HEALTH TIPS

ಟಿ.ವಿ, ಸಿನಿಮಾ ಕ್ಷೇತ್ರದಲ್ಲಿ ಮಕ್ಕಳ ಶೋಷಣೆ: ದಿನಕ್ಕೆ 12 ತಾಸಿಗೂ ಅಧಿಕ ಕೆಲಸ!

 ಮುಂಬೈ: ಸಿನಿಮಾ ಹಾಗೂ ಟಿವಿ ಅಂತಹ ಮನರಂಜನಾ ಕ್ಷೇತ್ರದಲ್ಲಿ ಮಕ್ಕಳು ಬಾಲಕಾರ್ಮಿಕರಾಗಿ ದಿನಕ್ಕೆ ಸರಾಸರಿ 12 ತಾಸು ಕೆಲಸ ಮಾಡುತ್ತಾರೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

ಈ ಬಗ್ಗೆ ಮಕ್ಕಳ ಹಕ್ಕುಗಳ ಸಂರಕ್ಷಣೆಯ ಎನ್‌ಜಿಒ 'ಚೈಲ್ಡ್ ರೈಟ್ಸ್‌ ಆಯಂಡ್ ಯು' (ಸಿಆರ್‌ವೈ) ಎನ್ನುವ ಸಂಸ್ಥೆ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿದೆ.

ಶೀಘ್ರ ಜನಪ್ರಿಯತೆ ಸಿಗಬೇಕು ಎಂಬ ಹಂಬಲದಿಂದ ಹಾಗೂ ಔಪಚಾರಿಕ ಶಿಕ್ಷಣದ ಬಗೆಗಿನ ನಿರ್ಲಕ್ಷ್ಯ ಮತ್ತು ತಂದೆ-ತಾಯಿಗಳ ಅಲಕ್ಷ್ಯದಿಂದ ಮನರಂಜನಾ ಕ್ಷೇತ್ರದಲ್ಲಿ ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ಯಾವುದೇ ವಿಶ್ರಾಂತಿ ಇಲ್ಲದೇ ದುಡಿಸಿಕೊಳ್ಳಲಾಗುತ್ತಿದೆ ಎಂದು ಸಿಆರ್‌ವೈ ಹೇಳಿದೆ. ಮುಂಬೈನಲ್ಲಿನ ಮನರಂಜನಾ ಕ್ಷೇತ್ರದಲ್ಲಿನ ಆಯ್ದ ಸಂಸ್ಥೆಗಳಲ್ಲಿ ಈ ಬಗ್ಗೆ ಅಧ್ಯಯನ ಕೈಗೊಳ್ಳಲಾಗಿದೆ.

ದೇಶದಲ್ಲಿ ಮನರಂಜನಾ ಕ್ಷೇತ್ರದಲ್ಲಿ ದುಡಿಯುವ ಮಕ್ಕಳ ನಿಖರ ಸಂಖ್ಯೆ ಲಭ್ಯವಿಲ್ಲ. ಆದರೆ ಸಿಆರ್‌ವೈ ನೀಡಿರುವ ಅಂಕಿ ಸಂಖ್ಯೆಗಳ ಪ್ರಕಾರ 7 ಕಾಸ್ಟಿಂಗ್ ಸಂಸ್ಥೆಗಳಲ್ಲಿ 41,392 ಜನ ದುಡಿಯಲು ಲಭ್ಯರಿದ್ದಾರೆ ಎಂದು ಹೇಳಲಾಗಿದೆ. ಇದರಲ್ಲಿ ಶೇ 24.9 ರಷ್ಟು ಬಾಲ ಕಾರ್ಮಿಕರೇ ಇದ್ದಾರೆ ಎಂದು ಸಿಆರ್‌ವೈ ಹೇಳಿದೆ. ಈ ಏಳೂ ಕಾಸ್ಟಿಂಗ್ ಸಂಸ್ಥೆಗಳಲ್ಲಿ 3,792 ಜನ ಬಾಲಕಿಯರು ಮನರಂಜನಾ ಕ್ಷೇತ್ರದಲ್ಲಿ ದುಡಿಯಲು ಇದ್ದಾರೆ ಎಂದು ಅದು ತಿಳಿಸಿದೆ.

ಇವರೆಲ್ಲ 18 ವರ್ಷ ವಯೋಮಾನದ ಕೇಳಗಿನವರು ಎಂದು ಸಿಆರ್‌ವೈ ಹೇಳಿದೆ. ಬಾಲ ಕಾರ್ಮಿಕ ವಿರೋಧಿ ಕಾಯ್ದೆ ಪ್ರಕಾರ ಯಾವುದೇ ಮಗು ದಿನಕ್ಕೆ 5 ಗಂಟೆಗಿಂತ ಹೆಚ್ಚಿಗೆ ಕೆಲಸ ಮಾಡುವ ಹಾಗಿಲ್ಲ. ಆದರೆ, ಮನರಂಜನಾ ಕ್ಷೇತ್ರದಲ್ಲಿ ಬಾಲಕ ಬಾಲಕಿಯರು ವಾರದಲ್ಲಿ ಆರೂ ದಿನವೂ 12 ರಿಂದ 13 ತಾಸು ಕೆಲಸ ಮಾಡುತ್ತಾರೆ ಎಂದು ಸಿಆರ್‌ವೈ ತಿಳಿಸಿದೆ.

ಈ ಬಗ್ಗೆ ಮಾತನಾಡಿರುವ ಸಿಆರ್‌ವೈನ ಪಶ್ಚಿಮ ವಿಭಾಗದ ಪ್ರಾದೇಶಿಕ ನಿರ್ದೇಶಕಿ ಕರಿನ್ನಾ ರಬಾಡಿ, ಮನರಂಜನಾ ಕ್ಷೇತ್ರದಲ್ಲಿ ದುಡಿಯುವ ಮಕ್ಕಳು ಬಾಲ ಕಾರ್ಮಿಕ ಪದ್ದತಿಯ ಅಗೋಚರ ಸಂತ್ರಸ್ತರಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ಕ್ಷೇತ್ರದಲ್ಲಿ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಗಂಭೀರವಾಗಿ ಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries