ಕಾಸರಗೋಡು: ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸಮೀಪವಿರುವ ಶ್ರೀ ನಾಗರಾಜ ಕಟ್ಟೆಯ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಬುಧವಾರ ಜರುಗಿತು. ತಂತ್ರಿವರ್ಯ ವೇದಮೂರ್ತಿ ಸುಖಾನಂದ ಭಟ್ ಮಂಜೇಶ್ವರ ಹಾಗೂ ಬ್ರಹ್ಮಶ್ರೀ ಉಳಿಯ ವಿಷ್ಣು ಅಸ್ರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಪ್ರಾರ್ಥನೆ, ಗಣಹೋಮ, ಅಶ್ವಥ ಪೂಜೆ, ಪಂಚಾಮರ್ಥ ಅಭಿಷೇಕ, ನವಕಲಶಾಭಿಷೇಕ, ಪವಮಾನ ಅಭಿಷೇಕ, ಶ್ರೀ ಗುಳಿಗ ತಂಬಿಲ, ಆಶ್ಲೇಷ ಬಲಿ, ಮಹಾಪೂಜೆ ನಡೆಯಿತು.