ನವದೆಹಲಿ: ಮದ್ಯ ತಯಾರಿಕೆ ಹಾಗೂ ವಿವಿಧ ಸೇವೆಗಳನ್ನು ನೀಡುವ ತಮಿಳುನಾಡು ಮೂಲದ ಕಂಪನಿಯೊಂದು ₹400 ಕೋಟಿ ತೆರಿಗೆ ವಂಚನೆ ಮಾಡಿರುವುದನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಹೇಳಿದೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜೂನ್ 15ರಂದು ಚೆನ್ನೈ, ವಿಲುಪುರಂ, ಕೊಯಮತ್ತೂರು ಮತ್ತು ಹೈದರಾಬಾದ್ ಸೇರಿದಂತೆ 40ಕ್ಕೂ ಹೆಚ್ಚು ಕಡೆಗಳಲ್ಲಿ ಈ ಕಂಪನಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ಹಣದ ಮೂಲದ ಬಗ್ಗೆ ಮಾಹಿತಿ ನೀಡದ ಕಾರಣ ₹3 ಕೋಟಿ ನಗದು, ₹2.5 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕಂಪನಿಯು ಸುಳ್ಳು ಲೆಕ್ಕಗಳನ್ನು ನಮೂದಿಸಿ ₹400 ಕೋಟಿ ತೆರಿಗೆ ವಂಚನೆ ಮಾಡಿರುವುದು ಗೊತ್ತಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಆದರೆ, ಆದಾಯ ತೆರಿಗೆ ಇಲಾಖೆಯ ದಾಳಿಗೆ ಗುರಿಯಾದ ಸರಕು ಸಾಗಣೆ, ಮನೋರಂಜನೆ, ಆತಿಥ್ಯ ರೀತಿಯ ಸೇವೆ ಹಾಗೂ ಮದ್ಯ ತಯಾರಿಕೆ ಕಂಪನಿಯ ಹೆಸರನ್ನು ಸಿಬಿಡಿಟಿ ಬಹಿರಂಗಪಡಿಸಿಲ್ಲ. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೋಟೆಲ್‌ಗಳನ್ನು ಹೊಂದಿದೆ ಎಂದು ಹೇಳಲಾಗಿದೆ.