HEALTH TIPS

100 ದಿನಗಳ ಮಣ್ಣು ರಕ್ಷಿಸಿ ಅಭಿಯಾನ ಸಮಾಪ್ತಿ: ದನಿಗೂಡಿಸಿದ್ರು 320 ಕೋಟಿ ಮಂದಿ

 ಕೊಯಮತ್ತೂರು: ಈಶ ಫೌಂಡೇಷನ್ ಸಂಸ್ಥಾಪಕ ಸದ್ಗುರು ಅವರು ಮಣ್ಣು ರಕ್ಷಣೆ ಸಲುವಾಗಿ ಹಮ್ಮಿಕೊಂಡಿದ್ದ ನೂರು ದಿನಗಳ ಜಾಗತಿಕ ಅಭಿಯಾನ ಸಮಾಪ್ತಿಗೊಂಡಿದೆ.

ಏಕಾಂಗಿಯಾಗಿ ಬೈಕ್​ನಲ್ಲಿ 27 ದೇಶ, ಭಾರತದ 11 ರಾಜ್ಯಗಳನ್ನು ಸುತ್ತಿ ಮಣ್ಣು ರಕ್ಷಣೆ ಕುರಿತು ಜಾಗೃತಿ ಮೂಡಿಸಿ ಬಂದಿರುವ ಸದ್ಗುರುವನ್ನು ನಿನ್ನೆ ಈಶ ಯೋಗ ಕೇಂದ್ರದಲ್ಲಿರುವ ಆದಿಯೋಗಿ ಸನ್ನಿಧಿಯಲ್ಲಿ ನೆರೆದ ಸಾವಿರಾರು ಜನರು ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು.


ಸಾಂಪ್ರದಾಯಿಕವಾದ ಆರತಿ, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ರಾತ್ರಿಯನ್ನು ಬೆಳಗಿದ ಪ್ರಜ್ವಲಿಸಿದ ದೀಪಗಳನ್ನು ಒಳಗೊಂಡಂತೆ ಸಾಂಪ್ರದಾಯಿಕ ಭಾರತೀಯ ಸ್ವಾಗತದೊಂದಿಗೆ ಸದ್ಗುರುಗಳು ತಮ್ಮ 30,000 ಕಿಮೀ ಬೈಕ್ ಪ್ರಯಾಣದಿಂದ ಮರಳಿದರು. ಕಳೆದ ಮೂರು ತಿಂಗಳಲ್ಲಿ ನಡೆದ ಈ ಮಣ್ಣು ಉಳಿಸಿ ಅಭಿಯಾನದಲ್ಲಿ 320 ಕೋಟಿ ಜನರು ಮಣ್ಣಿನ ಪರವಾಗಿ ಧ್ವನಿ ಎತ್ತಿದ್ದಾರೆ.

ಅಭಿಯಾನದ ಭವಿಷ್ಯದ ಬಗ್ಗೆ ಮಾತನಾಡಿದ ಸದ್ಗುರು, ಕಳೆದ 100 ದಿನಗಳಲ್ಲಿ 600ಕ್ಕೂ ಹೆಚ್ಚು ಮಣ್ಣು ಉಳಿಸಿ ಕಾರ್ಯಕ್ರಮಗಳನ್ನು ನಡೆಸುವುದರ ಜೊತೆಗೆ ಕೈಗೊಂಡ ಅಪಾಯಕಾರಿ ಬೈಕ್ ಪ್ರಯಾಣವನ್ನು ಉಲ್ಲೇಖಿಸುತ್ತ, ಅಪಾಯಕಾರಿ ಪ್ರಯಾಣವು ಮುಗಿದಿದೆ ಆದರೆ ನಿಜವಾದ ಕಠಿಣ ಕೆಲಸವು ಇಂದಿನಿಂದ ಪ್ರಾರಂಭವಾಗುತ್ತದೆ ಎಂದು ವಿವರಿಸಿದರು.

ಮುಂದಿನ ಕೆಲವು ತಿಂಗಳುಗಳಲ್ಲಿ ಮಣ್ಣನ್ನು ಸಂರಕ್ಷಿಸಲು ಮತ್ತು ಪುನರುಜ್ಜೀವನಗೊಳಿಸಲು ಸ್ಪಷ್ಟವಾದ ಕಾರ್ಯನೀತಿಗಳನ್ನು ಮಾಡಲು ಯುನೈಟೆಡ್ ಕಿಂಗ್‌ಡಮ್, ಉತ್ತರ-ದಕ್ಷಿಣ ಅಮೇರಿಕ ಮತ್ತು ಕೆರಿಬಿಯನ್ ರಾಷ್ಟ್ರಗಳು ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ರಾಷ್ಟ್ರಗಳಿಗೆ ಸದ್ಗುರು ಪ್ರಯಾಣಿಸಲಿದ್ದಾರೆ. ಮಣ್ಣು ಉಳಿಸುವ ನಿಟ್ಟಿನಲ್ಲಿ ಸಕಾರಾತ್ಮಕ ಮತ್ತು ಸನ್ನಿಹಿತವಾದ ಕ್ರಮದ ಬಗ್ಗೆ ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸುತ್ತ, ಇನ್ನು 12-18 ತಿಂಗಳುಗಳಲ್ಲಿ ಬಹಳಷ್ಟು ರಾಷ್ಟ್ರಗಳು, ಮಣ್ಣಿನ ಪುನರುಜ್ಜೀವನಕ್ಕೆ ಕಾರ್ಯನೀತಿಯನ್ನು ಮಾಡುವತ್ತ ಅವರನ್ನು ಒಪ್ಪಿಸಬಹುದು ಎಂದರು.

ಅಭಿಯಾನವು ಮಣ್ಣಿನ ಪುನಶ್ಚೇತನದಲ್ಲಿ ರಾಷ್ಟ್ರೀಯ ಕಾರ್ಯನೀತಿ ಬದಲಾವಣೆಗಳನ್ನು ಚಾಲನೆ ಮಾಡುವ ಮತ್ತು ಕೃಷಿ ಮಣ್ಣಿನಲ್ಲಿ ಕನಿಷ್ಠ ಶೇ. 3ರಿಂದ 6 ಜೈವಿಕ ಅಂಶವನ್ನು ಕಡ್ಡಾಯಗೊಳಿಸುವ ಗುರಿಯನ್ನು ಹೊಂದಿದೆ. ಇಂತಹ ಸುಧಾರಣೆಗಳನ್ನು ಕಾರ್ಯಗತಗೊಳಿಸುವಲ್ಲಿ ಜನರ ಧ್ವನಿಯು ಅತ್ಯಂತ ನಿರ್ಣಾಯಕ ಅಂಶವಾಗಿರುವುದರಿಂದ, ಈ ಅಭಿಯಾನದೊಂದಿಗೆ ನಿಲ್ಲಿಸದೆ ಮುಂದಿನ ಒಂದು ವರ್ಷ ಮಣ್ಣಿನ ಬಗ್ಗೆ ಮಾತನಾಡುವುದನ್ನು ಮುಂದುವರಿಸಲು ಸದ್ಗುರು ಜನರನ್ನು ಒತ್ತಾಯಿಸಿದರು. ಪ್ರಪಂಚಕ್ಕೆ ಅದರಲ್ಲೂ ಹೊಸಬರಿಗೆ, ಪ್ರತಿದಿನ ಕನಿಷ್ಠ 10 ನಿಮಿಷಗಳ ಕಾಲ ಮಣ್ಣಿನ ಬಗ್ಗೆ ಮಾತನಾಡಿ ಎಂದರು.

ಈಶ ಸ್ವಯಂಸೇವಕರನ್ನು ಅಭಿನಂದಿಸುತ್ತ ಸದ್ಗುರು ಟ್ವಿಟ್ಟರ್ ಸಂದೇಶವನ್ನು ಕೊಟ್ಟರು. 'ನಮ್ಮ ಕಾಲದ ಈ ಅಭಿಯಾನವನ್ನು ಯಶಸ್ವಿಯಾಗಿ ಸಡೆಸಲು ಅದ್ಭುತವಾದ ಸಮರ್ಪಣೆ ಮತ್ತು ಸಂಕಲ್ಪದಿಂದ ಪ್ರಪಂಚದಾದ್ಯಂತ ಒಟ್ಟುಗೂಡಿದ ಈಶ ತಂಡಕ್ಕೆ ಅಭಿನಂದನೆಗಳು ಮತ್ತು ಅಪಾರ ಕೃತಜ್ಞತೆಗಳು. ನಿಮ್ಮ ಪ್ರದೇಶಗಳಲ್ಲಿ ಮಣ್ಣಿನ ಪುನಶ್ಚೇತನಕ್ಕಾಗಿ ಕಾರ್ಯನೀತಿಗಳನ್ನು ಮಾಡುವವರೆಗೂ ಸಂಕಲ್ಪ ಉಳಿಸಿಕೊಳ್ಳಲು ನಾನು ಸಂಬಂಧಪಟ್ಟ ಎಲ್ಲರನ್ನೂ ಕೇಳಿಕೊಳ್ಳುತ್ತೇನೆ.' - ಸದ್ಗುರು

