ತಿರುವನಂತಪುರ; ರಾಜ್ಯದಲ್ಲಿ ಇಂದೂ 4,000 ಸನಿಹ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇಂದು 3981 ಮಂದಿಗೆ ಕೊರೊನಾ ಪತ್ತೆಯಾಗಿದೆ. ಏಳು ಮಂದಿ ಸೋಂಕಿತರು ಮೃತರಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ, ಎರ್ನಾಕುಳಂ ನಲ್ಲಿ ಅತಿ ಹೆಚ್ಚು ಕೊರೋನಾ ರೋಗಿಗಳಿದ್ದಾರೆ. ಎರ್ನಾಕುಳಂ ಜಿಲ್ಲೆಯೊಂದರಲ್ಲೇ ಇಂದು 970 ಮಂದಿಗೆ ಸೋಂಕು ಪತ್ತೆಯಾಗಿದ್ದು, ತಿರುವನಂತಪುರಂನಲ್ಲಿ ಇಂದು 880 ಮಂದಿಗೆ ಸೋಂಕು ಪತ್ತೆಯಾಗಿದೆ.
ದೇಶದ ಮೂರನೇ ಒಂದು ಭಾಗದಷ್ಟು ಕೊರೊನಾ ಪ್ರಕರಣಗಳು ಕೇರಳದಲ್ಲಿ ಈಗಿವೆ. ನಿನ್ನೆ ದೇಶದಲ್ಲಿ 13,313 ಮಂದಿಗೆ ಸೋಂಕು ಪತ್ತೆಯಾಗಿತ್ತು. ಕೇರಳವಲ್ಲದೆ ಮಹಾರಾಷ್ಟ್ರದಲ್ಲೂ ಕೋವಿಡ್ ಏರುಗತಿಯಲ್ಲಿದೆ.