ತಿರುವನಂತಪುರ: ರಾಜ್ಯದಲ್ಲಿ ನಿನ್ನೆ 1,995 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಎರ್ನಾಕುಳಂನಲ್ಲಿ 571, ತಿರುವನಂತಪುರಂನಲ್ಲಿ 336 ಮತ್ತು ಕೊಟ್ಟಾಯಂನಲ್ಲಿ 201 ಪ್ರಕರಣಗಳು ದೃಢಪಟ್ಟಿವೆ.ಎರ್ನಾಕುಳಂನಲ್ಲಿ ಹೆಚ್ಚಿನ ಸಂಖ್ಯೆಯ ರೋಗಿಗಳಿರುವುದು ಗುರುತಿಸಲಾಗಿದೆ. ರಾಜ್ಯದಲ್ಲಿ ನಿನ್ನೆ ಕೋವಿಡ್ ಬಾಧಿಸಿ ಮೃತರಾಗಿಲ್ಲ. 24 ಗಂಟೆಗಳಲ್ಲಿ 1,446 ಮಂದಿ ಗುಣಮುಖರಾಗಿದ್ದಾರೆ. ವಾಸಿಯ ಪ್ರಮಾಣ 98.7 ಶೇ. ಆಗಿದೆ.