದೇ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.

ಒಬ್ಬ ವ್ಯಕ್ತಿಗೆ ಸರಾಸರಿ ಎಷ್ಟು ಪ್ರೋಟೀನ್ ಅಗತ್ಯವಿದೆ? ನೀವು ಆರೋಗ್ಯಕರ ತೂಕದಲ್ಲಿದ್ದರೆ, ಯಾವುದೇ ವ್ಯಾಯಾಮ ಮಾಡದೇ ಇದ್ದರೆ, ಕೆಜಿಗೆ 0.8-1.3 ಗ್ರಾಂ ಪ್ರೋಟೀನ್ ಸೇವಿಸುವುದು ಉತ್ತಮ ಆಯ್ಕೆ. ಆರೋಗ್ಯಕರ ಪುರುಷನಿಗೆ ದಿನಕ್ಕೆ 56-91 ಗ್ರಾಂ ಆರೋಗ್ಯಕರ ಮಹಿಳೆಗೆ ದಿನಕ್ಕೆ 46-75 ಗ್ರಾಂ

ಆಹಾರದಿಂದ ಸಾಕಷ್ಟು ಪ್ರೋಟೀನ್ ಪಡೆಯುವುದು ಹೇಗೆ?: ಪ್ರೋಟೀನ್‌ನ ಉತ್ತಮ ಮೂಲಗಳೆಂದರೆ, ಮಾಂಸ, ಮೀನು, ಮೊಟ್ಟೆ ಮತ್ತು ಡೈರಿ ಉತ್ಪನ್ನಗಳು, ಏಕೆಂದರೆ ಅವುಗಳು ನಿಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಅಮೈನೋ ಆಮ್ಲಗಳನ್ನು ಹೊಂದಿರುತ್ತವೆ. ದ್ವಿದಳ ಧಾನ್ಯಗಳು ಮತ್ತು ಬೀಜಗಳಲ್ಲೂ ಪ್ರೋಟೀನ್‌ ಹೆಚ್ಚಾಗಿರುತ್ತದೆ. 

ನಿಮ್ಮ ದೈನಂದಿನ ಪ್ರೋಟೀನ್ ಅಗತ್ಯವನ್ನು ಪೂರೈಸಲು ಈ ಆಹಾರಗಳು ಸಹಾಯ ಮಾಡುತ್ತವೆ. ಅವುಗಳೆಂದರೆ:

ಮೊಟ್ಟೆ ಮೊಟ್ಟೆ ಅತಿ ಹೆಚ್ಚಿನ ಪ್ರೋಟಿನ್ ಅಂಶವನ್ನು ಹೊಂದಿರುವ ಆಹಾರ ಪದಾರ್ಥವಾಗಿದೆ. ಇದರ ಜೊತೆಗೆ ವಿಟಮಿನ್ ಅಂಶಗಳು, ಖನಿಜಾಂಶಗಳು, ಕಣ್ಣುಗಳಿಗೆ ಸಹಕಾರಿ ಆಗಿರುವ ಆಂಟಿ - ಆಕ್ಸಿಡೆಂಟ್ ಅಂಶಗಳು ಮತ್ತು ದೇಹಕ್ಕೆ ಅಗತ್ಯ ಇರುವ ಆರೋಗ್ಯಕರ ಕೊಬ್ಬಿನ ಅಂಶಗಳು ಮೊಟ್ಟೆಯಲ್ಲಿವೆ. ಹಾಗಾಗಿ ನಮ್ಮ ಆಹಾರದಲ್ಲಿ ಒಂದು ಮೊಟ್ಟೆಯನ್ನು ಪ್ರತಿ ದಿನವೂ ಸೇವಿಸಬೇಕು.

​ಮೊಸರು ಇದೊಂದು ಡೈರಿ ಉತ್ಪನ್ನವಾಗಿದ್ದು, ಇದರಲ್ಲಿ ಅಪಾರ ಪ್ರಮಾಣದ ಪೌಷ್ಟಿಕ ಸತ್ವಗಳು ಅಡಗಿವೆ

​ಬೇಳೆ ಕಾಳು ಮೊಟ್ಟೆ ಸೇವಿಸಲು ಬಯಸದವರು ಇವುಗಳ ಮೊರೆಹೋಗಬಹುದು. ಎಲ್ಲಾ ಬಗೆಯ ಬೇಳೆಗಳಲ್ಲಿ ಕೇವಲ ಪ್ರೋಟಿನ್ ಅಂಶ ಮಾತ್ರ ಇರದೇ, ಖನಿಜಾಂಶಗಳು ಜೊತೆಗೆ ಇನ್ನಿತರ ಪೌಷ್ಟಿಕ ಸತ್ವಗಳಾದ ನಾರಿನ ಅಂಶ, ಕಬ್ಬಿಣ, ಮ್ಯಾಂಗನೀಸ್, ಪೊಟಾಷಿಯಂ, ಪಾಸ್ಪರಸ್ ಮತ್ತು ವಿಟಮಿನ್ ' ಬಿ ' ಅಂಶ ಹೆಚ್ಚಾಗಿರುತ್ತದೆ.

ಆಲೂಗಡ್ಡೆ ಆಲೂಗಡ್ಡೆಯನ್ನು ಬೇಯಿಸಿ ಮ್ಯಾಶ್ ಮಾಡಿ ಸೇವಿಸುವುದರಿಂದ ತುಂಬಾ ಹೆಚ್ಚಿನ ಪ್ರಮಾಣದ ಪ್ರೊಟೀನ್ ಮತ್ತು ಕಾರ್ಬೋಹೈಡ್ರೇಟ್ ಅಂಶಗಳು ನಿಮ್ಮ ದೇಹಕ್ಕೆ ಸಿಗುತ್ತದೆ. ಆದರೆ ಆಲೂಗಡ್ಡೆಯಲ್ಲಿ ಕ್ಯಾಲೊರಿ ಅಂಶಗಳು ಹೆಚ್ಚಿರುವ ಕಾರಣ ಮಿತವಾಗಿ ಸೇವಿಸಬೇಕು.

ಹಾಲು ಹಾಲಿನಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿದ್ದು ಪ್ರೋಟೀನ್ ಅಂಶ ಕೂಡ ಸಾಕಷ್ಟಿದೆ. ಆದ್ದರಿಂದ ಪ್ರೋಟೀನ್ ಪಡೆಯಲು ಹಾಲು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ.

ಚಿಕನ್ ಎಲ್ಲರಿಗೂ ತಿಳಿದಿರುವಂತೆ ಚಿಕನ್‌ನಲ್ಲಿ ಸಾಕಷ್ಟು ಪ್ರೋಟೀನ್ ಇದ್ದು, ಮಾಂಸಹಾರಿಗಳು ತಮ್ಮ ಆಹಾರ ಪದ್ಧತಿಯಲ್ಲಿ ನಿಯಮಿತವಾದ ಚಿಕನ್ ಸೇವನೆ ಇಟ್ಟುಕೊಳ್ಳುವುದು ತುಂಬಾ ಒಳ್ಳೆಯದು.





Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries