ತಿರುವನಂತಪುರ: ರಾಜ್ಯದಲ್ಲಿ ಕೊರೊನಾ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ. ನಿನ್ನೆ ರಾಜ್ಯದಲ್ಲಿ 4,459 ಮಂದಿಗೆ ಸೋಂಕು ದೃಢಪಟ್ಟಿದೆ. ಇದು ಮೂರನೇ ತರಂಗದ ನಂತರದ ಗರಿಷ್ಠ ದೈನಂದಿನ ಸಂಖ್ಯೆಯಾಗಿದೆ.
ನಿನ್ನೆ ಎರ್ನಾಕುಳಂನಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಎರ್ನಾಕುಳಂ ಜಿಲ್ಲೆಯಲ್ಲಿ ನಿನ್ನೆ ಒಟ್ಟು 1,161 ಪ್ರಕರಣಗಳು ವರದಿಯಾಗಿವೆ. ತಿರುವನಂತಪುರಂನಲ್ಲೂ ಪ್ರತಿ ದಿನ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ನಿನ್ನೆ 1,081 ಮಂದಿ ಜನರಿಗೆ ಕೋವಿಡ್ ಪತ್ತೆಯಾಗಿದೆ. ಕೊಲ್ಲಂ 382, ಪಾಲಕ್ಕಾಡ್ 260, ಇಡುಕ್ಕಿ 76, ಕೊಟ್ಟಾಯಂ 445, ಆಲಪ್ಪುಳ 242, ತ್ರಿಶೂರ್ 221, ಪಾಲಕ್ಕಾಡ್ 151, ಮಲಪ್ಪುರಂ 85, ಕೋಝಿಕ್ಕೋಡ್ 223, ವಯನಾಡ್ 26, ಕಣ್ಣೂರು 86 ಮತ್ತು ಕಾಸರಗೋಡÀಲ್ಲಿ 18 ಎಂಬಂತೆ ಸೋಂಕು ಪತ್ತೆಯಾಗಿದೆ.
ರಾಜ್ಯದಲ್ಲಿ ನಿನ್ನೆ ಕೋವಿಡ್ ಬಾಧಿಸಿ 15 ಮಂದಿ ಮೃತರಾಗಿದ್ದಾರೆ.