ಮುಳ್ಳೇರಿಯ: ಬೆಂಗಳೂರಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಾಸರಗೋಡು ಜಿಲ್ಲಾ ಘಟಕ, ಕಾಸರಗೋಡು ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡಮಿ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಕನ್ನಡ ಪತ್ರಿಕಾ ದಿನಾಚರಣೆ, ಚಿಣ್ಣರ ಕಲರವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಇಂದು(ಜುಲೈ 1) ಬೆಳಗ್ಗೆ 11ಕ್ಕೆ ಮುಳ್ಳೇರಿಯದ ಗಣೇಶ ಕಲಾ ಮಂದಿರದಲ್ಲಿ ಜರಗಲಿದೆ.
ಕರ್ನಾಟಕ ವಿಧಾನಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಪ್ರಕಾಶ್ ರಾಥೋಡ ಸಮಾರಂಭ ಉದ್ಘಾಟಿಸುವರು. ಪತ್ರಕರ್ತರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಎ.ಆರ್ ಸುಬ್ಬಯ್ಯಕಟ್ಟೆ ಅಧ್ಯಕ್ಷತೆ ವಹಿಸುವರು. ಮಂಗಳೂರು ಕಲ್ಕೂರ ಪ್ರತಿಷ್ಠಾನದ ಪ್ರದೀಪ್‍ಕುಮಾರ್ ಕಲ್ಕೂರ ಪತ್ರಿಕಾದಿನ ಸಂದೇಶ ನೀಡುವರು. ಧಾರ್ಮಿಕ, ಸಆಮಾಜಿಕ ಮುಂದಾಳು ಕುಂಟಾರು ರವೀಶ ತಂತ್ರಿ, ಕೇರಳ ಹೈಕೋರ್ಟು ನಿವೃತ್ತ ರಿಜಿಸ್ಟ್ರಾರ್ ಸುಬ್ರಹ್ಮಣ್ಯ ಭಟ್ ಕರಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಸಂದರ್ಭ ಹಿರಿಯ ಜಾನಪದ ಹಾಡುಗಾರ ಗೋ.ನಾ.ಸ್ವಾಮಿ, ಸಾಹಿತಿ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಸಮಾಜಸೇವಕ ಶ್ರೀಧರ ಶೆಟ್ಟಿ ಮುಟ್ಟಂ, ಪತ್ರಿಕಾ ವಿತರಕ ಪೈಕೆ ಕೃಷ್ಣ ಭಟ್ ಮುಳ್ಳೇರಿಯ ಅವರನ್ನು ಸನ್ಮಾಣಿಸಲಾಗುವುದು.
ಈ ಸಂದರ್ಭ ನಡೆಯುವ ಚಿಣ್ಣರ ಕಲರವ ಕಾರ್ಯಕ್ರಮದಲ್ಲಿ ಸಂಧ್ಯಾಗೀತ ಬಾಯಾರು ಮತ್ತು ಅಖಿಲೇಶ್ ನಗುಮುಗಂ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.