ತಿರುವನಂತಪುರ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಂದು 2415ಕ್ಕೆ ತಲಪಿದ್ದು, ಸತತ ಮೂರನೇ ದಿನವೂ ದಿನಕ್ಕೆ 2000 ರೋಗಿಗಳ ಸಂಖ್ಯೆ ದಾಟಿದೆ. ಎರ್ನಾಕುಳಂನಲ್ಲಿ 796 ಮಂದಿ ಜನರಲ್ಲಿ ಕೊರೋನಾ ದೃಢಪಟ್ಟಿದೆ.ತಿರುವನಂತಪುರ 368, ಕೊಟ್ಟಾಯಂ 260 ಮತ್ತು ಕೋಝಿಕ್ಕೋಡ್ 213 ಅತಿ ಹೆಚ್ಚು ಕೊರೋನಾ ಪ್ರಕರಣಗಳನ್ನು ಹೊಂದಿರುವ ಇತರ ಜಿಲ್ಲೆಗಳಾಗಿವೆ. ಕೊರೊನಾ ಸೋಂಕಿನಿಂದ ಐವರು ಸಾವನ್ನಪ್ಪಿದ್ದಾರೆ.
ಕೊರೊನಾ ಪ್ರಕರಣಗಳ ಹೆಚ್ಚಳದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಪುನರುಚ್ಚರಿಸುತ್ತಿದ್ದಂತೆ ಏಕಾಏಕಿ ಏರಿಕೆ ಸಂಭವಿಸಿದೆ. ಇತ್ತೀಚಿನ ಅಂಕಿಅಂಶಗಳ ಹಿನ್ನೆಲೆಯಲ್ಲಿ ಜಾಗರೂಕರಾಗಿರಲು ಆರೋಗ್ಯ ಇಲಾಖೆ ಜಿಲ್ಲೆಗಳಿಗೆ ಸೂಚಿಸಿದೆ.