ನವದೆಹಲಿ: ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ₹770 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ 12 ಅತಿ ವೇಗದ ರಕ್ಷಣಾ ಹಡಗುಗಳನ್ನು ವಿಯೆಟ್ನಾಂಗೆ ಹಸ್ತಾಂತರ ಮಾಡಿದರು.
ನವದೆಹಲಿ: ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ₹770 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ 12 ಅತಿ ವೇಗದ ರಕ್ಷಣಾ ಹಡಗುಗಳನ್ನು ವಿಯೆಟ್ನಾಂಗೆ ಹಸ್ತಾಂತರ ಮಾಡಿದರು.
ಜೂನ್ 8ರಿಂದ ವಿಯೆಟ್ನಾಂ ಪ್ರವಾಸ ಕೈಗೊಂಡಿರುವ ರಾಜನಾಥ್ ಸಿಂಗ್ ಅವರು, ಹಾಂಗ್ ಹಾ ಶಿಪ್‌ಯಾರ್ಡ್‌ನಲ್ಲಿ ಈ ಹಡಗುಗಳನ್ನು ಸಾಲದ ರೂಪದ ಯೋಜನೆಯಡಿ ವಿಯೆಟ್ನಾಂಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಭಾರತ ನೀಡಿದ ಸಾಲದ ಯೋಜನೆಯಡಿ 12 ಅತಿವೇಗದ ರಕ್ಷಣಾ ಹಡಗುಗಳ ನಿರ್ಮಾಣ ಯೋಜನೆ ಪೂರ್ಣಗೊಳಿಸಲಾಗಿದೆ. ಮೊದಲ 5 ಹಡಗುಗಳನ್ನು ಭಾರತದಲ್ಲಿ ಎಲ್‌ಅಂಡ್‌ಟಿ ಶಿಪ್‌ಯಾರ್ಡ್‌ನಲ್ಲಿ ನಿರ್ಮಿಸಲಾಗಿತ್ತು. ಇದೀಗ ಉಳಿದ 7 ಹಡುಗಗಳನ್ನು ಹಾಂಗ್ ಹಾ ಶಿಪ್ ಯಾರ್ಡ್‌ನಲ್ಲಿ ನಿರ್ಮಿಸಲಾಗಿದೆ. ಈ ಯೋಜನೆಯು ಉಭಯ ದೇಶಗಳ ನಡುವೆ ಹೆಚ್ಚಿನ ಭದ್ರತಾ ಸಹಕಾರ ಯೋಜನೆಗಳಿಗೆ ಪೂರಕವಾಗಲಿದೆ ಎಂಬ ಭರವಸೆಯಿದೆ. ಈ ಯೋಜನೆಯು ವಿಶ್ವಕ್ಕಾಗಿ ಭಾರತದಲ್ಲಿ ನಿರ್ಮಿಸಿ (ಮೇಕ್ ಇನ್ ಇಂಡಿಯಾ- ಮೇಕ್ ಫಾರ್ ದಿ ವರ್ಲ್ಡ್ ಮಿಷನ್) ಎಂಬುದಕ್ಕೆ ಉದಾಹರಣೆಯಾಗಿದೆ' ಎಂದರು.