ಕಾಸರಗೋಡು: ರಾಜ್ಯದಲ್ಲಿ 2022ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಶೇ.99.48 ಮಂದಿ ಉನ್ನತ ವಿದ್ಯಾಭ್ಯಾಸಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಕಾಸರಗೋಡಿಗೆ ಆರನೇ ಸ್ಥಾನ ಲಭಿಸಿದೆ.
ಜಿಲ್ಲೆಯ 162 ಶಾಲೆಗಳಿಂದ ಒಟ್ಟು 10431 ಬಾಲಕರು ಹಾಗೂ 9460 ಬಾಲಕಿಯರು ಪರೀಕ್ಷೆಗೆ ಹಾಜರಾಗಿದ್ದಾರೆ. ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ 58 ಹಾಗೂ ಕಾಞಂಗಾಡು ಶಿಕ್ಷಣ ಜಿಲ್ಲೆಯಲ್ಲಿ 64 ಸೇರಿ ಒಟ್ಟು 122 ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿಕೊಮಡಿದೆ. ಜಿಲ್ಲೆಯಲ್ಲಿ 455 ಬಾಲಕರು ಹಾಗೂ 1184 ಬಾಲಕಿಯರು ಸಏರಿದಂತೆ ಒಟ್ಟು 1639 ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ 'ಎ-ಪ್ಲಸ್' ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ 232 ಬಾಲಕರು ಹಾಗೂ 625 ಬಾಲಕಿಯರು ಸೇರಿದಂತೆ ಒಟ್ಟು 857 ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ 'ಎ-ಪ್ಲಸ್' ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅನುದಾನಿತ ಶಾಲಾ ವಿಭಾಗದಲ್ಲಿ 190 ಬಾಲಕರು ಹಾಗೂ 398 ಬಾಲಕಿಯರು ಸಏರಿದಂತೆ ಒಟ್ಟು 588 ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿ 'ಎ-ಪ್ಲಸ್' ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅನುದಾನ ರಹಿತ ಶಾಲೆಗಳಲ್ಲಿ 33 ಬಾಲಕರು ಹಾಗೂ 161 ಬಾಲಕಿಯರು ಸೇರಿದಂತೆ 194 ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ 'ಎ-ಪ್ಲಸ್' ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಸರಗೋಡು ಶೈಕ್ಷಣಿಕ ಜಿಲ್ಲೆಯಿಂದ 653 ವಿದ್ಯಾರ್ಥಿಗಳು ಹಾಗೂ ಕಾಞಂಗಾಡು ಶಿಕ್ಷಣ ಜಿಲ್ಲೆಯ 986 ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿ 'ಎ-ಪ್ಲಸ್' ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.