ತಿರುವನಂತಪುರ: ರಾಜ್ಯದಲ್ಲಿ ಕೊರೊನಾ ಸೋಂಕಿತರ ದೈನಂದಿನ ಸಂಖ್ಯೆ ನಿನ್ನೆಯ ವರದಿಯಂತೆ 4,000 ದಾಟಿದೆ. ನಿನ್ನೆ 4224 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಐದು ತಿಂಗಳ ನಂತರ, ಹೊಸ ಕೊರೋನಾ ದೃಢಪಡಿಸುವಿಕೆ ನಿನ್ನೆ ಮತ್ತೆ 4,000 ದಾಟಿದೆ.
ರಾಜ್ಯದಲ್ಲಿ ನಿನ್ನೆ ಏಳು ಮಂದಿ ಕೋವಿಡ್ ನಿಂದ ಮೃತರಾಗಿರುವುದಾಗಿ ವರದಿಯಾಗಿವೆ. ಈ ಪೈಕಿ ನಾಲ್ವರು ಕೊಟ್ಟಾಯಂ ಜಿಲ್ಲೆಯಿಂದ ವರದಿಯಾಗಿದೆ. ಎರ್ನಾಕುಳಂನಲ್ಲಿ ಪ್ರತಿ ದಿನ ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ಪತ್ತೆಯಾಗಿದೆ. ಎರ್ನಾಕುಳಂ ಜಿಲ್ಲೆಯಲ್ಲಿ ನಿನ್ನೆ 1170 ಮಂದಿಗೆ ಸೋಂಕು ಪತ್ತೆಯಾಗಿದೆ.
ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕೇರಳದಲ್ಲಿ ಅತಿ ಹೆಚ್ಚು ಕೊರೋನಾ ಪ್ರಕರಣಗಳಿವೆ.