ಕೇಂದ್ರ ಸರ್ಕಾರ ಶಿಕ್ಷಣದಲ್ಲಿ ಯೋಗ ಕಲಿಕೆ ಕಡ್ಡಾಯಗೊಳಿದೆ. ರಾಜ್ಯದ ಕೆಲವು ಶಿಕ್ಷಣ ಸಂಸ್ಥೆಗಳು ಯೋಗ ಕಲಿಕೆಯ ವಿವಿಧ ಕೋರ್ಸ್‌ಗಳನ್ನು ಆರಂಭಿಸಿವೆ. ನಾಳಿನ (ಜೂನ್ 21) ವಿಶ್ವಯೋಗ ದಿನದ ಹಿನ್ನೆಲೆಯಲ್ಲಿ ಎಲ್ಲೆಲ್ಲಿ ಯಾವ ಕೋರ್ಸ್‌ಗಳಿವೆ ತಿಳಿಯೋಣ ಬನ್ನಿ.
ಭಾರತೀಯ ಯೋಗಾಸನದ ಮಹತ್ವವನ್ನು ಗಮನಿಸಿದ ವಿಶ್ವಸಂಸ್ಥೆ, ಜೂನ್ 21 ಅನ್ನು 'ಅಂತರರಾಷ್ಟ್ರೀಯ ಯೋಗದಿನ'ವೆಂದು ಘೋಷಿಸಿತು. ಅಲ್ಲಿವರೆಗೆ ವಿಶ್ವದ ಕೆಲವೇ ರಾಷ್ಟ್ರಗಳಿಗೆ ಪರಿಯಚವಾಗಿದ್ದ ಭಾರತದ ಯೋಗಾಸನ ವಿಶ್ವದ ಇನ್ನಷ್ಟು ಭಾಗಗಳಿಗೆ ವಿಸ್ತರಿಸಿತು.
ಇಂಥ ಹಲವು ಬೆಳವಣಿಗೆಗಳ ನಂತರ ಭಾರತ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ 'ಯೋಗವನ್ನು ಕ್ರೀಡೆ ಎಂದು ಪರಿಗಣಿಸಿ ಶಿಕ್ಷಣದ ಪ್ರತಿ ಹಂತದಲ್ಲೂ ಅದನ್ನು ಕಡ್ಡಾಯಗೊಳಿಸುವ ಇರಾದೆ ಹೊಂದಿದೆ. ಯೋಗದ ಮಹತ್ವವನ್ನರಿತ ಅನೇಕ ಶಿಕ್ಷಣ ಸಂಸ್ಥೆಗಳು ತಮ್ಮ ಕಾಲೇಜುಗಳಲ್ಲಿ ಸರ್ಕಾರ - ವಿವಿಗಳಿಂದ ಅಂಗೀಕೃತ ವಾದ ಯೋಗದ ಹಲವು ಹಂತ-ಬಗೆಯ ಕೋರ್ಸ್‌ಗಳನ್ನು ಪ್ರಾರಂಭಿಸಿವೆ
ಸರ್ಟಿಫಿಕೇಟ್ ಕೋರ್ಸ್‌ಗಳಿಂದ ಪಿ.ಎಚ್‌ಡಿ ಪದವಿವರೆಗೂ ಯೋಗ ಕಲಿಸುವ ಕಾಲೇಜುಗಳೂ ಇವೆ. ಬೆಂಗಳೂರು ಕೇಂದ್ರ ವಿವಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ತನ್ನ ಪದವಿ ಕೋರ್ಸ್‌ನಲ್ಲಿ ಯೋಗ ಕಲಿಕೆಯನ್ನು ಕಡ್ಡಾಯ ಗಳಿಸಿದೆ. ಇವುಗಳ ಜೊತೆಗೆ ಇನ್ನು ಯಾವ ಕೋರ್ಸ್‌ಗಳಿವೆ, ನೋಡೋಣ ಬನ್ನಿ.
ಎಸ್ಸೆಸ್ಸೆಲ್ಸಿ- ಪಿಯುಸಿ ನಂತರದ ಕೋರ್ಸ್‌ಗಳು
ಫೌಂಡೇಷನ್ ಕೋರ್ಸ್ ಇನ್ ಯೋಗ
ಅಡ್ವಾನ್ಸ್ಡ್ ಕೋರ್ಸ್ ಇನ್ ಯೋಗ
ಪಿಜಿ ಡಿಪ್ಲೊಮಾ ಕೋರ್ಸ್
ಯೋಗ ಆಯಂಡ್ ಹೋಲಿಸ್ಟಿಕ್ ಹೆಲ್ತ್
ಯೋಗ ಥೆರಪಿ
ಯೋಗ - ನ್ಯಾಚುರೋಪತಿ
ಯೋಗಿಕ್ ಸೈನ್ಸ್
ಯೋಗ ಆಯಂಡ್ ಆಲ್ಟರ್‌ನೇಟ್ ಥೆರಪಿ
ಡಿಪ್ಲೊಮಾ ಕೋರ್ಸ್
ಯೋಗ ಎಜುಕೇಶನ್
ಯೋಗ ಟೀಚರ್ ಟ್ರೈನಿಂಗ್
ಯೋಗ ಆಯಂಡ್ ಹೆಲ್ತ್ ಎಜುಕೇಶನ್
ಯೋಗ ಆಯಂಡ್ ಫಿಸಿಕಲ್ ಏಜುಕೇಶನ್
ಯೋಗ ಆಯಂಡ್ ಹ್ಯೂಮನ್ ಸೈನ್ಸ್ಸ್
ಪದವಿ ಕೋರ್ಸ್‌ಗಳು
ಬಿಎ (ಯೋಗ ಆಯಂಡ್ ನ್ಯಾಚುರೋಪತಿ)
ಬಿಎ (ಯೋಗ ಶಾಸ್ತ್ರ)
ಬಿ.ಎಸ್ಸಿ. (ಯೋಗ ಆಯಂಡ್ ಎಜುಕೇಶನ್)
ಬಿ.ಎಸ್ಸಿ.(ಯೋಗ -ಮ್ಯಾನೇಜ್‌ಮೆಂಟ್)
ಬಿ.ಎಸ್ಸಿ. (ಯೋಗ -ಕಾನ್ಶಿಯಸ್‌ನೆಸ್)
ಪಿಜಿ ಕೋರ್ಸ್‌ಗಳು
ಯೋಗ ಆಯಂಡ್ ಹೆಲ್ತ್
ಯೋಗ ಆಯಂಡ್ ನ್ಯಾಚುರೋಪತಿ
ಯೋಗಿಕ್ ಸೈನ್ಸ್ಸ್- ಹೋಲಿಸ್ಟಿಕ್ ಹೆಲ್ತ್
ಯೋಗ ಆಯಂಡ್ ಮ್ಯಾನೇಜ್‌ಮೆಂಟ್
ಯೋಗ ಆಯಂಡ್ ಜರ್ನಲಿಸಂ
ಯೋಗ ಆಯಂಡ್ ಕೌನ್ಸೆಲಿಂಗ್
ಸರ್ಟಿಫಿಕೇಟ್ ಕೋರ್ಸ್
ಯೋಗ ಅಂಡ್ ನ್ಯಾಚುರೋಪತಿ
ಫಿಸಿಯೋಥೆರಪಿ ಅಂಡ್ ಯೋಗಥೆರಪಿ
ಯೋಗ ಎಜುಕೇಶನ್
ಕೋರ್ಸ್ ಎಲ್ಲೆಲ್ಲಿ ಲಭ್ಯ?
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯ, ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯ, ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯ, ಉಡುಪಿಯ ಶಾರದಾ ಕಾಲೇಜು, ಬೆಳಗಾವಿಯ ಕೆಎಲ್‌ಇ ಕಾಲೇಜ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸ್, ಬೆಂಗಳೂರು ವಿಶ್ವವಿದ್ಯಾಲಯ, ಧಾರವಾಡದ ಕರ್ನಾಟಕ ವಿವಿ, ಮಂಗಳೂರು ವಿವಿಯ ವಿವಿಧ ಕಾಲೇಜುಗಳಲ್ಲಿ ಯೋಗ ಕಲಿಸುವ ಕೋರ್ಸ್‌ಗಳಿವೆ.
ಮೈಸೂರಿನ 'ಸಮ್ಯಕ್' ಯೋಗ, ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜು, ಮೂಡಬಿದಿರೆಯ ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪತಿ ಆಯಂಡ್ ಯೋಗ, ಉಜಿರೆಯ ಎಸ್‌ಡಿಎಂ ಕಾಲೇಜ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸ್, ಬೆಂಗಳೂರಿನ ಹೆಬ್ಬಾಳದ ವಿವೇಕಾನಂದ ಸ್ಕೂಲ್ ಆಫ್ ಯೋಗ ಅಲ್ಲದೇ ದೆಹಲಿಯ ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಯೋಗ, ಮಂಬೈನ ಸಾಂತಾಕ್ರೂಜ್ ಬಳಿಯ ಯೋಗ ಇನ್‌ಸ್ಟಿಟ್ಯೂಟ್, ಹರಿದ್ವಾರದ ದೇವ ಸಂಸ್ಕೃತಿ ವಿಶ್ವವಿದ್ಯಾಲಯ, ಭುವನೇಶ್ವರದ ಇನ್‌ಸ್ಟಿಟ್ಯೂಟ್ ಆಫ್ ಯೋಗಿಕ್ ಸೈನ್ಸ್ಸ್ ಅಂಡ್ ರಿಸರ್ಚ್ ಮತ್ತು ಗುಜರಾತ್ ವಿವಿಗಳಲ್ಲಿ ಯೋಗದ ಹಲವು ಕೋರ್ಸ್‌ಗಳನ್ನು ಕಲಿಸಲಾಗುತ್ತದೆ.
ಯೋಗ ವಿವಿಯಲ್ಲಿ..
ಬೆಂಗಳೂರು ಸಮೀಪದ ಆನೇಕಲ್‌ನಲ್ಲಿರುವ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ಡೀಮ್ಡ್ ವಿಶ್ವವಿದ್ಯಾಲಯ ಪೂರ್ಣ ಪ್ರಮಾಣದ ಯೋಗ ವಿವಿಯಾಗಿದ್ದು ವಿಶ್ವದಾದ್ಯಂತ 30 ಶಾಖೆಗಳನ್ನು ಹೊಂದಿದೆ. ಇಲ್ಲಿ ಯೋಗ ಇನ್‌ಸ್ಟ್ರಕ್ಟರ್ ಕೋರ್ಸ್‌ನಿಂದ ಹಿಡಿದು ಪಿಎಚ್.ಡಿವರೆಗೆ ಶಿಕ್ಷಣ ನೀಡಲಾಗತ್ತದೆ. ಯೋಗ ವಿಜ್ಞಾನ ಮತ್ತು ಪ್ರಕೃತಿ ಚಿಕಿತ್ಸೆಯ ಪದವಿಯಲ್ಲದೆ ವೈದ್ಯರಿಗಾಗಿಯೇ 'ಯೋಗ ಥೆರಪಿ ಓರಿಯಂಟೇಶನ್ ಟ್ರೇನಿಂಗ್' (YTOT) ಎಂಬ ಕೋರ್ಸ್ ಕಲಿಸುತ್ತದೆ.
ಯಾವ ರೀತಿ ಉದ್ಯೋಗ?
ಯೋಗ ಕೋರ್ಸ್‌ಗಳನ್ನು ಪೂರೈಸಿದವರಿಗೆ, ಯೋಗ ತರಬೇತುದಾರ, ಯೋಗ ಶಿಕ್ಷಕ, ಯೋಗ ಥೆರಪಿಸ್ಟ್, ಯೋಗ ಆಯಂಡ್ ನ್ಯಾಚುರೋಪತಿ ರಿಸರ್ಚ್ ಆಫೀಸರ್, ಯೋಗ ಏರೊಬಿಕ್ ಇನ್‌ಸ್ಟ್ರಕ್ಟರ್, ಪರ್ಸನಲ್ ಯೋಗ ತರಬೇತುದಾರ.. ಹೀಗೆ ಹಲವು ಉದ್ಯೋಗಗಳಿವೆ.
ಎಲ್ಲೆಲ್ಲಿ ಉದ್ಯೋಗ?
