ಕೋವಿಡ್-19 ವೈರಾಣುವಿನಿಂದ ಬಳಲಿದವರಿಗೆ ಪಾರ್ಕಿನ್ಸನ್ ರೋಗದಲ್ಲಿ ಕಂಡುಬರುವ ಮೆದುಳು ಕ್ಷೀಣಿಸುವ ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಕೋವಿಡ್-19 ರೋಗಿಗಳಿಗೆ ಸಾಮಾನ್ಯವಾಗಿ ಬ್ರೈನ್ ಫಾಗ್, ತಲೆನೋವು ಮತ್ತು ನಿದ್ರಾಹೀನತೆ, ತೊಡಕುಗಳ ಲಕ್ಷಣ ಕಂಡುಬಂದಿದ್ದು, ವೈರಲ್ ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಇದು ಸಾಮಾನ್ಯವಾಗಿದೆ ಎನ್ನುತ್ತಿದ್ದಾರೆ ಸಂಶೋಧಕರು.
1918 ರಲ್ಲಿ ಇನ್ಫ್ಲುಯೆಂಜಾ ಸಾಂಕ್ರಾಮಿಕ ರೋಗಕ್ಕೆ ಗುರಿಯಾದವರಿಗೆ 10 ವರ್ಷಗಳ ಬಳಿಕ ಎನ್ಸೆಫಾಲಿಕ್ ನಂತರದ ಪಾರ್ಕಿನ್ಸೋನಿಸನ್ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ಸಂಶೋಧಕರು ಹೇಳಿದ್ದಾರೆ.
ಮೂವ್ಮೆಂಟ್ ಡಿಸಾರ್ಡರ್ಸ್ ಎಂಬ ಜರ್ನಲ್ ನಲ್ಲಿ ಈ ಅಧ್ಯಯನ ವರದಿ ಪ್ರಕಟಗೊಂಡಿದ್ದು, ಈ ವರದಿಯ ಪ್ರಕಾರ ಪಾರ್ಕಿನ್ಸನ್ ರೋಗದಲ್ಲಿ ಕಂಡುಬರುವ ನರಜೀವಕೋಶಗಳ ಕ್ಷೀಣಿಸುವಿಕೆಗೆ ಕಾರಣವಾಗುವ ಜೀವಾಣು ವಿಷಕ್ಕೆ ಮೆದುಳಿನ ಸಂವೇದನೆಯನ್ನು ಕೋವಿಡ್ ವೈರಾಣು ಹೆಚ್ಚಿಸುತ್ತದೆ
ಪಾರ್ಕಿನ್ಸನ್ ಎಂಬ ಆರೋಗ್ಯ ಸಮಸ್ಯೆ 55 ವಯಸ್ಸಿನ ಮೇಲ್ಪಟ್ಟವರ ಪೈಕಿ ಶೇ.2 ರಷ್ಟು ಮಂದಿಯನ್ನು ಬಾಧಿಸುವ ರೋಗವಾಗಿದೆ. ಕೋವಿಡ್-19 ವೈರಾಣುವಿನಿಂದ ಬಳಲಿದವರಿಗೆ ಪಾರ್ಕಿನ್ಸನ್ ರೋಗದಲ್ಲಿ ಕಂಡುಬರುವ ಮೆದುಳು ಕ್ಷೀಣಿಸುವ ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆಗಳು ಹೆಚ್ಚಿವೆ ಎಂಬ ಕಾರಣಕ್ಕಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯದ ರಿಚರ್ಡ್ ಸ್ಮೈನೆ ಹೇಳಿದ್ದಾರೆ.