HEALTH TIPS

26/11ರ ಮುಂಬೈ ಭಯೋತ್ಪಾದಕ ದಾಳಿಯ ಪಾತ್ರದಾರಿ ಮಜೀದ್ ಮಿರ್‌ಗೆ ಪಾಕಿಸ್ತಾನದಲ್ಲಿ 15 ವರ್ಷ ಜೈಲುಶಿಕ್ಷೆ

 ಲಾಹೋರ್: 2008ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ರೂವಾರಿಗೆ ಭಯೋತ್ಪಾದನೆ-ಹಣಕಾಸು ಪ್ರಕರಣದಲ್ಲಿ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು 15 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಈ ತಿಂಗಳ ಆರಂಭದಲ್ಲಿ ಲಾಹೋರ್‌ನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ನಿಷೇಧಿತ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಕಾರ್ಯಕರ್ತ ಸಾಜಿದ್ ಮಜೀದ್ ಮಿರ್‌ಗೆ ಭಯೋತ್ಪಾದನೆ-ಹಣಕಾಸು ಪ್ರಕರಣದಲ್ಲಿ 15 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ ಎಂದು ಹಿರಿಯ ವಕೀಲರು ತಿಳಿಸಿದ್ದಾರೆ.

ಪಂಜಾಬ್ ಪೋಲೀಸ್‌ನ ಭಯೋತ್ಪಾದನಾ ನಿಗ್ರಹ ಇಲಾಖೆ (ಅಖಿಆ), ಇಂತಹ ಪ್ರಕರಣಗಳಲ್ಲಿ ಶಂಕಿತರ ಶಿಕ್ಷೆಯನ್ನು ಮಾಧ್ಯಮಗಳಿಗೆ ಆಗಾಗ್ಗೆ ಪ್ರಕಟಿಸುತ್ತದೆ. ಆದರೆ ಭಯೋತ್ಪಾದನೆ-ಹಣಕಾಸು ಪ್ರಕರಣದಲ್ಲಿ ಮಿರ್‌ನ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿರಲಿಲ್ಲ.

40ರ ಆಸುಪಾಸಿನಲ್ಲಿರುವ ಮಿರ್ ಕಳೆದ ಏಪ್ರಿಲ್ ನಲ್ಲಿ ಬಂಧನವಾದ ನಂತರ ಕೊಟ್ ಲಕ್ಪತ್ ಜೈಲಿನಲ್ಲಿದ್ದಾನೆ. ಆತನಿಗೆ ಕೋರ್ಟ್ 4 ಲಕ್ಷ ರೂಪಾಯಿ ದಂಡ ವಿಧಿಸಿದೆ ಎಂದು ವಕೀಲರು ತಿಳಿಸಿದ್ದಾರೆ. ಈ ಹಿಂದೆ ಮಿರ್ ಸಾವಿಗೀಡಾಗಿದ್ದಾನೆ ಎಂದು ಭಾವಿಸಲಾಗಿತ್ತು.

ಹಣಕಾಸು ಕಾರ್ಯಪಡೆ(ಈಂಖಿಈ)ಯ ಕೊನೆಯ ಸಭೆಗೂ ಮುನ್ನ, 'ಗ್ರೇ ಲಿಸ್ಟ್'ನಿಂದ ತೆಗೆದುಹಾಕುವಂತೆ ಕೋರುವ ಸಲುವಾಗಿ ಸಾಜಿದ್ ಮಿರ್‌ನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿರುವುದಾಗಿ ಪಾಕಿಸ್ತಾನವು ಏಜೆನ್ಸಿಗೆ ತಿಳಿಸಿದೆ ಎಂದು ವರದಿಯಾಗಿದೆ. 166 ಜನರ ಸಾವಿಗೆ ಕಾರಣವಾದ 2008ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಮೋಸ್ಟ್ ವಾಂಟೆಂಡ್ ಟೆರರಿಸ್ಟ್ ಪಟ್ಟಿಯಲ್ಲಿ ಸಾಜಿದ್ ಮಿರ್ ಇದ್ದಾನೆ. 

ಮಿರ್ ನನ್ನು ಮುಂಬೈ ದಾಳಿಯ "ಪ್ರಾಜೆಕ್ಟ್ ಮ್ಯಾನೇಜರ್" ಎಂದು ಕರೆಯಲಾಗಿದೆ. ಮಿರ್ 2005 ರಲ್ಲಿ ನಕಲಿ ಪಾಸ್‌ಪೋರ್ಟ್ ಬಳಸಿ ಭಾರತಕ್ಕೆ ಭೇಟಿ ನೀಡಿದ್ದನು ಎಂದು ವರದಿಯಾಗಿದೆ. ಮುಂಬೈ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಮತ್ತು ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್‌ಗೆ ಲಾಹೋರ್ ಎಟಿಸಿ, ಭಯೋತ್ಪಾದನೆ ಹಣಕಾಸು ಪ್ರಕರಣದಲ್ಲಿ ಈಗಾಗಲೇ 68 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries