ನವದೆಹಲಿ: ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಮಾರ್ಚ್ 21ರೊಳಗೆ 30 ವೈಮಾನಿಕ ತರಬೇತಿ ಸಂಸ್ಥೆಗಳ (ಎಫ್‌ಟಿಒ) ಲೆಕ್ಕ ಪರಿಶೋಧನೆ ನಡೆಸಿದ್ದು, ಹಲವು ಸುರಕ್ಷಾ ನಿಯಮಗಳ ಉಲ್ಲಂಘನೆಯನ್ನು ಪತ್ತೆ ಹಚ್ಚಿದೆ.
ನವದೆಹಲಿ: ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಮಾರ್ಚ್ 21ರೊಳಗೆ 30 ವೈಮಾನಿಕ ತರಬೇತಿ ಸಂಸ್ಥೆಗಳ (ಎಫ್‌ಟಿಒ) ಲೆಕ್ಕ ಪರಿಶೋಧನೆ ನಡೆಸಿದ್ದು, ಹಲವು ಸುರಕ್ಷಾ ನಿಯಮಗಳ ಉಲ್ಲಂಘನೆಯನ್ನು ಪತ್ತೆ ಹಚ್ಚಿದೆ.
ತರಬೇತಿ ಸಂಸ್ಥೆಯಲ್ಲಿ ಸೌಲಭ್ಯಗಳು ಮತ್ತು ಏರ್‌ಫೀಲ್ಡ್‌ನಲ್ಲಿ ನಿಯಮಾನುಸಾರ ಸೌಲಭ್ಯಗಳಿಲ್ಲದಿರುವುದು ಗಮನಕ್ಕೆ ಬಂದಿದೆ.
ಹಲವು ಎಫ್‌ಟಿಒಗಳು ವಿಮಾನಯಾನ ಪೂರ್ವ ಆಲ್ಕೋಹಾಲ್ ಪರೀಕ್ಷಾ ನಿಯಮಗಳನ್ನು ಅನುಸರಿಸುತ್ತಿಲ್ಲ. ಕೆಲ ಬೋಧಕರು, ವಿದ್ಯಾರ್ಥಿ ಪೈಲಟ್‌ಗಳು ಮತ್ತು ವಿಮಾನ ನಿರ್ವಹಣಾ ಎಂಜಿನಿಯರ್‌ಗಳು 'ಬ್ರೀಥ್‌ಲೈಸರ್' (ಬಿಎ) ಪರೀಕ್ಷೆಗೆ ಒಳಗಾಗುತ್ತಿಲ್ಲ. ಕೆಲವು ಸಂದರ್ಭಗಳಲ್ಲಿ, ಬಳಸಲಾಗುವ ಪರೀಕ್ಷಾ ಸಾಧನಗಳು ಅಗತ್ಯತೆಗಳಿಗೆ ಅನುಗುಣವಾಗಿಲ್ಲ ಎಂದು ಡಿಜಿಸಿಎ ಹೇಳಿದೆ.
ಈ ಪರಿಶೋಧನೆಗಳು ಮತ್ತು ಇತ್ತೀಚಿಗೆ ಸಂಭವಿಸಿದ ಕೆಲ ಅಪಘಾತಗಳಿಗೆ ಸಂಬಂಧಿಸಿದಂತೆ ಕೆಲವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇಬ್ಬರು 'ಅಕೌಂಟೆಬಲ್ ಮ್ಯಾನೇಜರ್'ಗೆ ಎಚ್ಚರಿಕೆ ನೀಡಲಾಗಿದೆ. ಇಬ್ಬರು ಪ್ರಮಾಣೀಕೃತ 'ಫ್ಲೈಯಿಂಗ್ ಇನ್‌ಸ್ಟ್ರಕ್ಟರ್'ಗಳನ್ನು (ಸಿಎಫ್‌ಐ) ಒಂದು ವರ್ಷದ ಮಟ್ಟಿಗೆ ಅಮಾನತುಗೊಳಿಸಲಾಗಿದೆ. ಅಲ್ಲದೆ ಇತರ ಇಬ್ಬರು ಸಿಎಫ್‌ಐಗಳಿಗೆ ಮೂರು ತಿಂಗಳು, ಒಬ್ಬರು ಉಪ ಸಿಎಫ್‌ಐಗೆ ಒಂದು ವರ್ಷ, ಇಬ್ಬರು ಉಪ ಸಿಎಫ್‌ಐಗಳಿಗೆ ಮೂರು ತಿಂಗಳು, ಒಬ್ಬರು ಸಹಾಯಕ 'ಫ್ಲೈಯಿಂಗ್ ಇನ್‌ಸ್ಟ್ರಕ್ಟರ್'ಗೆ ಮೂರು ತಿಂಗಳು ಮತ್ತು ಒಬ್ಬ ವಿದ್ಯಾರ್ಥಿಯನ್ನು ಮೂರು ತಿಂಗಳವರೆಗೆ ಅಮಾನತುಗೊಳಿಸಲಾಗಿದೆ ಎಂದು ಡಿಜಿಸಿಎ ತಿಳಿಸಿದೆ.