ಕೊರೊನಾ ಲಾಕ್‌ಡೌನ್ ಮಕ್ಕಳ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರಿದೆ. 2019 ಡಿಸೆಂಬರ್‌ನಿಂದ ಕೊರೊನಾ ಎಂಬ ಮಹಾಮಾರಿ ಈ ಜಗತ್ತನ್ನು ಕಾಡಲು ಪ್ರಾರಂಭಿಸಿದ್ದು ಇನ್ನೂ ಅದರ ಉಪಟಳದಿಂದ ಸಂಪೂರ್ಣವಾಗಿ ಮುಕ್ತವಾಗಿಲ್ಲ. ಎರಡು ವರ್ಷವಂತೂ ಮಕ್ಕಳು ಹೊರಗಡೆ ಆಟ-ಪಾಠಗಳಲ್ಲಿದೆ ಮನೆಯೊಳಗಡೇ ಲಾಕ್ ಆದಂತೆ ಇದ್ದರು. ಇದರ ಪರಿನಾಮ ಈಗ ಮಕ್ಕಳ ಆರೋಗ್ಯದ ಮೇಲೆ ಕಂಡು ಬರುತ್ತಿದೆ. ಆ ಸಮಯದಲ್ಲಿ ಮಕ್ಕಳಿಗೆ ದೈಹಿಕ ಚಟುವಟಿಕೆಗಳಿರಲಿಲ್ಲ ಅಲ್ಲದೆ ಆನ್‌ಲೈನ್ ಓದು, ಮನೆಯಲ್ಲಿರುವ ಸಮಸ್ಯೆಗಳು ಇವೆಲ್ಲಾ ಮಕ್ಕಳ ಆರೋಗ್ಯದ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರಿದೆ.
ಇದೀಗ ಭಾರತದಲ್ಲಿ ಮಕ್ಕಳಲ್ಲಿ ಟೈಪ್ 1 ಮಧುಮೇಹ ಹೆಚ್ಚಾಗುತ್ತಿದೆ ಐಸಿಎಂಆರ್ (Indian Council of Medical Research) ಹೇಳಿದ್ದು ಇದನ್ನು ನಾವೆಲ್ಲಾ ತುಂಬಾ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಮಕ್ಕಳೇ ಭವಿಷ್ಯದ ಆಸ್ತಿ, ಆದ್ದರಿಂದ ಅವರ ಆರೋಗ್ಯದ ಕಡೆಗೆ ಗಮನ ನೀಡುವುದು ಕೂಡ ಅಷ್ಟೇ ಮುಖ್ಯವಾಗಿದೆ.
ಟೈಪ್ 1, ಟೈಪ್2 ಮಧುಮೇಹ ಸಮಸ್ಯೆಯೂ ಹೆಚ್ಚಾಗುತ್ತಿದೆ
ಮಧುಮೇಹದಲ್ಲಿ 2 ವಿಧ. ಟೈಪ್ 1 ಮಧುಮೇಹ ಹಾಗೂ ಟೈಪ್ 2 ಮಧುಮೇಹ. ಟೈಪ್ 2 ಮಧುಮೇಹ ಸಾಮಾನ್ಯವಾಗಿ ದೊಡ್ಡವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ, ಆದರೆ ಇತ್ತೀಚೆಗೆ ಚಿಕ್ಕ ಮಕ್ಕಳಲ್ಲಿಯೂ ಟೈಪ್ 2 ಮಧುಮೇಹ ಕಂಡು ಬರುತ್ತಿದೆ. ಸಾಮಾನ್ಯವಾಗಿ ಮಕ್ಕಳಲ್ಲಿ ಟೈಪ್ 1 ಮಧುಮೇಹ ಕಂಡು ಬರುತ್ತಿತ್ತು, ಇದೀಗ ಟೈಪ್ 2 ಕೂಡ ಕಂಡು ಬರುತ್ತಿದೆ.