ನಿನ್ನೆಯ ದಿನ ತಮಿಳುನಾಡು ಪ್ರವೇಶಿಸಿದ ಸದ್ಗುರು, ಮಾರ್ಗದಲ್ಲಿ ಸೂಳೂರಿನ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರೊಂದಿಗೆ ಮಣ್ಣು ಉಳಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ವಾಯುಪಡೆಯ ಸಿಬ್ಬಂದಿಯನ್ನು ಒಳಗೊಂಡಿರುವ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪ್ರಪಂಚದಾದ್ಯಂತ ಜನರನ್ನು ಒಂದು ಪರಿಸರ ಅಭಿಯಾನದಲ್ಲಿ ಒಂದುಗೂಡಿಸುವ ಮೂಲಕ ವಸುಧೈವ ಕುಟುಂಬಕಮ್ ಎಂಬ ನಮ್ಮ ಸಂಸ್ಕೃತಿಯನ್ನು ಜೀವಂತಗೊಳಿಸಿದ ಕೀರ್ತಿ ಸದ್ಗುರುಗೆ ಸಲ್ಲುತ್ತದೆ ಎಂದು ಶ್ಲಾಘಿಸಿದರು. ಕೇವಲ 60 ವರ್ಷಗಳಲ್ಲಿ ನಶಿಸಿಹೋಗಲಿರುವ ಫಲವತ್ತಾದ ಮೇಲ್ಮಣ್ಣಿನ ಬಗ್ಗೆ ಕಳವಳ ವ್ಯಕ್ತಪಡಿಸಿದ ರಕ್ಷಣಾ ಸಚಿವರು, ಮಣ್ಣು ಉಳಿಸಿ ಅಭಿಯಾನವು ಭರವಸೆಯ ಕಿರಣವನ್ನು ತಂದಿದೆ ಮತ್ತು ಇದನ್ನು ಬೆಂಬಲಿಸಿದ ಲಕ್ಷಾಂತರ ಜನರು ಮಣ್ಣಿನ ಸಂರಕ್ಷಣೆಗೆ ತಮ್ಮ ಕೊಡುಗೆ ನೀಡುತ್ತಾರೆ ಎಂಬ ನಂಬಿಕೆಯನ್ನು ಹುಟ್ಟುಹಾಕಿದೆ ಎಂದು ಹೇಳಿದರು.

ತಮ್ಮ ಟ್ವಿಟ್ಟರ್ ಸಂದೇಶದಲ್ಲಿ ರಕ್ಷಣಾ ಸಚಿವರು, 'ಸೂಳೂರಿನಲ್ಲಿ ಈಶ ಆಯೋಜಿಸಿದ್ದ 'ಮಣ್ಣು ಉಳಿಸಿ' ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಈ ಅಭಿಯಾನವು ಮಣ್ಣಿನ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದೆ ಮತ್ತು ಮುಂದಿನ ದಿನಗಳಲ್ಲಿ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೊಡುಗೆ ನೀಡುವಂತೆ ಪ್ರೇರೇಪಿಸಿದೆ ಎಂದರು.

