ತಿರುವನಂತಪುರ: ಅಂಗನವಾಡಿಗಳಿಗೆ ಅಸುರಕ್ಷಿತ ಅಮೃತ ಪೌಡರ್ ಹಂಚಲಾಗಿದೆ ಎಂದು ಸಿಎಜಿ ವರದಿ ಬಹಿರಂಗಪಡಿಸಿದೆ. ರಾಜ್ಯದ ವಿವಿಧ ಅಂಗನವಾಡಿಗಳಿಗೆ 3,556 ಕೆಜಿ ಅಮೃತ ಪೌಡರ್ ವಿತರಿಸಲಾಗಿತ್ತು. ಸಿಎಜಿ ವರದಿ ಪ್ರಕಾರ ಆಹಾರ ಸುರಕ್ಷತಾ ಇಲಾಖೆ ಬಳಕೆಗೆ ಯೋಗ್ಯವಲ್ಲ ಎಂದು ಪತ್ತೆ ಹಚ್ಚಿದ್ದರೂ ಅದನ್ನು ವಶಪಡಿಸಿಕೊಂಡಿರಲಿಲ್ಲ.
ಶಾಲೆಗಳು ಸೇರಿದಂತೆ ರಾಜ್ಯದ ಹಲವೆಡೆ ಆಹಾರ ವಿಷವಾಗಿ ಪರಿಣಮಿಸಿರುವ ವರದಿಗಳ ನಡುವೆಯೇ ಆಹಾರ ಸುರಕ್ಷತಾ ಇಲಾಖೆಯ ಗಂಭೀರ ಲೋಪ-ದೋಷಗಳತ್ತ ಬೊಟ್ಟು ಮಾಡಿರುವ ಸಿಎಜಿ ವರದಿ ಹೊರಬಿದ್ದಿದೆ. ಆರು ತಿಂಗಳಿಂದ ಮೂರು ವರ್ಷದೊಳಗಿನ ಮಕ್ಕಳಿಗೆ ಸುರಕ್ಷಿತ ಆಹಾರವನ್ನು ತಲುಪಿಸುವಲ್ಲಿ ಆಹಾರ ಸುರಕ್ಷತಾ ಇಲಾಖೆ ವಿಫಲವಾಗಿರುವುದು ಇದಕ್ಕೆ ಕಾರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದು ಸೇವಿಸಲು ಯೋಗ್ಯವಲ್ಲ ಎಂದು ಕಂಡುಬಂದರೂ ವಶಪಡಿಸಿಕೊಂಡಿಲ್ಲ ಎಂಬುದು ವರದಿಯಲ್ಲಿನ ಗಂಭೀರ ಉಲ್ಲೇಖವಾಗಿದೆ. ಆಹಾರ ಸುರಕ್ಷತಾ ಇಲಾಖೆಯಲ್ಲಿನ ಕೊರತೆಗಳಾದ ಆಹಾರ ಸುರಕ್ಷತಾ ಪರೀಕ್ಷೆಗೆ ಸೌಲಭ್ಯಗಳ ಕೊರತೆ, ಇನ್ಸ್‌ಪೆಕ್ಟರ್‌ಗಳ ಅಲಭ್ಯತೆ, ಮಾನ್ಯತೆ ಪಡೆದ ಲ್ಯಾಬ್‌ಗಳ ಸೀಮಿತ ಸಂಖ್ಯೆ, ವಾಹನ ಸೌಕರ್ಯಗಳ ಕೊರತೆಯಂತಹ ಲೋಪಗಳನ್ನೂ ವರದಿ ಎತ್ತಿ ತೋರಿಸುತ್ತದೆ.