ಕಳೆದ ಮೂರು ದಶಕಗಳಲ್ಲಿ ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಶೇ. 150ಷ್ಟು ಹೆಚ್ಚಾಗಿದೆ
ವಿಶ್ವದಲ್ಲಿ ಅತ್ಯಧಿಕ ಮಧುಮೇಹಿಗಳಿರುವ ರಾಷ್ಟ್ರಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಭಾರತದ ಜನಸಂಖ್ಯೆಯಲ್ಲಿ ಪ್ರತೀ 6 ಜನರಲ್ಲಿ ಒಬ್ಬರಿಗೆ ಮಧುಮೇಹವಿದೆ. ಒಂದು ಲಕ್ಷ ಜನರಲ್ಲಿ 4.9ರಷ್ಟು ಜನರಿಗೆ ಟೈಪ್ 1 ಮಧುಮೇಹ ಉಂಟಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಟೈಪ್ 1 ಮಧುಮೇಹವೆಂದರೇನು?
ಇನ್ಸುಲಿನ್ ಕೊರತೆಯಿಂದಾಗಿ ಟೈಪ್ 1 ಮಧುಮೇಹ ಉಂಟಾಗುವುದು. ಮಕ್ಕಳು ಅಥವಾ ಹದಿಹರೆಯದವರಲ್ಲಿ ಈ ರೀತಿಯ ಸಮಸ್ಯೆ ಕಂಡು ಬರುತ್ತಿದೆ. ಮೇಧೋಜೀರಕ ಗ್ರಂಥಿ (pancreas) ಇನ್ಸುಲಿನ್ ಉತ್ಪತ್ತಿ ಮಾಡುವುದನ್ನು ನಿಲ್ಲಿಸಿದಾಗ ಅಥವಾ ಕಡಿಮೆ ಉತ್ಪತ್ತಿ ಮಾಡಿದಾಗ ರಕ್ತ ಕಣಗಳಿಗೆ ಸಕ್ಕರೆಯಂಶ ತಲುಪದೇ ಇರುವ ಸ್ಥಿತಿಗೆ ಟೈಪ್ 1 ಮಧುಮೇಹ ಎಮದು ಕರೆಯಲಾಗುವುದು.
ಟೈಪ್ 1 ಮಧುಮೇಹ ನಿಯಂತ್ರಿಸುವುದು ಹೇಗೆ? ಇದೀಗ ಮಕ್ಕಳಲ್ಲಿ ಟೈಪ್ 1 ಮಧುಮೇಹದ ಸಮಸ್ಯೆ ಕಂಡು ಬರುತ್ತಿರುವುರಿಂದ ಅದನ್ನು ನಿಯಂತ್ರಿಸಲು ICMR ಈ ಕೆಳಗಿನ ಪ್ರಮುಖ ಸಲಹೆ ನೀಡಿದೆ ಅದರಲ್ಲಿ ಮಕ್ಕಳಿಗೆ ಪ್ರತಿನಿತ್ಯದ ವ್ಯಾಯಾಮದ ಜೊತೆಗೆ ಪೋಷಕಾಂಶವಿರುವ ಆಹಾರದ ಕಡೆಗೆ ಗಮನ ನೀಡುವುದು ಕೂಡ ಆಗಿದೆ.
ಮಕ್ಕಳಲ್ಲಿ ಟೈಪ್ 1 ಮಧುಮೇಹ ನಿಯಂತ್ರಣಕ್ಕೆ ಈ ಅಂಶಗಳ ಕಡೆ ಗಮನ ನೀಡಿ * ಆರೋಗ್ಯಕರ ಆಹಾರಕ್ರಮ ICMR ಮಕ್ಕಳಿಗೆ ಆರೋಗ್ಯಕರ ಆಹಾರಕ್ರಮ ನೀಡಲು ಸಲಹೆ ನೀಡಿದೆ. ಮಕ್ಕಳಿಗೆ ನೀಡುವ ಆಹಾರದಲ್ಲಿ ಒಟ್ಟು ಕ್ಯಾಲೋರಿಯಲ್ಲಿ ಕಾರ್ಬೋಹೈಡ್ರೇಟ್ 50-55ರಷ್ಟು ಇರಬೇಕು, ಕೊಬ್ಬಿನಂಶ ಶೇ. 30ರಷ್ಟು ಇರಬೇಕು, ಪ್ರೊಟೀನ್ ಶೇ. 15-20ರಷ್ಟು ಇರಬೇಕು. ಮಕ್ಕಳಿಗೆ ಉಪ್ಪಿನಂಶ ಅಧಿಕವಿರುವ ಆಹಾರ ಕಡಿಮೆ ನೀಡಬೇಕು. ಮಕ್ಕಳಿಗೆ ಜಂಕ್ ಫುಡ್ಸ್ ನಿಡುವುದು ಕಡಿಮೆ ಮಾಡಿ. * ವ್ಯಾಯಾಮ ಮಾಡಿ ಮಕ್ಕಳ ಆರೋಗ್ಯಕ್ಕೆ ದೈಹಿಕ ವ್ಯಾಯಾಮ ತುಂಬಾ ಮುಖ್ಯ, ಮಕ್ಕಳು ಟಿವಿ, ಮೊಬೈಲ್ ಮುಂದೆ ಹೆಚ್ಚು ಕೂರುವ ಬದಲಿಗೆ ಹೊರಗಿನ ಚಟುವಟಿಕೆ ಕಡೆ ಹೆಚ್ಚು ಗಮನ ಹರಿಸಿ, ಅವರನ್ನು ಹೊರಗಡೆ ಹೋಗಿ ಆಡುವಂತೆ ಉತ್ತೇಜಿಸಿ. ತುಂಬಾ ಪೋಷಕರು ಹೊರಗಡೆ ಹೋಗಬೇಡ, ಮನೆಯಲ್ಲಿಯೇ ಆಟ ಆಡು ಎಂದು ಹೇಳ್ತಾ ಇರುತ್ತಾರೆ, ಅದು ತಪ್ಪು, ಮಕ್ಕಳು ಮೈದಾನದಲ್ಲಿ ಆಡಿದಷ್ಟು ಹೆಚ್ಚು ಆರೋಗ್ಯವಂತರಾಗುತ್ತಾರೆ. ಸ್ವಿಮ್ಮಿಂಗ್, ಸೈಕ್ಲಿಂಗ್ ಎಲ್ಲಾ ಮಾಡಿಸಿ. ಅವರ ರಕ್ತದಲ್ಲಿ ಸಕ್ಕರೆಯಂಶ ಎಷ್ಟಿದೆ ಎಂದು ನಿಯಮಿತವಾಗಿ ಪರೀಕ್ಷಿಸಿ ಟೈಪ್ 1 ಮಧುಮೇಹದ ಸಮಸ್ಯೆವಿದ್ದರೆ ಮಕ್ಕಳ ರಕ್ತದಲ್ಲಿ ಗ್ಲುಕೋಸ್ ಎಷ್ಟಿದೆ ಎಂಬುವುದನ್ನು ನಿಯಮಿತವಾಗಿ ಪರೀಕ್ಷಿಸಬೇಕು. ಇನ್ಸುಲಿನ್ ಥೆರಪಿ ಮಕ್ಕಳಿಗೆ ಟೈಪ್ 1 ಇರುವುದು ಗೊತ್ತಾದರೆ ಇನ್ಸುಲಿನ್ ಥೆರಪಿ ಪ್ರಾರಂಭಿಸಬೇಕು. ತಜ್ಞರು ನೀಡಿರುವ ಸಲಹೆಯನ್ನು ತಪ್ಪದೆ ಪಾಲಿಸಬೇಕು.