ಕುಂಬಳೆ: ಪ್ರಸ್ತುತ ವರ್ಷದ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ಸಾರ್ವಜನಿಕ ಶಾಲೆಗಳಲ್ಲಿ(ಸರ್ಕಾರಿ ಹಾಗೂ ಅನುದಾನಿತ) 38946 ವಿದ್ಯಾರ್ಥಿಗಳು ವಿವಿಧ ತರಗತಿಗಳಿಗೆ ದಾಖಲಾಗಿದ್ದಾರೆ. ಒಂದನೇ ತರಗತಿಯಲ್ಲಿ ಜಿಲ್ಲೆಯ ವಿವಿಧ ಶಾಲೆಗಳಲ್ಲಿ 13067 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಎರಡನೇ ತರಗತಿಗೆ 1356, ಮೂರನೇ ತರಗತಿಗೆ 1232, ನಾಲ್ಕನೇ ತರಗತಿಗೆ 1373, ಐದನೇ ತರಗತಿಗೆ 7137, ಆರನೇ ತರಗತಿಗೆ 1819, ಏಳನೇ ತರಗತಿಗೆ 115, ಎಂಟನೇ ತರಗತಿಗೆ 9272, ಒಂಬತ್ತನೇ ತರಗತಿಗೆ 1330 ಮತ್ತು ಹತ್ತನೇ ತರಗತಿಯಲ್ಲಿ 1209 ವಿದ್ಯಾರ್ಥಿಗಳು ಪ್ರವೇಶಪಡೆದಿರುವರು.