ಮುಳ್ಳೇರಿಯ: ಸೌತ್ ಚಿತ್ತಾರಿಯ ಸಹಾಯ್ ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ ಬಡ ಕಿಡ್ನಿ ರೋಗಿಗಳಿಗೆ ಉಚಿತವಾಗಿ ಡಯಾಲಿಸಿಸ್ ಮಾಡುವ ಚಿತ್ತಾರಿ ಡಯಾಲಿಸಿಸ್ ಕೇಂದ್ರಕ್ಕೆ ಸಹಾಯ ಹಸ್ತ ನೀಡಲಾಗಿದೆ. ಡಯಾಲಿಸಿಸ್ ಚಾಲೆಂಜ್ ಯೋಜನೆಯ ಭಾಗವಾಗಿ ಊರಲ್ಲೂ ್ತ ಗಲ್ಫ್‍ನಲ್ಲೂ ಹಲವು ಚಾರಿಟೇಬಲ್ ಚಟುವಟಿಕೆಗಳ ಮೂಲಕ ಪ್ರಸಿದ್ದರಾಗಿರುವ ಉದ್ಯಮಿ ಅಬೂಬಕರ್ ಕುಟ್ಟಿಕೋಲ್ ಅವರು 100 ಡಯಾಲಿಸಿಸ್ |ಘಟಕದ ಖರ್ಚುವೆಚ್ಚಗಳ ಜವಾಬ್ದಾರಿ ವಹಿಸಿಕೊಂಡಿರುವರು. ಚಿತ್ತಾರಿ ಡಯಾಲಿಸಿಸ್ ಕೇಂದ್ರದ ಕಾರ್ಯಾಚರಣೆ ಮಾದರಿಯಾಗಿದ್ದು, ಎಲ್ಲ ರೀತಿಯ ನೆರವು ನೀಡುವುದಾಗಿ ಅಬೂಬಕರ್ ಕುಟ್ಟಿಕೋಲ್ ಹೇಳಿದರು.
ಅಬೂಬಕರ್ ಕುಟ್ಟಿಕೋಲ್ ಡಯಾಲಿಸಿಸ್ ಸೆಂಟರ್ ನ ಆಡಳಿತಾಧಿಕಾರಿ ಶಾಹಿದ್ ಅವರಿಗೆ ಕಾಞಂಗಾಡ್ ನ ಇಹಾಬಲ್ ಶಾಲೆಯಲ್ಲಿ ನಡೆದ ಹಾದಿಯಾ ಕಾರುಣ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೂತನ ಡಯಾಲಿಸಿಸ್ ಘಟಕಕ್ಕೆ ಚೆಕ್ ಹಸ್ತಾಂತರಿಸಿದರು. ಖ್ಯಾತ ಕ್ಯಾನ್ಸರ್ ತಜ್ಞ ಡಾ.ವಿ.ಪಿ.ಗಂಗಾಧರನ್, ಕಾಞಂಗಾಡ್ ಸಂಯುಕ್ತ ಜಮಾತ್ ಅಧ್ಯಕ್ಷ ಪಾಲಕ್ಕಿ ಕುಂಞಮದ್ ಹಾಜಿ, ಕಾಞಂಗಾಡ್ ಡಿವೈಎಸ್ಪಿ ಡಾ.ವಿ.ಬಾಲಕೃಷ್ಣನ್, ಹಾದಿಯಾ ಅಧ್ಯಕ್ಷ ಎಂ.ಬಿ.ಅಶ್ರಫ್, ಸಹಾಯ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶರೀಫ್ ಮಿನ್ನಾ, ಕೋಶಾಧಿಕಾರಿ ತಯ್ಯಿಬ್ ಕುಳಿಕ್ಕಾಟ್, ಕುಂಞÂ್ಞ ಮೊಯ್ದೀನ್, ಕೆ.ಯು.ದಾವೂದ್ ಉಪಸ್ಥಿತರಿದ್ದರು.