ಮಂಜೇಶ್ವರ: ಡಿ.ವೈ.ಎಫ್.ಐ ಮೀಂಜ ವಿಲೇಜ್ ಸಮಿತಿಗಳ ವತಿಯಿಂದ ತೊಟ್ಟೆತ್ತೋಡಿ ಕಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ಮಕ್ಕಳಿಗೂ ಕಲಿಕೋಪಕರಣಗಳನ್ನು ವಿತರಿಸಲಾಯಿತು. ಕಲಿಕೋತ್ಸವದ ಕಾರ್ಯಕ್ರಮವನ್ನು ಡಿ.ವೈ.ಎಫ್.ಐ ಕಾಸರಗೋಡು ಜಿಲ್ಲಾ ಸಮಿತಿ ಕಾರ್ಯದರ್ಶಿ ರಜೀಶ್ ವೆಲ್ಲಾಟ್ ಉದ್ಘಾಟಿಸಿದರು. ಹಾಗೂ ಎಲ್.ಎಸ್.ಎಸ್. ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ಸ್ಕಾಲರ್‍ಶಿಪ್‍ಗೆ ಅರ್ಹರಾದ ಇದೇ ಶಾಲೆಯ ಹಳೆ ವಿದ್ಯಾರ್ಥಿ ಮೋಕ್ಷಿತ್ ತೊಟ್ಟೆತ್ತೋಡಿ ಇವರನ್ನು ಸನ್ಮಾನಿಸಲಾಯಿತು. ಡಿ.ವೈ.ಎಫ್.ಐ ಮೀಂಜ ವಿಲೇಜ್ ಸಮಿತಿ ಕಾರ್ಯದರ್ಶಿ ಅನಿಲ್ ಕುಮಾರ್ ಸಿ ಅಧ್ಯಕ್ಷತೆ ವಹಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ರಾಜೇಶ್ವರಿ ಉದ್ಘಾಟಿಸಿದರು. ಮೀಂಜ ಗ್ರಾಮ ಪಂಚಾಯತಿ ಸ್ಥಾಯೀ ಸಮಿತಿ ಅ|ಧ್ಯಕ್ಷೆ ಸರಸ್ವತಿ ಲೈಬ್ರೇರಿ ಸಮಿತಿ ಅಧ್ಯಕ್ಷ ರಾಮಚಂದ್ರ ಟಿ, ಡಿ.ವೈ.ಎಫ್.ಐ ನೇತಾರರಾದ ಸಾದಿಕ್ ಚೆರುಗೋಳಿ, ಸಿದ್ದಿಕ್ ಮೀಯಪದವು, ವಿನೋದ್‍ರಾಜ್, ಪ್ರತೀಕ್, ರಂಜಿತ್, ಗಣೇಶ್ ಜಪ್ಪ, ದಿನೇಶ್, ಅವಿನಾಶ್, ಸುಧಾಕರ, ಆಸಿಫ್ ಬಟ್ಟಿಪದವು ಉಪಸ್ಥಿತರಿದ್ದರು. ಡಿ.ವೈ.ಎಫ್.ಐ ವಿಲೇಜ್ ಸಮಿತಿ ಅಧ್ಯಕ್ಷ ಉದಯ ಸಿ.ಹೆಚ್ ವಂದಿಸಿದರು.