ಅಮೃತಸರ: ಆಪರೇಷನ್ ಬ್ಲೂಸ್ಟಾರ್ ನ 38ನೇ ವಾರ್ಷಿಕೋತ್ಸವದಂದು ಸಿಖ್ಖರ ಪ್ರಸಿದ್ಧ ಮಂದಿರವಾದ ಅಕಾಲ್ ತಖ್ತ್ ಬಳಿಯ ಗೋಲ್ಡನ್ ಟೆಂಪಲ್ ನಲ್ಲಿ ಖಲಿಸ್ತಾನ್ ಪರ ಘೋಷಣೆಗಳನ್ನು ಕೂಗಲಾಗಿದೆ.
ತೀವ್ರಗಾಮಿ ಸಿಖ್ ಸಂಘಟನೆಗಳು ಮತ್ತು ಶಿರೋಮಣಿ ಅಕಾಲಿದಳ ಬೆಂಬಲಿಗರು ಪ್ಲೆಕಾರ್ಡ್ ಖಲಿಸ್ತಾನಿ ಪರ ಘೋಷಣೆಗಳನ್ನು ಕೂಗಿದ್ದಾರೆ. ಇನ್ನು ಹಲವಾರು ಯುವಕರು ಆಪರೇಷನ್ ಬ್ಲೂಸ್ಟಾರ್ ವೇಳೆ ಹತ್ಯೆಯಾದ ಪ್ರತ್ಯೇಕತಾವಾದಿ ನಾಯಕ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆ ಚಿತ್ರವಿರುವ ಟೀ ಶರ್ಟ್ ಗಳನ್ನು ಧರಿಸಿದ್ದರು.
ಸ್ಥಳದಲ್ಲಿದ್ದ ಮಾಜಿ ಸಂಸದ ಸಿಮ್ರಂಜಿತ್ ಸಿಂಗ್ ಮಾನ್ ನೇತೃತ್ವದ ಶಿರೋಮಣಿ ಅಕಾಲಿದಳ(ಅಮೃತಸರ) ಸಂಘಟನೆಯ ಕಾರ್ಯಕರ್ತರು ಸಹ ಖಲಿಸ್ತಾನ್ ಪರ ಘೋಷಣೆಗಳನ್ನು ಎತ್ತಿದರು. ಇದೇ ವೇಳೆ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆಯನ್ನು ಪ್ರಸ್ತಾಪಿಸಿದ್ದು ಅವರ ಕುಟುಂಬಕ್ಕೆ ನ್ಯಾಯ ನೀಡಬೇಕು ಎಂದು ಒತ್ತಾಯಿಸಿದರು.
ಆಪರೇಷನ್ ಬ್ಲೂಸ್ಟಾರ್ 1984 ರಲ್ಲಿ ಗೋಲ್ಡನ್ ಟೆಂಪಲ್‌ನಿಂದ ಉಗ್ರರನ್ನು ಹೊರಹಾಕಲು ನಡೆಸಿದ ಮಿಲಿಟರಿ ಕಾರ್ಯಾಚರಣೆಯಾಗಿದೆ.