ತಿರುಪತಿ: ನಾಲ್ಕು ದಿನಗಳ ಹಿಂದಷ್ಟೇ ತಿರುಪತಿ ತಿಮ್ಮಪ್ಪನ ದೇವಾಲಯ ಒಂದೇ ದಿನ 10 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿ ದಾಖಲೆ ಬರೆದಿತ್ತು.
ಹಲವು ಟ್ರಸ್ಟ್ಗಳಿಂದ ತಿಮ್ಮಪ್ಪನಿಗೆ ಕಾಣಿಕೆಯಾಗಿ ಒಂದೇ ದಿನದಲ್ಲಿ 10 ಕೋಟಿ ರೂ.
ಇದಾದ ನಾಲ್ಕೇ ದಿನಗಳಲ್ಲಿ ಒಬ್ಬಳೇ ಭಕ್ತಳಿಂದ ತಿಮ್ಮಪ್ಪನಿಗೆ 2.45 ಕೋಟಿ ರೂಪಾಯಿ ದೇಣಿಗೆ ಬಂದಿದೆ. ಚೆನ್ನೈನ ವೃದ್ಧೆ ಭಕ್ತೆ ಸರೋಜಾ ಸೂರ್ಯ ನಾರಾಯಣನ್ ಈ ದೇಣಿಗೆ ನೀಡಿದ್ದಾರೆ.
ಚಿನ್ನದ ಕಾಸುಲಾ ಹಾರ ಮತ್ತು ಯಜ್ಞೋಪವೀತವನ್ನು ಕಾಣಿಕೆಯಾಗಿ ಭಕ್ತೆ ಸರೋಜಾ ಅವರು ನೀಡಿದ್ದಾರೆ. ಇವರು ನೀಡಿರುವ ರತ್ನ ಖಚಿತ ಆಭರಣಗಳು 4.150 ಕೆಜಿ ತೂಕದ್ದಾಗಿದ್ದು, ಇದರ ಮೌಲ್ಯ 2.45 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.