HEALTH TIPS

ಜು.1ರಿಂದ ಕಾರ್ವಿುಕ ಕಾಯ್ದೆ?; ವಾರದಲ್ಲಿ ನಾಲ್ಕೇ ದಿನ ಕೆಲಸಕ್ಕೆ ಅವಕಾಶ..

 ನವದೆಹಲಿ: ಇನ್ನುಮುಂದೆ ಕಾರ್ವಿುಕರು ವಾರದಲ್ಲಿ ನಾಲ್ಕು ದಿನ ಕೆಲಸ ಮಾಡಿದರೆ ಸಾಕು…! ಉಳಿದ ಮೂರು ದಿನಗಳನ್ನು ವಾರದ ರಜೆಯಾಗಿಸಿಕೊಳ್ಳಬಹುದು. 20ಕ್ಕೂ ಅಧಿಕ ಕಾರ್ವಿುಕ ಕಾಯ್ದೆಗಳನ್ನು ಒಗ್ಗೂಡಿಸಿ ರೂಪಿಸಲಾಗಿರುವ ಕಾರ್ವಿುಕ ಸಂಹಿತೆಗಳನ್ನು ಕೇಂದ್ರ ಸರ್ಕಾರವು ಜುಲೈ 1ರಿಂದ ಜಾರಿಗೊಳಿಸುವ ನಿರೀಕ್ಷೆಯಿದೆ.

ಈ ಮೂಲಕ ಕೆಲಸದ ಅವಧಿ, ಗಳಿಕೆ ರಜೆ, ಪಿಂಚಣಿ, ಆರೋಗ್ಯ, ಕೆಲಸದ ಸ್ಥಳದ ಸ್ಥಿತಿಗತಿಯಲ್ಲಿ ಭಾರಿ ಬದಲಾವಣೆಗಳು ಕಂಡುಬರಲಿವೆ. ಒಂದು ವಾರಕ್ಕೆ ನಾಲ್ಕು ದಿನದ ಕೆಲಸದ ನಿಯಮ ಅದರಲ್ಲಿ ಒಂದು ಪ್ರಮುಖ ಅಂಶವಾಗಿದೆ. ಉದ್ಯೋಗಿಯ ಭವಿಷ್ಯ ನಿಧಿ ಕೊಡುಗೆ, ಕೆಲಸದ ಅವಧಿ ಮತ್ತು ಟೇಕ್ ಹೋಮ್ ಸಂಬಳದಲ್ಲಿಯೂ ಮಾರ್ಪಾಡುಗಳಾಗಲಿವೆ. ಇದಲ್ಲದೆ, ಕನಿಷ್ಠ ಮೂಲ ವೇತನಕ್ಕೂ ನಿಯಮಗಳನ್ನು ರೂಪಿಸಲಾಗಿದೆ.

ಕೆಲಸದ ಅವಧಿ ಹೇಗಿರಲಿದೆ?: ಹೊಸ ಕಾನೂನು ಜಾರಿಯಾದರೆ ನೌಕರರು ವಾರದಲ್ಲಿ ಮೂರು ದಿನ ರಜೆ ಪಡೆಯಬಹುದು. ಆದರೆ, ವಾರದ ಕೆಲಸದ ಅವಧಿಯಲ್ಲೇನೂ ಕಡಿತವಾಗುವುದಿಲ್ಲ. ಒಂದು ದಿನದ ಕೆಲಸವನ್ನು ಸರಿಹೊಂದಿಸುವ ಯೋಜನೆ ರೂಪಿಸಲಾಗಿದೆ. ಉದ್ಯೋಗಿಗಳು ಪ್ರತಿದಿನ 10ರಿಂದ 12 ಗಂಟೆಯಂತೆ ನಾಲ್ಕು ದಿನ ಕೆಲಸ ಮಾಡಿ ಉಳಿದ ಮೂರು ದಿನ ವೀಕ್​ಆಫ್ ಪಡೆಯಬಹುದೆಂದು ಹೊಸ ಕಾರ್ವಿುಕ ಕಾನೂನು ಹೇಳುತ್ತದೆ.

