ನವದೆಹಲಿ: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತ ತಂಡವನ್ನು ಮಣಿಸಿ ಮೊದಲ ಜಯ ದಾಖಲಿಸಿದೆ.
ಐದು ಪಂದ್ಯಗಳ ಟಿ-20 ಸರಣಿ ಇದಾಗಿದ್ದು, ಪಂದ್ಯದಲ್ಲಿ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಮತ್ತು ಡೇವಿಡ್ ಮಿಲ್ಲರ್ ಮಿಂಚಿದ್ದು ಅನುಕ್ರಮವಾಗಿ 75, 64 ರನ್ ಗಳನ್ನು ಗಳಿಸಿ ಭಾರತ ನೀಡಿದ್ದ 211 ರನ್ ಗಳ ಗುರಿಯನ್ನು 19.1 ಓವರ್ ಗಳಿಗೆ 3 ವಿಕೆಟ್ ನಷ್ಟಕ್ಕೆ 212 ರನ್ ಗಳಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡ ಸುಲಭ ಜಯ ದಾಖಲಿಸಿತು.
ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಮತ್ತು ಡೇವಿಡ್ ಮಿಲ್ಲರ್ 131 ರನ್ ಗಳ ಜೊತೆಯಾಟ ಕಟ್ಟಿದರು. ಈ ಎರಡು ಆಟಗಾರರನ್ನು ನಿಯಂತ್ರಿಸಲು ಭಾರತದ ಬೌಲರ್ ಗಳು ವಿಫಲರಾದರು.