ಜೂನ್ 21ಕ್ಕೆ ಅಂತರಾಷ್ಟ್ರೀಯ ಯೋಗ ದಿನ, ಆದರೆ ಈ ದಿನದ ಮತ್ತೊಂದು ವಿಶೇಷತೆ ಗೊತ್ತೇ? ಹೌದು ಜೂನ್ 21 ಈ ವರ್ಷದ ದೀರ್ಘ ಹಗಲನ್ನು ಹೊಂದಿರುವ ದಿನವಾಗಿದೆ. ಈ ದಿನವನ್ನು ಸಮ್ಮರ್ ಸಾಲ್ಸ್‌ಟೈಸ್ ಎಮದು ಕರೆಯಲಾಗುವುದು.
ಈ ದಿನವನ್ನು ಬೇಸಿಗೆಯ ಅತಿ ದೀರ್ಘವಾದ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಸೂರ್ಯೋದಯ 5:14ಕ್ಕೆ ಆಗಿದೆ.
ಭೂಮಿಯು ತನ್ನ ಕಕ್ಷೆಯಲ್ಲಿ ಸುತ್ತುತ್ತಾ ಸೂರ್ಯನ ಸುತ್ತ ಸುತ್ತುತ್ತಿರುತ್ತದೆ. ಆಗ ಉತ್ತರ ಗೋಳಾರ್ಧವು ಮಾರ್ಚ್ ಮತ್ತು ಸೆಪ್ಟೆಂಬರ್ ನಡುವೆ ಒಂದು ದಿನದ ಅವಧಿಯಲ್ಲಿ ದೀರ್ಘಾವಧಿ ಸೂರ್ಯನ ಬೆಳಕು ಪಡೆಯುತ್ತದೆ, ಈ ದಿನ ಸೂರ್ಯನ ಹಗಲು ಹೆಚ್ಚು ಹೊತ್ತು ಇರುತ್ತದೆ, ಇನ್ನು ಸಮ್ಮರ್ ಸಾಲ್ಸ್‌ಟೈಸ್ ಎಂದು ಕರೆಯಲಾಗುವುದು. ಉತ್ತರ ಗೋಳಾರ್ಧ,ಬೇಸಿಗೆ ಅಯನ ಸಂಕ್ರಾಂತಿಯು ಜೂನ್ 21 ರಿಂದ 23 ರವರೆಗೆ ಮತ್ತು ಚಳಿಗಾಲದ ಅಯನ ಸಂಕ್ರಾಂತಿಯು ಡಿಸೆಂಬರ್ 21 ರಿಂದ 23 ರವರೆಗೆ ನಡೆಯುತ್ತದೆ. ಬೇಸಿಗೆಯ ಅಯನ ಸಂಕ್ರಾಂತಿಯು ಉತ್ತರ ಗೋಳಾರ್ಧದಲ್ಲಿ ಅತಿ ದೀರ್ಘ ಹಗಲುಳ್ಳ ದಿನ ಎಂದು ಹೇಳಲಾಗುತ್ತದೆ. ಹಾಗೆಯೇ ವರ್ಷದ ಕಡಿಮೆ ರಾತ್ರಿ ಹೊಂದಿರುವ ದಿನವನ್ನು ಸೂಚಿಸುತ್ತದೆ. ಈ ದಿನ ಸೂರ್ಯೋದಯ ಬೇಗ ಆಗಿ, ಸೂರ್ಯಾಸ್ತವು ಬಹಳ ತಡವಾಗಿ ಆಗುವುದು. 2021ರಲ್ಲಿ ಸೋಮವಾರ, ಜೂನ್ 21, 2021 ರಂದು ಈ ದಿನ ಬರಲಿದ್ದು, ಸೂರ್ಯನು ಕಾಲ್ಪನಿಕ ಉಷ್ಣವಲಯದ ಕರ್ಕಾಟಕ ವೃತ್ತ ಅಥವಾ 23.5 ° N ಅಕ್ಷಾಂಶದ ಮೇಲೆ ನೇರವಾಗಿ ಬೀಳುವಾಗ ಈ ಸಂಕ್ರಾಂತಿ ಸಂಭವಿಸುವುದು.
ಅಂತರರಾಷ್ಟ್ರೀಯ ಯೋಗ ದಿನ ಈ ದಿನವನ್ನು ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ಕೂಡ ಆಚರಿಸಲಾಗುತ್ತಿದೆ. ಯೋಗದಲ್ಲಿ ಸೂರ್ಯ ನಮಸ್ಕಾರಕ್ಕೆ ತುಂಬಾನೇ ಮಹತ್ವವಿದೆ, ಸೂರ್ಯ ನಮಸ್ಕಾರ ಮಾಡುವುದರಿಂದ ಅನೇಕ ಕಾಯಿಲೆಗಳನ್ನು ತಡೆಗಟ್ಟುವುದರ ಜೊತೆಗೆ ಫಿಟ್ನೆಸ್ ಕೂಡ ಪಡೆಯಬಹುದು. ಸೂರ್ಯ ನಮಸ್ಕಾರ, ಹೆಸರೇ ಸೂಚಿಸುವಂತೆ ಯೋಗ ಭಂಗಿಯ ಮೂಲಕ ಸೂರ್ಯನಿಗೆ ನಮಸ್ಕಾರ ಮಾಡುವುದು. ಸೂರ್ಯನನ್ನು ಸೂರ್ಯದೇವ ಎಂದು ಕರೆಯುತ್ತೇವೆ. ಬೆಳಗ್ಗೆ ಎದ್ದು ಸೂರ್ಯನಿಗೆ ಸೂರ್ಯ ನಮಸ್ಕಾರ ಮಾಡಿದರೆ ಅನೇಕ ಕಾಯಿಲೆಗಳಿಗೆ ಹೇಳಬಹುದು ಗುಡ್‌ಬೈ...