ನವದೆಹಲಿ: ಮೇ ತಿಂಗಳಲ್ಲಿ ಭಾರತದ ರಫ್ತು ಶೇ.20.55 (38.94 ಬಿಲಿಯನ್ ಡಾಲರ್) ಗೆ ಏರಿಕೆಯಾಗಿದೆ. ಆದರೆ ವ್ಯಾಪಾರದ ಕೊರತೆ ಮಾತ್ರ ದಾಖಲೆಯ 24.29 ಬಿಲಿಯನ್ ಡಾಲರ್ ಗೆ ತಲುಪಿದೆ.
ಸರ್ಕಾರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ ಭಾರತದ ಆಮದು ಶೇ.62.83 (63.22 ಬಿಲಿಯನ್ ಡಾಲರ್) ರಷ್ಟು ಏರಿಕೆಯಾಗಿದ್ದು, ವ್ಯಾಪಾರದ ಕೊರತೆ (ವ್ಯತ್ಯಾಸ) 6.53 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದ್ದು ಕಳೆದ ವರ್ಷದ ಮೇ ತಿಂಗಳಿನಷ್ಟೇ ಇದೆ.
ಏಪ್ರಿಲ್- ಮೇ ತಿಂಗಳ ಒಟ್ಟು ರಫ್ತು ಪ್ರಮಾಣ, ಶೇ.25 ರಷ್ಟು ಏರಿಕೆಯಾಗಿದ್ದು, 78.72 ಬಿಲಿಯನ್ ನಷ್ಟಾಗಿದೆ. ಏಪ್ರಿಲ್- ಮೇ ತಿಂಗಳ ಆಮದು ಶೇ.45.42 ರಷ್ಟು (123.41 ಬಿಲಿಯನ್ ಡಾಲರ್) ಏರಿಕೆ ಕಂಡಿದೆ.
ಮೇ ತಿಂಗಳಲ್ಲಿನ ಆಮದಿನ ಪಟ್ಟಿಯಲ್ಲಿ ತೈಲ ಹಾಗೂ ಕಚ್ಚಾ ತೈಲ ಆಮದಿನ ಪ್ರಮಾಣ ಶೇ.102.72 ರಷ್ಟು (19.2 ಬಿಲಿಯನ್ ಡಾಲರ್) ಏರಿಕೆಯಾಗಿದೆ. ಕಲ್ಲಿದ್ದಲು, ಕೋಕ್ ಮತ್ತು ಬ್ರಿಕೆಟ್ಗಳು 5.5 ಬಿಲಿಯನ್ ಡಾಲರ್ ಗೆ ಜಿಗಿತ ಕಂಡಿದೆ ಇದು 2021 ರ ಮೇ ತಿಂಗಳಲ್ಲಿ 2 ಬಿಲಿಯನ್ ಡಾಲರ್ ನಷ್ಟಿತ್ತು. ಚಿನ್ನದ ಆಮದು 6 ಬಿಲಿಯನ್ ಗೆ ಏರಿಕೆಯಾಗಿದೆ. 2021 ರ ಮೇ ತಿಂಗಳಲ್ಲಿ ಇದು 677 ಮಿಲಿಯನ್ ಡಾಲರ್ ನಷ್ಟಿತ್ತು.