ನವದೆಹಲಿ: ನಿರ್ಮಾಣ ಕ್ಷೇತ್ರದ ಪ್ರಮುಖ ಸಂಸ್ಥೆ ಎಲ್ ಆಯಂಡ್ ಟಿ, ಬುಲೆಟ್ ರೈಲು ಯೋಜನೆಯೊಂದನ್ನು ಗುತ್ತಿಗೆ ಪಡೆದುಕೊಂಡಿರುವುದಾಗಿ ಗುರುವಾರ ಹೇಳಿದೆ.
ನವದೆಹಲಿ: ನಿರ್ಮಾಣ ಕ್ಷೇತ್ರದ ಪ್ರಮುಖ ಸಂಸ್ಥೆ ಎಲ್ ಆಯಂಡ್ ಟಿ, ಬುಲೆಟ್ ರೈಲು ಯೋಜನೆಯೊಂದನ್ನು ಗುತ್ತಿಗೆ ಪಡೆದುಕೊಂಡಿರುವುದಾಗಿ ಗುರುವಾರ ಹೇಳಿದೆ.
ನ್ಯಾಷನಲ್ ಹೈ-ಸ್ಪೀಡ್ ರೈಲ್ ಕಾರ್ಪೊರೇಶನ್ ಲಿ. (ಎನ್‌ಎಚ್‌ಎಸ್‌ಆರ್‌ಸಿಎಲ್) ಯೋಜನೆಯೊಂದು ಗುತ್ತಿಗೆಯಲ್ಲಿ ಎಲ್ ಆಯಂಡ್ ಟಿ ಸಂಸ್ಥೆಗೆ ದೊರೆತಿದೆ.
ಎಲ್ ಆಯಂಡ್ ಟಿ ಕನ್‌ಸ್ಟ್ರಕ್ಷನ್ಸ್ ಸಂಸ್ಥೆಯ ರೈಲ್ವೆ ಉದ್ಯಮ ವಿಭಾಗ, ಹೊಸ ಟೆಂಡರ್ ಪಡೆದಿದ್ದು, ಅದರನ್ವಯ ಮುಂಬೈ-ಅಹಮದಾಬಾದ್ ನಡುವಣ ಹೈ-ಸ್ಪೀಡ್ ರೈಲು ಯೋಜನೆಗೆ 116 ಕಿ.ಮೀ. ಟ್ರ್ಯಾಕ್ ನಿರ್ಮಿಸಿಕೊಡಲಿದೆ.
ನೂತನ ತಂತ್ರಜ್ಞಾನ ಬಳಸಿ, ಜಪಾನ್ ಮೂಲದ ಶಿಂಕಾನ್‌ಸೆನ್ ಟ್ರ್ಯಾಕ್ ಟೆಕ್ನಾಲಜಿಯ ಆಧಾರದಲ್ಲಿ ಹೊಸ ರೈಲ್ವೆ ಟ್ರ್ಯಾಕ್ ನಿರ್ಮಾಣವಾಗಲಿದೆ.
ಹೊಸ ಟ್ರ್ಯಾಕ್ ನಿರ್ಮಾಣ ಪೂರ್ಣಗೊಂಡ ಬಳಿಕ ಬುಲೆಟ್ ಟ್ರೈನ್ ಗಂಟೆಗೆ 320 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ ಎಂದು ಕಂಪನಿ ಹೇಳಿದೆ.