ನವದೆಹಲಿ: ಕೋವಿಡ್ 4ನೇ ಅಲೆಯ ಆತಂಕ ನಡುವೆ ಶುಕ್ರವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ನಿನ್ನೆಗಿಂತ ಸೋಂಕು ಕೊಂಚ ಏರಿಕೆಯಾಗಿದ್ದು, 12,847ರಷ್ಟು ಕಂಡುಬಂದಿದೆ. ನಿನ್ನೆ 12,213 ಹೊಸ ಕೋವಿಡ್ ಪ್ರಕರಗಳು ದಾಖಲಾಗಿದ್ದವು. ಇನ್ನು ನಿನ್ನೆ 11 ಮಂದಿ ಮೃತಪಟ್ಟಿದ್ದರೆ ಕಳೆದ 24 ಗಂಟೆಗಳಲ್ಲಿ 14 ಮಂದಿ ಮೃತಪಟ್ಟಿದ್ದಾರೆ.
ಕಳೆದ 24 ಗಂಟೆಗಳಲ್ಲಿ 7,985 ಮಂದಿ ಗುಣಮುಖರಾಗುವುದರೊಂದಿಗೆ ಒಟ್ಟಾರೆಯಾಗಿ ಇದುವರೆಗೆ ವೈರಸ್ ನಿಂದ 4 ಕೋಟಿಯ 26 ಲಕ್ಷದ 82 ಸಾವಿರದ 697 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಸಕ್ರಿಯ ಕೊರೋನಾ ಸೋಂಕಿತರ ಸಂಖ್ಯೆ 63 ಸಾವಿರದ 063 ಆಗಿದೆ. ಸಕ್ರಿಯ ಕೇಸುಗಳು ಶೇಕಡಾ 0.15ರಷ್ಟಿದ್ದು, ಗುಣಮುಖ ಹೊಂದುತ್ತಿರುವವರ ಸಂಖ್ಯೆ ಶೇಕಡಾ 98.64 ಆಗಿದೆ. ಇದುವರೆಗೆ ಸೋಂಕಿನಿಂದ ಗುಣಮುಖರಾಗಿ 4 ಕೋಟಿಯ 26 ಲಕ್ಷದ 82 ಸಾವಿರದ 697 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ದೇಶಾದ್ಯಂತ ಇಲ್ಲಿಯವರೆಗೆ 5 ಲಕ್ಷದ 24 ಸಾವಿರದ 817 ಮಂದಿ ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಇನ್ನು ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 5,19,903 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಇದರೊಂದಿಗೆ ಈ ವರೆಗೂ 85 ಕೋಟಿಯ 69 ಲಕ್ಷ ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.
ರಾಷ್ಟ್ರಾದ್ಯಂತ ಕೋವಿಡ್ ಲಸಿಕೆ ಅಭಿಯಾನದಲ್ಲಿ ಇದುವರೆಗೆ 195.84 ಕೋಟಿ ಲಸಿಕೆ ಡೋಸ್ ನ್ನು ವಿತರಿಸಲಾಗಿದೆ. ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ 1,95,67,37,014 ಜನರಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದೆ.