ಕಾಸರಗೋಡು: ಕಾಳಸಂತೆ ಮತ್ತು ಅಕ್ರಮ ದಾಸ್ತಾನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಸೂಚನೆಪ್ರಕಾರ ರಚಿಸಲಾಗಿರುವ ವಿಶೇಷ ತಂಡ ಕಾಸರಗೋಡು ನಗರದ ವಿವಿಧೆಡೆ ವ್ಯಾಪಕ ದಾಳಿ ನಡೆಯಿತು. ಕಾಸರಗೋಡು ನಗರ ಬಸ್‍ನಿಲ್ದಾಣ, ಮಾರ್ಕೆಟ್ ಸೇರಿದಂತೆ 19 ಅಂಗಡಿಗಳಲ್ಲಿ ತಪಾಸಣೆ ನಡೆಸಲಾಯಿತು. ತಾಲೂಕು ಸಪ್ಲೈ ಅಧಿಕಾರಿ ಪಿ ಸಜಿಕುಮಾರ್ ನೇತೃತ್ವದಲ್ಲಿ ನಡೆದ ಪರಿಶೋಧನೆಯಲ್ಲಿ ಪೆÇಲೀಸರು, ತಹಸೀಲ್ದಾರ್, ಸಿವಿಲ್ ಸಪ್ಲೈಸ್ ಸೀನಿಯರ್ ಸೂಪರಿಂಟೆಂಡೆಂಟ್, ನಗರ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು. ಕಾಳಸಂತೆ ಮತ್ತು ಅಕ್ರಮ ದಾಸ್ತಾನು ತಡೆಗಟ್ಟುವ ನಿಟ್ಟಿನಲ್ಲಿ ಪರಿಶೋಧನೆ ಮುಂದುವರಿಯಲಿರುವುದಾಗಿ ನಾಗರಿಕ ಪಊರೈಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.