ಖಾಸಗಿ ಹಾಗೂ ಸರ್ಕಾರಿ ಶಾಲೆಗಳು, ಜಿಮ್‌ಗಳು, ಪ್ರಕೃತಿ ಚಿಕಿತ್ಸಾ ಕೇಂದ್ರಗಳು, ಆಸ್ಪತ್ರೆಗಳು, ರೆಸಾರ್ಟ್‌ಗಳು, ಹೌಸಿಂಗ್ ಸೊಸೈಟಿಗಳು, ಸರ್ಕಾರಿ ಸ್ವಾಮ್ಯದ ಕ್ರೀಡಾಶಾಖೆಗಳು, ಕ್ರೀಡಾ ತರಬೇತಿ ಸಂಸ್ಥೆಗಳು, ಐಟಿ ಕಂಪನಿಗಳು ಆರ್ಮಿ ಪಬ್ಲಿಕ್ ಸ್ಕೂಲ್‌ಗಳು ಮತ್ತು ವಿದೇಶಾಂಗ ಇಲಾಖೆಗಳಲ್ಲಿ ಉದ್ಯೋಗಾವಕಾಶಗಳಿವೆ.
ಸರ್ಕಾರದ ಪ್ರಮಾಣ ಪತ್ರ
ಕೇಂದ್ರ ಸರ್ಕಾರ ಸ್ಥಾಪಿಸಿರುವ 'ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ' - ಸಂಸ್ಥೆಯು ಯೋಗ ತರಬೇತುದಾರರಿಗೆ ನಾಲ್ಕು ಹಂತದ ಶ್ರೇಣಿಗಳಾದ ತರಬೇತುದಾರ, ಶಿಕ್ಷಕ, ಗುರು ಹಾಗೂ ಆಚಾರ್ಯ ಎಂಬ ಪ್ರಮಾಣ ಪತ್ರಗಳನ್ನು ನೀಡುತ್ತದೆ. ಇವರು ವಿಶ್ವದ ಮೂಲೆ ಮೂಲೆಯಲ್ಲಿರುವ ಭಾರತದ ವಿದೇಶಾಂಗ ಇಲಾಖೆಯ ದೂತಾವಾಸದಲ್ಲಿ ಕೆಲಸ ನಿರ್ವಹಿಸಲು ಆರ್ಹರಾಗಿರುತ್ತಾರೆ. ವಿಶ್ವದ ಇತರ ಭಾಗಗಳ ಬೇಡಿಕೆಯನ್ನು ಗಮನಿಸಿರುವ ಭಾರತ ಸರ್ಕಾರ ಯೋಗ ಕಲಿಸುವುದಕ್ಕೆ ಬರುವವರ ಕೌಶಲ್ಯ ಪರೀಕ್ಷಿಸಿ ಪ್ರಮಾಣ ಪತ್ರ ನೀಡುವ ವ್ಯವಸ್ಥೆ ಮಾಡಿದೆ.
ಅಂದ ಹಾಗೆ, ಭಾರತದ ಯಾವುದೇ ಊರುಗಳಲ್ಲಿ ತರಬೇತುದಾರರು ನಡೆಸುವ ಯೋಗ ತರಬೇತಿ ಕೇಂದ್ರಗಳ ಆದಾಯಕ್ಕೆ ಯಾವುದೇ ರೀತಿಯ ತೆರಿಗೆ ಇರುವುದಿಲ್ಲ.
ಗಮನಿಸಿ: ನಾಷನಲ್ ಕೌನ್ಸಿಲ್ ಫಾರ್ ಟೀಚರ್ ಎಜುಕೇಶನ್ ಶಿಕ್ಷಕ ತರಬೇತಿಯ ಡಿ.ಇಡಿ, ಬಿ.ಇಡಿ ಮತ್ತು ಎಂ.ಇಡಿ - ಈ ಮೂರು ಹಂತಗಳಲ್ಲಿ ಯೋಗ ಶಿಕ್ಷಣವನ್ನು ಪಠ್ಯಕ್ರಮದ ಭಾಗವನ್ನಾಗಿಸಿದೆ.
ಹೆಚ್ಚಿನ ಮಾಹಿತಿಗೆ: https://svyasa.edu.in, https://samyakyoga.org, https://kswu.ac.in ಸಂಪರ್ಕಿಸಬಹುದು.