HEALTH TIPS

ನರೇಗಾ ನಿಧಿ ದುರುಪಯೋಗ: ವಿವಿಧೆಡೆ ಇ.ಡಿ ದಾಳಿ

             ನವದೆಹಲಿ/ರಾಂಚಿ: 2008-11ರ ಸಾಲಿನಲ್ಲಿ ಜಾರ್ಖಂಡ್‌ನ ಕುಂತಿ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ(ಎಂಜಿ-ನರೇಗಾ) ಯೋಜನೆಯ ₹18 ಕೋಟಿ ಹಣ ದುರುಪಯೋಗದ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ಜಾರ್ಖಂಡ್ ಗಣಿಗಾರಿಕೆ ಕಾರ್ಯದರ್ಶಿ ಪೂಜಾ ಸಿಂಘಲ್ ಹಾಗೂ ಆಕೆಯ ಕುಟುಂಬ ಸದಸ್ಯರಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ(ಇ.ಡಿ) ದಾಳಿ ನಡೆಸಿದೆ.

           ಈ ವೇಳೆ ₹18 ಕೋಟಿಗೂ ಹೆಚ್ಚು ಹಣ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಕಾಯ್ದೆಯಡಿ ಇ.ಡಿ ಅಧಿಕಾರಿಗಳು ಶುಕ್ರವಾರ ಏಕಕಾಲದಲ್ಲಿ ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ, ದೆಹಲಿ, ಪಂಜಾಬ್ ಮತ್ತು ಇತರೆ ರಾಜ್ಯಗಳಲ್ಲಿ ದಾಳಿ ನಡೆಸಿದ್ದರು.

           ಜಾರ್ಖಂಡ್ ರಾಜಧಾನಿ ರಾಂಚಿ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಗೆ ಸೇರಿದ ಸ್ಥಳಗಳಲ್ಲಿ ₹17 ಕೋಟಿಗಿಂತ ಹೆಚ್ಚು ನಗದು ಹಾಗೂ ಇದೇ ನಗರದ ಇತರ ಸ್ಥಳಗಳಿಂದ ₹1.8 ಕೋಟಿ ಪತ್ತೆಯಾಗಿದೆ ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.

           ಶುಕ್ರವಾರದ ಇ.ಡಿ ದಾಳಿಯು 2020ರ ಜೂನ್ 17ರಂದು ಪಶ್ಚಿಮ ಬಂಗಾಳದ ನಾರ್ತ್ ಪರಗಣಸ್ ಜಿಲ್ಲೆಯಿಂದ ಬಂಧನಕ್ಕೊಳಗಾಗಿದ್ದ ಜಾರ್ಖಂಡ್ ಜೂನಿಯರ್ ಎಂಜಿನಿಯರ್ ರಾಮ್ ಬಿನೋದ್ ಪ್ರಸಾದ್ ಸಿನ್ಹಾ ಅವರು ಭಾಗಿಯಾಗಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ. ಸಿನ್ಹಾ ಅವರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು, ದಾಖಲೆಗಳನ್ನು ನಕಲಿ ಮಾಡಿ ಸರ್ಕಾರದ ₹18.06 ಕೋಟಿ ಹಣವನ್ನು ದುರುಪಯೋಗ ಮಾಡಿದ್ದರು ಎಂದು ಆರೋಪಿಸಿ ಜಾರ್ಖಂಡ್ ವಿಚಕ್ಷಣ ದಳ ಆರೋಪಿಸಿತ್ತು. ಅಲ್ಲದೆ ಈ ಸಂಬಂಧ ವಿಚಕ್ಷಣ ದಳವು 16 ಪ್ರಕರಣಗಳು ಮತ್ತು ದೋಷಾರೋಪಪಟ್ಟಿಗಳನ್ನು ಸಲ್ಲಿಸಿತ್ತು. ಇದರ ಆಧಾರದಲ್ಲಿ ಸಿನ್ಹಾ ಅವರನ್ನು ಇ.ಡಿ ಬಂಧಿಸಿತ್ತು. ಅಲ್ಲದೆ ಅವರ ₹4.28 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries