HEALTH TIPS

ಶೇ 30.7ರಷ್ಟು ಎಣ್ಣೆ ಅಶುದ್ಧ

           'ದೇಶದಲ್ಲಿ ಮಾರಾಟವಾಗುತ್ತಿರುವ ಅಡುಗೆ ಎಣ್ಣೆಯಲ್ಲಿ ಶೇಕಡ 30.7ರಷ್ಟು ಎಣ್ಣೆ ಪರಿಶುದ್ಧವಾಗಿಲ್ಲ' ಎನ್ನುತ್ತದೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಅಡುಗೆ ಎಣ್ಣೆ ಸಮೀಕ್ಷಾ ವರದಿ.

           ಮಾರುಕಟ್ಟೆಯಲ್ಲಿ ಲಭ್ಯವಿರುವ ಬ್ರ್ಯಾಂಡೆಡ್‌, ಅನ್‌ಬ್ಯ್ರಾಂಡೆಡ್‌ ಮತ್ತು ಗಾಣದ ಅಡುಗೆ ಎಣ್ಣೆಯ ಒಟ್ಟು 4,461 ಮಾದರಿಗಳನ್ನು ಶುದ್ಧತೆ ಪರೀಕ್ಷೆಗೆ ಎಫ್‌ಎಸ್‌ಎಸ್‌ಎಐ ಒಳಪಡಿಸಿತ್ತು.

ಇದರಲ್ಲಿ 3,090 ಮಾದರಿಗಳು (ಶೇ 69.3) ಎಲ್ಲ ರೀತಿಯ ಶುದ್ಧತೆ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿವೆ. ಆದರೆ, 1,371 (ಶೇ 30.7) ಮಾದರಿಗಳು ಶುದ್ಧತೆಯ ಪರೀಕ್ಷೆಗಳಲ್ಲಿ ವಿಫಲವಾಗಿವೆ ಎನ್ನುತ್ತದೆ 2020ರ ವರದಿ. ಇದು ಈ ವರ್ಷದ ಜನವರಿಯಲ್ಲಿ ಬಿಡುಗಡೆ ಆಗಿದೆ.

              ದಕ್ಷಿಣದ ರಾಜ್ಯಗಳಲ್ಲಿ ದೊರೆಯುವ ಅಡುಗೆ ಎಣ್ಣೆಯಲ್ಲಿ ಕಲಬೆರಕೆ ಪ್ರಮಾಣ ಅತಿಹೆಚ್ಚು. ಇಲ್ಲಿ ಪರೀಕ್ಷೆಗೆ ಒಳಪಡಿಸಿದ ಮಾದರಿಗಳಲ್ಲಿ ಶೇ 43.8ರಷ್ಟು ಮಾದರಿಗಳು ಶುದ್ಧತೆ ಪರೀಕ್ಷೆಯಲ್ಲಿ ವಿಫಲವಾಗಿವೆ. ಪಶ್ಚಿಮದ ರಾಜ್ಯಗಳಲ್ಲಿ ಈ ಪ್ರಮಾಣ ಶೇ 19.19ರಷ್ಟು ಇದ್ದರೆ, ಪೂರ್ವ ಮತ್ತು ಈಶಾನ್ಯದ ರಾಜ್ಯಗಳಲ್ಲಿ ಶೇ 22.7ರಷ್ಟು ಇದೆ. ಉತ್ತರದ ರಾಜ್ಯಗಳಲ್ಲಿ ಸಂಗ್ರಹಿಸಿದ್ದ ಶೇ 35.6ರಷ್ಟು ಮಾದರಿಗಳು ಈ ಪರೀಕ್ಷೆಯಲ್ಲಿ ವಿಫಲವಾಗಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

              ವಿಷಕಾರಿ ಅಂಶಗಳು, ಕಳಪೆ ಗುಣಮಟ್ಟ ಮತ್ತು ಹಾದಿ ತಪ್ಪಿಸುವಂತಹ ಬ್ರ್ಯಾಂಡಿಂಗ್‌ ಎಂಬ ಮೂರು ಅಂಶಗಳನ್ನು ಆಧಾರವಾಗಿ ಇರಿಸಿಕೊಂಡು ಈ ಪರೀಕ್ಷೆ ನಡೆಸಲಾಗಿದೆ. ವಿಷಕಾರಿ ಅಂಶಗಳು ಇವೆಯೇ ಎಂಬುದನ್ನು ಪತ್ತೆ ಮಾಡಲು ಪರೀಕ್ಷೆಗೆ ಒಳಪಡಿಸಿದ ಮಾದರಿಗಳಲ್ಲಿ, ಶೇ 2.42ರಷ್ಟು ಮಾದರಿಗಳಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗಿವೆ. ಈ ಮಾದರಿಗಳಲ್ಲಿ ಭಾರ ಲೋಹಗಳು, ಸಸ್ಯಜನ್ಯ ವಿಷಗಳು ಮತ್ತು ಕೀಟನಾಶಕದ ಅವಶೇಷಗಳು ಪತ್ತೆಯಾಗಿವೆ. ಕಡಲೆಬೀಜ ಮತ್ತು ಕೊಬ್ಬರಿಯಲ್ಲಿನ ಸಾವಯವ ಅಂಶಗಳಿಂದ ಉತ್ಪತಿಯಾಗುವ ವಿಷಕಾರಿ ಅಂಶವು, ತಮಿಳುನಾಡು ಮತ್ತು ಕರ್ನಾಟಕದಲ್ಲಿನ ಮಾದರಿಗಳಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿದೆ. ದೇಶದ ಬೇರೆಡೆಯ ಮಾದರಿಗಳಲ್ಲಿ ಭಾರ ಲೋಹಗಳಾದ ಸೀಸ, ಆರ್ಸೆನಿಕ್‌, ಪಾದರಸದ ಅಂಶಗಳು ಪತ್ತೆಯಾಗಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

             ಕಚ್ಚಾತೈಲವನ್ನು ಸಂಸ್ಕರಿಸಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೇರ್ಪಡಿಸುವಾಗ ಉಳಿಯುವ ಮಿನರಲ್‌ ತೈಲವನ್ನು ವೈಟ್‌ ಆಯಿಲ್‌ ಎಂದು ಕರೆಯಲಾಗುತ್ತದೆ. ಸಂಸ್ಕರಿಸಿದ ಮಿನರಲ್ ಆಯಿಲ್‌ ಅನ್ನು ಆಹಾರ ತಯಾರಿಕೆಯ ಸಲಕರಣೆಗಳು ಮತ್ತು ಯಂತ್ರೋಪಕರಣಗಳಲ್ಲಿ ಬಳಸಬಹುದು. ಆದರೆ ಈ ಎಣ್ಣೆಯನ್ನು ಸಾಸಿವೆ ಎಣ್ಣೆಯ ಜತೆಗೆ ಮಿಶ್ರಣ ಮಾಡಿ ಮಾರಾಟ ಮಾಡಲಾಗುತ್ತಿದೆ. ಹರಿಯಾಣದಲ್ಲಿ ಇದು ಹೆಚ್ಚು. ಒಟ್ಟು ಮಾದರಿಗಳಲ್ಲಿ ಶೇ 0.95ರಷ್ಟು ಮಾದರಿಯಲ್ಲಿ ಮಾತ್ರ ವೈಟ್‌ ಆಯಿಲ್ ಪತ್ತೆಯಾಗಿದೆ ಎನ್ನುತ್ತದೆ ವರದಿ.

              ಅಡುಗೆ ಎಣ್ಣೆಯಲ್ಲಿ ಇರುವ ಪೌಷ್ಟಿಕಾಂಶದ ಪ್ರಮಾಣವನ್ನೂ ಈ ಪರೀಕ್ಷೆಗಳಲ್ಲಿ ಪರಿಶೀಲಿಸಲಾಗಿದೆ. ಅಡುಗೆ ಎಣ್ಣೆಯಲ್ಲಿ ವಿಟಮಿನ್ ಎ, ವಿಟಮಿನ್ ಡಿ2 ಮತ್ತು ವಿಟಮಿನ್‌ ಡಿ3 ಅಂಶಗಳು ಸೂಚಿತ ಪ್ರಮಾಣದಲ್ಲಿ ಇರಬೇಕು. ಆದರೆ ಪರೀಕ್ಷೆಗೆ ಒಳಪಡಿಸಿದ ಶೇ 8.6ರಷ್ಟು ಮಾದರಿಗಳಲ್ಲಿ ಈ ಅಂಶಗಳು ಸೂಚಿತ ಪ್ರಮಾಣಕ್ಕಿಂತ ಕಡಿಮೆ ಇತ್ತು ಎಂದು ವರದಿಯಲ್ಲಿ ವಿವರಿಸಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries