ನವದೆಹಲಿ: ಭಾರತೀಯ ರೈಲ್ವೆಯ ಸರಕು ಸಾಗಣೆ ಮತ್ತು ಲಾಜಿಸ್ಟಿಕ್ಸ್ ಮೌಲಸೌಕರ್ಯ ಆಧುನೀಕರಿಸಲು ವಿಶ್ವಬ್ಯಾಂಕ್ ₹ 1,917 ಕೋಟಿ (245 ಮಿಲಿಯನ್ ಡಾಲರ್) ಸಾಲವನ್ನು ಅನುಮೋದಿಸಿದೆ.
ನವದೆಹಲಿ: ಭಾರತೀಯ ರೈಲ್ವೆಯ ಸರಕು ಸಾಗಣೆ ಮತ್ತು ಲಾಜಿಸ್ಟಿಕ್ಸ್ ಮೌಲಸೌಕರ್ಯ ಆಧುನೀಕರಿಸಲು ವಿಶ್ವಬ್ಯಾಂಕ್ ₹ 1,917 ಕೋಟಿ (245 ಮಿಲಿಯನ್ ಡಾಲರ್) ಸಾಲವನ್ನು ಅನುಮೋದಿಸಿದೆ.
ರೈಲ್ವೆ ಲಾಜಿಸ್ಟಿಕ್ಸ್ ಯೋಜನೆಯು ಭಾರತದಲ್ಲಿ ರಸ್ತೆಯ ಮೇಲಿನ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ.
ಅಂತರರಾಷ್ಟ್ರೀಯ ಪುನರ್‌ನಿರ್ಮಾಣ ಮತ್ತು ಅಭಿವೃದ್ಧಿ ಬ್ಯಾಂಕ್‌ನಿಂದ (ಐಬಿಆರ್‌ಡಿ) ದೊರೆಯುವ ₹ 1,917 ಕೋಟಿ ಸಾಲದ ಮರುಪಾವತಿ ಅವಧಿ 22 ವರ್ಷಗಳಾಗಿವೆ. ಐಬಿಆರ್‌ಡಿಯು ವಿಶ್ವಸಂಸ್ಥೆಯ ಅಂಗಸಂಸ್ಥೆ.
ಮಾರ್ಚ್ 2020ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷದಲ್ಲಿ 1.2 ಶತಕೋಟಿ ಟನ್ ಸರಕುಗಳನ್ನು ಸಾಗಿಸುವ ಮೂಲಕ ಭಾರತೀಯ ರೈಲ್ವೆ ವಿಶ್ವದ ನಾಲ್ಕನೇ ಅತಿದೊಡ್ಡ ರೈಲು ಜಾಲವಾಗಿ ಮಾರ್ಪಟ್ಟಿದೆ. ಆದರೂ, ಭಾರತದ ಸರಕು ಸಾಗಣೆಯ ಶೇ 71ರಷ್ಟು ರಸ್ತೆಯ ಮೂಲಕ ಸಾಗಿಸಲಾಗುತ್ತದೆ. ಕೇವಲ ಶೇ 17ರಷ್ಟು ಮಾತ್ರ ರೈಲು ಮೂಲಕ ಸಾಗಣೆಯಾಗುತ್ತಿದೆ.