ಕೆಲಸದ ಸ್ಥಳ: ಕೆಲಸದ ಸ್ಥಳದಲ್ಲಿ ಉತ್ತಮ ವಾತಾವರಣವಿರಬೇಕು. ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಬೇಕು. ನಿಗದಿತವಾಗಿ ಕಾರ್ವಿುಕರ ಆರೋಗ್ಯ ತಪಾಸಣೆ ನಡೆಸಬೇಕು. ಮಹಿಳಾ ಉದ್ಯೋಗಿಗಳಿಗೆ ರಾತ್ರಿಪಾಳಿ ನೀಡುವುದಾದಲ್ಲಿ ಅವರ ಅವರ ಅನುಮತಿ ಪಡೆದಿರಬೇಕು. ಉದ್ಯೋಗಿಗಳಿಗೆ ಕಲ್ಪಿಸಬೇಕಾದ ಸಾಮಾಜಿಕ ಸೌಲಭ್ಯಗಳ ಬಗ್ಗೆಯೂ ಸಂಹಿತೆಗಳಲ್ಲಿ ಉಲ್ಲೇಖಿಸಲಾಗಿದೆ.

ಸಂಹಿತೆಗಳು ಯಾವುವು?

  1. ವೇತನ ಸಂಹಿತೆ (ಕೋಡ್ ಆನ್ ವೇಜಸ್)
  2. ಕೈಗಾರಿಕಾ ಬಾಂಧವ್ಯ ಸಂಹಿತೆ (ಕೋಡ್ ಆನ್ ಇಂಡಸ್ಟ್ರೀಯಲ್ ರಿಲೇಷನ್ಸ್)
  3. ಸಾಮಾಜಿಕ ಭದ್ರತಾ ಸಂಹಿತೆ (ಕೋಡ್ ಆನ್ ಸೋಷಿಯಲ್ ಸೆಕ್ಯುರಿಟಿ)
  4. ಔದ್ಯೋಗಿಕ ಆರೋಗ್ಯ, ಸುರಕ್ಷತೆ ಮತ್ತು ಸೇವಾ ಷರತ್ತುಗಳ ಸಂಹಿತೆ (ದಿ ಆಕ್ಯುಪೇಷನಲ್ ಸೇಫ್ಟಿ ಹೆಲ್ತ್ ಆಂಡ್ ರ್ವಂಗ್ ಕಂಡೀಷನ್ಸ್)

ಓ.ಟಿ. 125 ಗಂಟೆಗೆ ಏರಿಕೆ: ಇದುವರೆಗೆ ಫ್ಯಾಕ್ಟರಿ ಕಾನೂನು ಅನ್ವಯ ಇದ್ದ ಕನಿಷ್ಠ ಓವರ್​ಟೈಮ್ (ಓ.ಟಿ.) ಗಂಟೆಗಳು ಒಂದು ತ್ರೖೆಮಾಸಿಕದಲ್ಲಿ ಈಗಿರುವ 50 ಗಂಟೆಯಿಂದ 125 ಗಂಟೆಗೆ ಜಿಗಿಯಲಿದೆ.

ಮೂಲ ವೇತನ ಹೆಚ್ಚಳ: ಮೂಲ ವೇತನವು ಒಟ್ಟು ಸಂಬಳದ ಶೇಕಡ 50ರಷ್ಟಿರಬೇಕು. ಅಂದರೆ, ಉದ್ಯೋಗಿ ಹಾಗೂ ಮಾಲೀಕ -ಇಬ್ಬರ ಪಿಎಫ್ ಕೊಡುಗೆಯೂ ಹೆಚ್ಚಲಿದ್ದು, ಕೆಲವು ನೌಕರರ ಟೇಕ್ ಹೋಂ ಸ್ಯಾಲರಿ ಕಡಿಮೆಯಾಗಲಿದೆ. ವಿಶೇಷವಾಗಿ ಖಾಸಗಿ ಸಂಸ್ಥೆಗಳ ನೌಕರರಿಗೆ ಇದು ಅನ್ವಯವಾಗಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries