ನವದೆಹಲಿ: ಸೇನಾ ಸೇವೆಗಳಿಗೆ ನೇಮಕಾತಿ ಮಾಡುವ ಅಗ್ನಿಪಥ ಯೋಜನೆಯನ್ನು ವಿರೋಧಿಸಿ ಹಲವೆಡೆ ನಡೆಯುತ್ತಿರುವ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದು, ರೈಲುಗಳಿಗೆ ಬೆಂಕಿ ಹೊತ್ತಿಸುತ್ತಿರುವ ಪರಿಣಾಮ 200 ರೈಲುಗಳನ್ನು ಈ ವರೆಗೆ ಸ್ಥಗಿತಗೊಳಿಸಲಾಗಿದೆ.
94 ಮೇಲ್ ಹಾಗೂ ಎಕ್ಸ್ ಪ್ರೆಸ್ ರೈಲುಗಳು ಹಾಗೂ 140 ಪ್ಯಾಸೆಂಜರ್ ರೈಲುಗಳನ್ನು ಪ್ರತಿಭಟನೆಯ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ. ಇನ್ನು 65 ಮೇಲ್ ಹಾಗೂ ಎಕ್ಸ್ ಪ್ರೆಸ್ ಹಾಗೂ 30 ಪ್ಯಾಸೆಂಜರ್ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ.
ರೈಲ್ವೆ ಇಲಾಖೆ 11 ಮೇಲ್ ಹಾಗೂ ಎಕ್ಸ್ ಪ್ರೆಸ್ ರೈಲುಗಳ ಮಾರ್ಗವನ್ನು ಬದಲಾಯಿಸಿದೆ. 340 ರೈಲುಗಳ ಮೇಲೆ ಪ್ರತಿಭಟನೆಯ ಪರಿಣಾಮ ಈ ವರೆಗೂ ಉಂಟಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.