ನವದೆಹಲಿ: ವರ್ಷದ ಮೊದಲ ಭಾಗದಲ್ಲಿ ಭಾರತ 14 ಹೊಸ ಯೂನಿಕಾರ್ನ್ ಗಳನ್ನು ಸೃಷ್ಟಿಸಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಜಿತೇಂದ್ರ ಸಿಂಗ್ ನೀಡಿರುವ ಮಾಹಿತಿಯ ಪ್ರಕಾರ, ಕಳೆದ 8 ವರ್ಷಗಳಲ್ಲಿ ದೇಶದಲ್ಲಿ ಸ್ಟಾರ್ಟ್ ಅಪ್ ಗಳ ಸಂಖ್ಯೆ 300 ರಿಂದ 70,000ಕ್ಕೆ ಏರಿಕೆಯಾಗಿದ್ದು ಶೇ.20,000 ಹೆಚ್ಚಳ ಕಂಡಿದೆ.
"ಭಾರತದ ಆರ್ಥಿಕತೆಯ ಭವಿಷ್ಯವನ್ನು ಸ್ಟಾರ್ಟ್ ಅಪ್ ಗಳು ನಿರ್ಧರಿಸಲಿದ್ದು, ಅದಕ್ಕೆ ತಕ್ಕಂತಹ ವಾತಾವರಣ ನಿರ್ಮಾಣ ಮಾಡುವತ್ತ ಗಮನ ಹರಿಸಬೇಕು" ಎಂದು ಸಚಿವರು ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿ ಪ್ರತಿ 10 ಯೂನಿಕಾರ್ನ್ ಸಂಸ್ಥೆಗಳಲ್ಲಿ ಒಂದು ಭಾರತದ್ದಾಗಿರುತ್ತದೆ ಎಂಬ ಅಂಶ ಹೆಮ್ಮೆಯ ಸಂಗತಿಯಾಗಿದೆ ಎಂದು ಸಚಿವರು ಪಿಹೆಚ್ ಡಿ ಚೇಂಬರ್ ಆಫ್ ಕಾಮರ್ಸ್, ಇಂಡಸ್ಟ್ರಿಯ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.