ಕಾಸರಗೋಡು: ಕೆಎಸ್ ಆರ್ ಟಿಸಿ ಡಿಪೆÇೀದ ಮೆಕ್ಯಾನಿಕ್ ವಿಭಾಗ ದಿನಗೂಲಿ ನೌಕರರಿಗೆ ವೇತನ ನೀಡದಿರುವುದನ್ನು ವಿರೋಧಿಸಿ ಬಿಎಂಎಸ್ ಜಿಲ್ಲಾ ಕೆಎಸ್‍ಟಿ ಎಂಪ್ಲೋಯೀಸ್ ಸಂಘ್(ಬಿಎಂಎಸ್)ವತಿಯಿಂದ ಅನಿರ್ದಿಷ್ಟಾವಧಿ ಮುಷ್ಕರ 22ನೇ ದಿನ ದಾಟಿದೆ.
22ನೇ ದಿನದ ಮುಷ್ಕರವನ್ನು ಬಿಎಂಎಸ್ ಜಿಲ್ಲಾ ಜತೆ ಕಾರ್ಯದರ್ಶಿ ದಿನೇಶ ಬಂಬ್ರಾಣ ಮುಷ್ಕರ ಉದ್ಘಾಟಿಸಿದರು. ಕೆಎಸ್‍ಟಿ ಎಂಪ್ಲೋಯೀಸ್ ಸಂಘ್(ಬಿಎಂಎಸ್) ಯೂನಿಟ್ ಅಧ್ಯಕ್ಷ ಎಚ್. ಹರೀಶ್ ಅಧ್ಯಕ್ಷತೆ ವಹಿಸಿದ್ದರು. ರಿತೇಶ್ ಶೆಟ್ಟಿ, ಕೆ. ಮಣಿಕಂದನ್, ಜಿಲ್ಲಾ ಕಾರ್ಯದರ್ಶಿ ಎಂ. ಪ್ರವೀಣ್, ಜಿಲ್ಲಾ ಖಜಾಂಚಿ ಕೆ. ವಿ. ಗಿರೀಶ್, ಎಂ. ಜಯಶೀಲನ್, ಎ. ರಾಜೇಶ್, ಎ. ಸಂತೋಷ, ಬಿಎಂಎಸ್ ಮುಖಂಡರಾದ ಹರೀಶ್ ಕುದುರೆಪಾಡಿ, ವಿಶ್ವನಾಥ ಶೆಟ್ಟಿ, ರಿಜೇಶ್. ಕೆ., ಕೆ. ಗುರುದಾಸ್, ಕೆ. ಶಿವಪ್ರಸಾದ್, ರತೀಶ್, ಕೆ. ಮತ್ತು ಕುಞÂಕಣ್ಣನ್. ಕೆಎಸ್‍ಟಿ ನೌಕರರ ಸಂಘ (ಬಿಎಂಎಸ್) ರಾಜ್ಯ ಸಮಿತಿ ಸದಸ್ಯ ಸಿ. ಟಿ. ಗೋಪಿನಾಥನ್ ಸ್ವಾಗತಿಸಿದರು.