ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಹೆಸರು ಅಂತಿಮಗೊಳಿಸಲು ಮಂಗಳವಾರ 21ರಂದು ಮಧ್ಯಾಹ್ನ ವಿರೋಧ ಪಕ್ಷಗಳ ನಾಯಕರು ಸಭೆ ನಡೆಸಲಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಅವರು ಸ್ಪರ್ಧೆಯಿಂದ ಹಿಂದೆ ಸರಿದ ಬಳಿಕ ಗೋಪಾಲಕೃಷ್ಣ ಗಾಂಧಿ ಹೆಸರು ಮುಂಚೂಣಿಯಲ್ಲಿದೆ.

ಮಧ್ಯಾಹ್ನ 2.30ಕ್ಕೆ ನಡೆಯುವ ಸಭೆಯಲ್ಲಿ ಹಿರಿಯ ನಾಯಕರಾದ ಶರದ್ ಪವಾರ್, ಮಲ್ಲಿಕಾರ್ಜುನ ಖರ್ಗೆ, ಸೀತರಾಂ ಯೆಚೂರಿ, ಡಿ.ರಾಜಾ ಸೇರಿದಂತೆ ಹಲವರು ಭಾಗವಹಿಸುವರು ಎಂದು ಮೂಲಗಳು ತಿಳಿಸಿವೆ. ಪೂರ್ವ ನಿಗದಿತ ಕಾರ್ಯಕ್ರಮದ ಅಂಗವಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಂಗಳವಾರದ ಸಭೆಯಲ್ಲಿ ಭಾಗವಹಿಸುತ್ತಿಲ್ಲ. ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡುವ ಸಲುವಾಗಿ ಕಳೆದ ಬುಧವಾರ ನಡೆದ ಮೊದಲ ಸಭೆಯಲ್ಲಿ 17 ಪಕ್ಷಗಳು ಪಾಲ್ಗೊಂಡಿದ್ದವು.
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ನಂತರ ಅಬ್ದುಲ್ಲಾ ಸ್ಪರ್ಧಿಸಲು ನಿರಾಕರಿಸಿದ ಬಳಿಕ, ಚುನಾವಣಾ ಕದನದಲ್ಲಿ ಮಹಾತ್ಮ ಗಾಂಧಿ ಅವರ ಮೊಮ್ಮಗ ಗಾಂಧಿ ಬಗ್ಗೆ ನಾಯಕರು ಒಲವು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನು ಪ್ರತಿಪಕ್ಷಗಳು ಗಾಂಧಿ ಮತ್ತು ಗೋಡ್ಸೆ ವಿರುದ್ಧದ ಸೈದ್ಧಾಂತಿಕ ಹೋರಾಟವಾಗಿಸಲು ನಿರ್ಧರಿಸಿವೆ.
ತೃಣಮೂಲ ಕಾಂಗ್ರೆಸ್‌ನಂತೆಯೇ ಡಿ.ಎಂ.ಕೆ ಮತ್ತು ಶಿವಸೇನಾ ತನ್ನ ಪ್ರತಿನಿಧಿಗಳನ್ನು ಕಳುಹಿಸುತ್ತಿವೆ. ಮೊದಲ ಸಭೆಯಿಂದ ಹೊರಗುಳಿದಿದ್ದ ಟಿಆರ್‌ಎಸ್, ಎಎಪಿ ಮಂಗಳವಾರ ಹಾಜರಾಗುತ್ತಾರೆಯೇ ಎಂದು ನೋಡಬೇಕು. ವೈಎಸ್‌ಆರ್ ಕಾಂಗ್ರೆಸ್, ಅಕಾಲಿದಳ ಮತ್ತು ಬಿಜೆಡಿ ಚರ್ಚೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ನಾಯಕರಿಗೂ ಭರವಸೆ ಇಲ್ಲ.