ಸಿಮ್ಲಾ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆ ಅಡಿಯಲ್ಲಿ 10 ಕೋಟಿಗೂ ಅಧಿಕ ರೈತ ಫಲಾನುಭವಿಗಳಿಗೆ 21,000 ಕೋಟಿ ರೂ. ಮಂಗಳವಾರ ಬಿಡುಗಡೆ ಮಾಡಿದರು.
ಸಿಮ್ಲಾ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆ ಅಡಿಯಲ್ಲಿ 10 ಕೋಟಿಗೂ ಅಧಿಕ ರೈತ ಫಲಾನುಭವಿಗಳಿಗೆ 21,000 ಕೋಟಿ ರೂ. ಮಂಗಳವಾರ ಬಿಡುಗಡೆ ಮಾಡಿದರು.
ಮಂಗಳವಾರ ಬಿಡುಗಡೆ ಮಾಡಿರುವುದು ಪಿಎಂ-ಕಿಸಾನ್ ಯೋಜನೆಯ 11ನೇ ಕಂತು.
'ಗರೀಬ್ ಕಲ್ಯಾಣ ಸಮ್ಮೇಳನ'ದಲ್ಲಿ ಭಾಗವಹಿಸಲು ಪ್ರಧಾನಿ ಅವರು ಇಂದು ಶಿಮ್ಲಾಕ್ಕೆ ಆಗಮಿಸಿದರು. ಕೇಂದ್ರದ ಎನ್ಡಿಎ ಸರಕಾರದ 8ನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸರಕಾರದ ವಿವಿಧ ಯೋಜನೆಗಳ ಬಗ್ಗೆ ಅವರು ಫಲಾನುಭವಿಗಳೊಂದಿಗೆ ಸಂವಹನ ನಡೆಸಿದರು.
ಸಮ್ಮೇಳನದ ಸಂದರ್ಭ ಪ್ರಧಾನಿ ಅವರು ಸರಕಾರ ನಡೆಸುತ್ತಿರುವ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಕುರಿತು ದೇಶಾದ್ಯಂತದಿಂದ ಸಾರ್ವಜನಿಕ ಪ್ರತಿನಿಧಿಗಳ ಪ್ರತಿಕ್ರಿಯೆ ಕೋರಿದರು. ಸರಕಾರದ ಯೋಜನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ತಲುಪಿಸುವುದು ಈ ಕಾರ್ಯಕ್ರಮದ ಉದ್ದೇಶ. ಇದರಿಂದ ದೇಶದ ನಾಗರಿಕರ ಬದಕು ಸುಧಾರಿಸಲಿದೆ ಎಂದು ಅವರು ಹೇಳಿದ್ದಾರೆ.