ಫ್ರೆಂಚ್ ಓಪನ್ 2022ರ ಪುರುಷರ ಫೈನಲ್ ಪಂದ್ಯದಲ್ಲಿ ರಾಫೆಲ್ ನಡಾಲ್ ಅವರು ಕ್ಯಾಸ್ಪರ್ ರುಡ್ ರನ್ನು ಸೋಲಿಸಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದು ಬೀಗಿದರು.
ರಾಫೆಲ್ ನಡಾಲ್ ಅವರು ಕ್ಯಾಸ್ಪರ್ ರುಡ್ ರನ್ನು 6-3, 6-3, 6-0 ನೇರ ಸೆಟ್‌ಗಳಿಂದ ಸೋಲಿಸಿ 14ನೇ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದರು. ಇದರೊಂದಿಗೆ ಅವರು ಒಟ್ಟಾರೆ 22ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದುಕೊಂಡರು.
ಎಂಟನೇ ಶ್ರೇಯಾಂಕದ ರೂಡ್ ತನ್ನ ಮೊದಲ ಗ್ರ್ಯಾಂಡ್ ಸ್ಲಾಮ್ ಫೈನಲ್‌ನಲ್ಲಿ ಆಡಿದ ನಾರ್ವೆಯ 23 ವರ್ಷದ ಯುವಕ.