ಕಾಸರಗೋಡು: ಕೇರಳ ಸ್ಟಾರ್ಟಪ್ ಮಿಷನ್ ಮತ್ತು ಸಿ.ಪಿ.ಸಿ.ಆರ್.ಐ ಕಾಸರಗೋಡು ಸಂಯುಕ್ತವಾಗಿ ಆಯೋಜಿಸುತ್ತಿರುವ ರೂರಲ್ ಇಂಡಿಯಾ ವ್ಯಾಪಾರ ಶೃಂಗ ಜೂ. 11ಮತ್ತು 12ರಂದು ಸಿಪಿಸಿಆರ್‍ಐ ಸಭಾಂಗಣದಲ್ಲಿ ಜರುಗಲಿದೆ. ಶೃಂಗದಲ್ಲಿ ಅಂತಾರಾಷ್ಟ್ರೀಯ ಮಟ್ಟದ 20ಕ್ಕೂ ಹೆಚ್ಚು ಮಂದಿ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸುವರು.
ಸಾಮಾಜಿಕವಾಗಿ ಪ್ರಭಾವ ಬೀರುವ ಉತ್ಪನ್ನಗಳ ಉತ್ಪಾದನೆಯಲ್ಲಿ ತೊಡಗಿರುವ ಕೇರಳದ ಐದು ಸ್ಟಾರ್ಟ್‍ಪ್‍ಗಳಿಗೆ ಧನಸಹಾಯ ನೀಡಲು ಬೆಂಗಳೂರು ಕೇಂದ್ರೀಕರಿಸಿ ಚಟುವಟಿಕೆ ನಡೆಸುತ್ತಿರುವ ಇನ್‍ಕ್ಯುಬೇಟರ್ ಸೋಶೀಯಲ್ ಆಲ್ಫಾ ನಡೆಸುವ ಪಿಚಿಂಗು ಶೃಂಗದಲ್ಲಿ ಇರಲಿದೆ.
ಭಾರತದ ವಿವಿಧ ಭಾಗಗಳಲ್ಲಿ ಪ್ರತಿನಿಧಿಗಳ ತಜ್ಞರ ಮತ್ತು ಸ್ಟಾರ್ಟಪ್ ಸ್ಥಾಪಕರ ಪಾಲ್ಗೊಳ್ಳುವಿಕೆಯೊಂದಿಗೆ 2020 ರಲ್ಲಿ ನಡೆದ ಮೊದಲ ಶೃಂಗ ಉತ್ತಮ ರೀತಿಯಲ್ಲಿ ನಡೆದಿತ್ತು. ಈ ವರ್ಷಭಾರತದ ಪ್ರಮುಖ ಹೂಡಿಕೆದಾರರ ಸಾಮಾಜಿಕ ಆಲ್ಫ, ಸ್ಟಾರ್ಟಪ್ ಇಂಡಿಯಾ, ಸೆಂಟ್ರಲ್ ಯೂನಿವರ್ಸಿಟಿ, ಎಲ್.ಬಿ.ಎಸ್ ಇಂಜಿನಿಯರಿಂಗ್ ಕಾಲೇಜ್, ಕೇರಳ ಕೃಷಿ ಕಾಲೇಜು ಮೊದಲಾದ ಪ್ರಮುಖ ಸಂಸ್ಥೆಗಳ ಬೆಂಬಲದೊಂದಿಗೆ ವ್ಯಸ್ಥಿತವಾಗಿ ಶೃಂಗ ಆಯೋಜಿಸಲಾಗುತ್ತಿದೆ.
11ರಂದು ಬೆಳಗ್ಗೆ 10ಕ್ಕೆ ನಡೆಯುವ ಸಮಾರಂಭದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಸಏರಿದಂತೆ ಸೆಂಟ್ರಲ್ ಯೂನಿವರ್ಸಿಟಿ ಉಪಕುಲಪತಿ ಡಾ ಟಿ.ಹೆಚ್ ವೆಂಕಟೇಶ್ವರಲು, ಕಮ್ಮೋಡಿಟಿ ಬೋರ್ಡ್ ಎಕ್ಸಿಕುಟೀವ್ ಮುಖ್ಯಸ್ಥ ವೆಂಕಟೇಶ್ ಹುಬ್ಬಳ್ಳಿ, ಡಾ. ಹೋಮಿಚಿಕ್ಕಣ್ಣ, ಕೇರಳ ಸ್ಟಾರ್ಟಪ್ ಮಿಷನ್ ಸಿ.ಐ.ಒ ಜಾನ್ ಎಂ ಥಾಮಸ್ ,ಸಿ.ಪಿ.ಸಿ.ಆರ್.ಐ ನಿರ್ದೇಶಕ ಡಾ.ಅನಿತಾ ಕರುಣ್ ,ಐ.ಸಿ.ಎ.ಆರ್.ಅಸಿಸ್ಟೆಂಟ್ ಡೈರೆಕ್ಟರ್ ಜನರಲ್ ಗಳಾದ ಡಾ.ಬಿ.ಕೆ ಪಾಂಡೆ , ಡಾ. ಕೆ ಶ್ರೀನಿವಾಸ್ , ಕೇರಳ ಸ್ಟಾರ್ಟಪ್ ಮಿಷನ್ ಪೆÇ್ರಜೆಕ್ಟ್ ನಿರ್ದೇಶಕ ರಿಯಾಸ್ ಪಿ.ಎಂ, ಸೀನಿಯರ್ ಇನ್‍ಕ್ಯೂಬೇಷನ್ ಮ್ಯಾನೇಜರ್ ಅಶೋಕ್ ಕುರಿಯನ್, ಅಗ್ರಿ ಇನ್ನೋವೇಟ್ ಸಿ.ಐ.ಒ ಡಾ ಸುಧಾ ಮೈಸೂರ್ ಭಾಗವಹಿಸಲಿದ್ದಾರೆ.
ಎರಡು ದಿವಸಗಳ ಶೃಂಗದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವವರು hಣಣಠಿs://sಣಚಿಡಿಣuಠಿmissioಟಿ.iಟಿ/ಡಿuಡಿಚಿಟ_busiಟಿess_ಛಿoಟಿಛಿಟಚಿve/ ಎಂಬ ವೆಬ್‍ಸೈಟಲ್ಲಿ ನೋಂದಾಯಿಸಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.