ಜಾಗತಿಕವಾಗಿ ಅಳಿವಿನಂಚಿನಲ್ಲಿರುವ ಮಣ್ಣನ್ನು ಉಳಿಸುವ ಅಭಿಯಾನದ ಭಾಗವಾಗಿ ಒಬ್ಬಂಟಿ ಮೋಟಾರ್‌ ಬೈಕ್ ಪ್ರಯಾಣವನ್ನು ಸದ್ಗುರು ಮಾರ್ಚ್​ನಲ್ಲಿ ಪ್ರಾರಂಭಿಸಿದರು. ಅಭಿಯಾನವು ಪ್ರಪಂಚದಾದ್ಯಂತದ ರಾಷ್ಟ್ರಗಳನ್ನು ನಮ್ಮ ಭೂಮಿಯ ಕೃಷಿ ಮಣ್ಣನ್ನು ಉಳಿಸಲು ತುರ್ತಾಗಿ ಕಾನೂನು ಮಾಡುವಂತೆ ಒತ್ತಾಯಿಸುತ್ತಿದೆ, ಅದರಲ್ಲಿ ಶೇ.50 ಈಗಾಗಲೇ ಕ್ಷೀಣಿಸಿದೆ ಮತ್ತು ಇಳುವರಿಗೆ ಅಸಮರ್ಥವಾಗಿದೆ ಎಂದು ಹೇಳಲಾಗಿದೆ. ಪ್ರಪಂಚದಾದ್ಯಂತದ ಕೃಷಿ ಮಣ್ಣಿನಲ್ಲಿ ಶೇ. 3ರಿಂದ 6 ಜೈವಿಕ ಅಂಶವನ್ನು ಕಡ್ಡಾಯಗೊಳಿಸಲು ರಾಷ್ಟ್ರಗಳನ್ನು ಒತ್ತಾಯಿಸುವುದು ಅಭಿಯಾನದ ಉದ್ದೇಶವಾಗಿದೆ. ಇದು ಮಣ್ಣಿನ ಫಲವತ್ತತೆ ಮತ್ತು ಇಳುವರಿ ಸಾಮರ್ಥ್ಯವನ್ನು ಉಳಿಸಿಕೊಳ್ಳಲು ಅಗತ್ಯವಿರುವ ಕನಿಷ್ಠ ಜೈವಿಕ ಅಂಶವಾಗಿದೆ ಮತ್ತು ಅದು ಮರಳಾಗಿ ಬದಲಾಗುವುದನ್ನು ತಡೆಯುತ್ತದೆ.


ಮಾರ್ಚ್ 21ರಂದು ಲಂಡನ್‌ನಲ್ಲಿ ಪ್ರಾರಂಭವಾದ ಸದ್ಗುರುಗಳ ಮಣ್ಣಿಗಾಗಿ ಪಯಣ, ಯುರೋಪ್, ಮಧ್ಯ ಏಷ್ಯಾ ಮತ್ತು ಮಧ್ಯಪ್ರಾಚ್ಯದಲ್ಲಿ 27 ರಾಷ್ಟ್ರಗಳ ಮೂಲಕ ಸಾಗಿತು. ಸದ್ಗುರು ಮೇ ತಿಂಗಳಲ್ಲಿ ಐವರಿ ಕೋಸ್ಟ್‌ನಲ್ಲಿ ನಡೆದ ಯುನೈಟೆಡ್ ನೇಷನ್ಸ್ ಕನ್ವೆನ್ಶನ್ ಟು ಕಾಂಬ್ಯಾಟ್ ಡೆಸರ್ಟಿಫಿಕೇಷನ್ (ಯುಎನ್‍ಸಿಸಿಡಿ ಕಾಫ್15)ನೇ ಅಧಿವೇಶನದಲ್ಲಿ 197 ರಾಷ್ಟ್ರಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು. ಅದೇ ತಿಂಗಳಲ್ಲಿ ಸದ್ಗುರು ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ (WEF) ಮಾತನಾಡಿದರು. ಎರಡೂ ಕಾರ್ಯಕ್ರಮಗಳಲ್ಲಿ, ಸದ್ಗುರು ರಾಜಕೀಯ, ವ್ಯಾಪಾರ ಮತ್ತು ಸಾಂಸ್ಕೃತಿಕ ನಾಯಕರನ್ನು ಭೂಮಿಯ ಕ್ಷಿಪ್ರ ಮರುಭೂಮೀಕರಣವನ್ನು ತಡೆಯಲು ತುರ್ತು ಮತ್ತು ನಿರ್ಣಾಯಕ ಕಾರ್ಯನೀತಿ-ಚಾಲಿತ ಕ್ರಮಗಳನ್ನು ಸುಗಮಗೊಳಿಸುವಂತೆ ಒತ್ತಾಯಿಸಿದರು. ಯುಎನ್‌ಸಿಸಿಡಿ ಪ್ರಕಾರ, ಪ್ರಸ್ತುತ ಮಣ್ಣಿನ ಅವನತಿ ಹೀಗೇ ಮುಂದುವರೆದಲ್ಲಿ, 2050ರ ವೇಳೆಗೆ ಭೂಮಿಯ ಶೇ. 90 ಮರುಭೂಮಿಯಾಗಿ ಬದಲಾಗಬಹುದು ಎಂದರು.

ಇಲ್ಲಿಯವರೆಗೆ 74 ದೇಶಗಳು ಅಳಿವಿನಂಚಿನಲ್ಲಿರುವ ಮಣ್ಣನ್ನು ಉಳಿಸಲು ಧೃಡನಿಶ್ಚಯ ಕೈಗೊಂಡಿವೆ ಮತ್ತು ಗುಜರಾತ್, ರಾಜಸ್ಥಾನ, ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳು ತಮ್ಮ ರಾಜ್ಯಗಳಲ್ಲಿ ಮಣ್ಣನ್ನು ಉಳಿಸಲು ಈಶ ಔಟ್​ರೀಚ್​ನೊಂದಿಗೆ ಎಂಒಯುಗಳಿಗೆ ಸಹಿ ಹಾಕಿವೆ. ದೆಹಲಿಯಲ್ಲಿ ಸದ್ಗುರು ವಿಶ್ವ ಪರಿಸರ ದಿನವಾದ ಜೂನ್ 5ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಅಭಿಯಾನಕ್ಕೆ ಕೇಂದ್ರ ಸರ್ಕಾರದ ಬೆಂಬಲವನ್ನು ಕೋರಿದರು. ಪ್ರಧಾನಮಂತ್ರಿಯವರು ಮಣ್ಣು ಉಳಿಸಿ ಪ್ರಯತ್ನವನ್ನು ಶ್ಲಾಘಿಸುತ್ತ ಅಭಿಯಾನಕ್ಕೆ ಕೇಂದ್ರ ಸರ್ಕಾರದ ಸಂಪೂರ್ಣ ಬೆಂಬಲದ ಭರವಸೆ ನೀಡಿದರು.

                  

ವಿಶ್ವಪರ್ಯಟನೆಯಲ್ಲಿ ಗಗನಸುಖಿ: ನಮಸ್ಕಾರ ದೇವರು.. ಇದು ಡಾಕ್ಟರ್ ಬ್ರೋ..!

ಮಾರ್ಚ್ 21ರಂದು ಲಂಡನ್‌ನಲ್ಲಿ ಪ್ರಾರಂಭವಾದ ಸದ್ಗುರುಗಳ ಮಣ್ಣಿಗಾಗಿ ಪಯಣ, ಯುರೋಪ್, ಮಧ್ಯ ಏಷ್ಯಾ ಮತ್ತು ಮಧ್ಯಪ್ರಾಚ್ಯದಲ್ಲಿ 27 ರಾಷ್ಟ್ರಗಳ ಮೂಲಕ ಸಾಗಿತು. ಸದ್ಗುರು ಮೇ ತಿಂಗಳಲ್ಲಿ ಐವರಿ ಕೋಸ್ಟ್‌ನಲ್ಲಿ ನಡೆದ ಯುನೈಟೆಡ್ ನೇಷನ್ಸ್ ಕನ್ವೆನ್ಶನ್ ಟು ಕಾಂಬ್ಯಾಟ್ ಡೆಸರ್ಟಿಫಿಕೇಷನ್ (ಯುಎನ್‍ಸಿಸಿಡಿ ಕಾಫ್15)ನೇ ಅಧಿವೇಶನದಲ್ಲಿ 197 ರಾಷ್ಟ್ರಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು. ಅದೇ ತಿಂಗಳಲ್ಲಿ ಸದ್ಗುರು ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ (WEF) ಮಾತನಾಡಿದರು. ಎರಡೂ ಕಾರ್ಯಕ್ರಮಗಳಲ್ಲಿ, ಸದ್ಗುರು ರಾಜಕೀಯ, ವ್ಯಾಪಾರ ಮತ್ತು ಸಾಂಸ್ಕೃತಿಕ ನಾಯಕರನ್ನು ಭೂಮಿಯ ಕ್ಷಿಪ್ರ ಮರುಭೂಮೀಕರಣವನ್ನು ತಡೆಯಲು ತುರ್ತು ಮತ್ತು ನಿರ್ಣಾಯಕ ಕಾರ್ಯನೀತಿ-ಚಾಲಿತ ಕ್ರಮಗಳನ್ನು ಸುಗಮಗೊಳಿಸುವಂತೆ ಒತ್ತಾಯಿಸಿದರು. ಯುಎನ್‌ಸಿಸಿಡಿ ಪ್ರಕಾರ, ಪ್ರಸ್ತುತ ಮಣ್ಣಿನ ಅವನತಿ ಹೀಗೇ ಮುಂದುವರೆದಲ್ಲಿ, 2050ರ ವೇಳೆಗೆ ಭೂಮಿಯ ಶೇ. 90 ಮರುಭೂಮಿಯಾಗಿ ಬದಲಾಗಬಹುದು ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries