ಕಾಸರಗೋಡು: ಜಿಲ್ಲೆಯಲ್ಲಿ ಅಕ್ರಮ ಮೀನುಗಾರಿಕೆಯನ್ನು ತಡೆಗಟ್ಟಲು ಮೀನುಗಾರಿಕೆ ಇಲಾಖೆಯು ಪ್ರತ್ಯೇಕ ಸಮಿತಿಯನ್ನು ರಚಿಸಿದೆ. ಕಾಂಜಂಗಾಡ್, ತೃಕರಿಪ್ಪೂರ್ ರಾಜಪುರಂ ಮೀನುಗಾರಿಕಾಭವನಗಳ ನೇತೃತ್ವದಲ್ಲಿ ಫಿಶರೀಸ್ ಎಕ್ಸ್‍ಟೆನ್ಷನ್ ಅಧಿಕಾರಿ ಎಂ ಎಫ್ ಪೆÇೀಲ್ ಸಮಿತಿ ಮುನ್ನಡೆಸಲಿದ್ದಾರೆ. ಸಮಿತಿಯಲ್ಲಿ ಸಹಾಯಕ ಫಿಶರೀಸ್ ಕಾರ್ಯನಿರ್ವಾಹಕ ಅಧಿಕಾರಿಗಳು ಅಲಾವುದ್ದೀನ್, ಪ್ರಾಜೆಕ್ಟ್ ಕೋ ಆರ್ಡಿನೇಟರ್‍ಗಳಾದ ವಿ ಅಶ್ವಿನ್ ಕೃಷ್ಣನ್, ಐಪಿ ಆದಿರ, ಕೆ ವೀಣಾ ಸದಸ್ಯರಾಗಿ ಸಹಕರಿಸಲಿದ್ದಾರೆ. ಕಾಸರಗೋಡು, ಕುತ್ತಿಕೋಲ್, ಕುಂಬಳೆ ಮೀನುಗಾರಿಕಾ ಭವನಗಳ ನೇತೃತ್ವವನ್ನು ಫಿಷರೀಸ್ ಎಕ್ಸ್‍ಟನ್ ಅಧಿಕಾರಿ ಜಿ ಅನಿಲ್ ಕುಮಾರ್ ವಹಿಸುವರು. ಸಹಾಯಕ ಫಿಷರೀಸ್ ಎಕ್ಸ್‍ಟನ್ಷನ್ ಆಫೀಸರ್‍ಗಳಾದ ಎ ಶಿಜು, ಎಸ್ ಎಸ್ ಎಸ್ ಸೋಫಿಯಾ, ಪೆÇ್ರಜೆಕ್ಟ್ ಕೋ ಆರ್ಡಿನೇಟರ್ ಲಕ್ಷ್ಮಿಕುಟ್ಟಿ, ಪಿ ಸ್ವಾತಿ ಲಕ್ಷ್ಮಿ, ಕೆ ಅವಿನಾಶ್ ಮುಂತಾದವರು ಸದಸ್ಯರಾಗಿ ಸಹಕರಿಸಲಿದ್ದಾರೆ.
ಕಿರುರಂಧ್ರವುಳ್ಳ ಬಲೆಗಳು, ಗೂಡುಗಳು ಹಾಗೂ ಇತರ ಉಪಕರಣಗಳನ್ನು ಬಳಸಿ ಮೀನು ಹಿಡಿಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಸಂಪೂರ್ಣ ಬೆಳವಣಿಗೆ ಹೊಂದದ ಮೀನುಗಳ ಹಿಡಿಯುವುದು, ಮಾರಾಟ ಮಾಡುವುದು ಗಮನಕ್ಕೆ ಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಫಿಷರೀಸ್, ರೆವನ್ಯೂ, ಪೆÇಲೀಸ್ ಅಧಿಕಾರಿಗಳು ಸ್ಥಳೀಯ ಸಂಸ್ಥೆಗಳಿಗೂ ಇದೇ ಕ್ರಮ ಸ್ವೀಕರಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಫಿಶರೀಸ್ ಇಲಾಖೆ ನೇತೃತ್ವದಲ್ಲಿ ಜಿಲ್ಲೆಯಲ್ಲಿ ತಪಾಸಣೆ ಚುರುಕುಗೊಳಿಸಲಾಗುವುದು ಎಂದು ಮೀನುಗಾರಿಕಾ ಇಲಾಖೆ ನಿರ್ದೇಶಕ ಪಿ ವಿ ಸತೀಶನ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಅಕ್ರಮ ಮೀನುಗಾರಿಕೆ ನಡೆಯುವುದು ಗಮನಕ್ಕೆ ಬಂದಲ್ಲಿ ಮೀನುಗಾರಿಕಾ ಇಲಾಖೆಯ ದೂರವಾಣಿ ಸಂಖ್ಯೆ(9947625185,7356114237)ಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.