HEALTH TIPS

ಭಾರತದಲ್ಲಿ ಕೊರೋನಾ ಒಮಿಕ್ರಾನ್ XE ರೂಪಾಂತರಿಯ ಮೊದಲ ಪ್ರಕರಣ ಪತ್ತೆ

        ನವದೆಹಲಿ: ದೇಶದಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಹೆಚ್ಚಳದ ಮಧ್ಯೆ, ಭಾರತದಲ್ಲಿ ಒಮಿಕ್ರಾನ್ ಎಕ್ಸ್ ಇ ರೂಪಾಂತರಿಯ ಮೊದಲ ಪ್ರಕರಣ ಪತ್ತೆಯಾಗಿದೆ ಮತ್ತು ಇದು ಒಮಿಕ್ರಾನ್ ಗಿಂತ ಶೇ. 10 ಹೆಚ್ಚು ಹರಡುತ್ತದೆ ಎಂದು ಐಎನ್‌ಎಸ್‌ಎಸಿಒಜಿ (ಇಂಡಿಯಾ ಸಾರ್ಸ್‌ ಕೋವ್‌ –2 ಜೆನೋಮಿಕ್‌ ಕನ್ಸೋರ್ಟಿಯಂ) ದೃಢಪಡಿಸಿದೆ.

            ಇದು ಓಮಿಕ್ರಾನ್ ನ BA.1 ಮತ್ತು BA.2 ಉಪ ವಂಶಾವಳಿಗಳ ಮರುಸಂಯೋಜಕವಾಗಿದ್ದು, ಮಹಾರಾಷ್ಟ್ರ, ಗುಜರಾತ್ ಮತ್ತು ಕೇರಳದಲ್ಲಿ ಒಮಿಕ್ರಾನ್ ಎಕ್ಸ್ ಇ ಪ್ರಕರಣ ವರದಿಯಾಗಿದೆ ಎಂದು ಐಎನ್‌ಎಸ್‌ಎಸಿಒಜಿ ಹೇಳಿದೆ. ಈ ಹೊಸ ರೂಪಾಂತರಿ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯವು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

           ಏಪ್ರಿಲ್ 25 ರ ಬುಲೆಟಿನ್ ನಲ್ಲಿ, ಭಾರತದಲ್ಲಿ ಒಂದು XE ರೂಪಾಂತರಿ ವರದಿಯಾಗಿದೆ ಎಂದು ಐಎನ್‌ಎಸ್‌ಎಸಿಒಜಿ ಹೇಳಿದೆ. ಆದಾಗ್ಯೂ ಈ ಮರುಸಂಯೋಜಕ ರೂಪಾಂತರಿ ಯಾವ ರಾಜ್ಯದಿಂದ ವರದಿಯಾಗಿದೆ ಎಂಬುದರ ಬಗ್ಗೆ ನಿರ್ದಿಷ್ಟವಾಗಿ ಹೇಳಿಲ್ಲ.

           ಈ ಹಿಂದೆ ಮಹಾರಾಷ್ಟ್ರ ಮತ್ತು ಗುಜಾರಾತ್ ನಲ್ಲಿ ಎಕ್ಸ್ ಇ ರೂಪಾಂತರಿ ಪತ್ತೆಯಾಗಿದೆ ಎಂದು ವರದಿಯಾಗಿತ್ತು. ಆದರೆ INSACOG ಪ್ರಯೋಗಾಲಯ ಇದನ್ನು ದೃಢಪಡಿಸಿರಲಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries