ಕಾಸರಗೋಡು: ಹದಿನಾರರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಮಲ ತಂದೆಗೆ ಹೊಸದುರ್ಗ ಹೆಚ್ಚುವರಿ ಸೆಶನ್ಸ್ ನ್ಯಾಯಾಲಯ(ಪ್ರಥಮ)ದ ನ್ಯಾಯಾಧೀಶರು 197ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಕೇರಳದ ಇತಿಹಾಸದಲ್ಲಿ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿ ನೀಡಿರುವ ಗರಿಷ್ಠ ಜೈಲುಶಿಕ್ಷೆ ಇದಾಗಿದೆ.
ಮೂಲತ: ಇಡುಕ್ಕಿ ಜಿಲ್ಲೆ ನಿವಾಸಿ, ಪ್ರಸಕ್ತ ಉದುಮ ಬಾರ ಕುಳಿಕ್ಕುನ್ನಿಲ್ ಎಂಬಲ್ಲಿ ವಾಸಿಸುತ್ತಿರುವ ವ್ಯಕ್ತಿಗೆ ಈ ಶಿಕ್ಷೆ ನೀಡಲಾಗಿದೆ. ಒಟ್ಟು ಐದು ಸೆಕ್ಷನ್‍ಗಳಲ್ಲಾಗಿ ಆರೋಪಿಗೆ ತಲಾ 20ವರ್ಷಗಳಂತೆ ನೂರು ವರ್ಷ ಹಾಗೂ ಪೋಕ್ಸೋ ಅನ್ವಯ ಏಳು ವರ್ಷ ಸೇರಿದಂತೆ ಒಟ್ಟು 107ವರ್ಷಗಳ ಶೀಕ್ಷೆ ವಿಧಿಸಲಾಗಿದೆ. ಇದರೊಂದಿಗೆ 4.25ಲಕ್ಷ ರಊ. ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಆರು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ. ಶಿಕ್ಷೆಯನ್ನು ಒಟ್ಟಾಗಿ ಅನುಭವಿಸುವಂತೆ ಆದೇಶ ಹೊರಡಿಸಿರುವುದರಿಂದ ಆರೋಪಿ ಒಟ್ಟು 27ವರ್ಷ ಜೈಲಲ್ಲಿ ಕಳೆಯಬೇಕಾಗಿದೆ.
2012ರಿಂದ 2018ರ ಕಾಲಾವಧಿಯಲ್ಲಿ 16ರ ಹರೆಯದ ಬಾಲಕಿಗೆ ಮಲತಂದೆಯಿಂದ ನಿರಂತರ ಲೈಂಗಿಕ ಕಿರುಕುಳ ನಡೆದಿರುವ ಬಗ್ಗೆ ಲಭಿಸಿದ ದೂರಿನನ್ವಯ ಮೇಲ್ಪರಂಬ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಠಾಣೆಯ ಅಂದಿನ ಎಸ್.ಐ ಪಿ. ಪ್ರಮೋದ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಹೊಸದುರ್ಗ ಹೆಚ್ಚುವರಿ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಸುರೇಶ್ ಕುಮಾರ್ ಶಿಕ್ಷೆ ಪ್ರಕಟಿಸಿದ್ದಾರೆ.
ಕಿರುಕುಳಕ್ಕೀಡಾದ ಬಾಲಕಿ ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ ಮಧ್ಯೆ ತಲೆಸುತ್ತು ಸಏರಿದಂತೆ ಅಸೌಖ್ಯ ಕಾಣಿಸಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೂ ದಾಖಲಿಸಲಾಗಿತ್ತು. ಇದರಿಂದ ಸಂಶಯಗೊಂಡು ತಪಾಸಣೆ ನಡೆಸಿದಾಗ ಲೈಂಗಿಕ ಕಿರುಕುಳದ ಮಾಹಿತಿ ಲಭಿಸಿತ್ತು.