ಸಿಂಗ್ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರ 8 ವರ್ಷದ ಆಡಳಿತದ ಸಂದರ್ಭ ಉತ್ಪಾದನಾ ಸಾಮರ್ಥ್ಯದಲ್ಲಿ ಭಾರೀ ಸೇರ್ಪಡೆ, ದೇಶವನ್ನು ಒಂದೇ ಪ್ರಸರಣ ಗ್ರಿಡ್‌ಗೆ ಸಂಯೋಜಿಸಿರುವುದು ಹಾಗೂ ವಿತರಣಾ ವ್ಯವಸ್ಥೆಯನ್ನು ಸಶಕ್ತೀಕರಿಸಿರುವುದು 23ರಿಂದ 23.5 ಗಂಟೆ ವಿದ್ಯುತ್ ಪೂರೈಕೆಯ ಖಾತ್ರಿ ನೀಡುತ್ತದೆ ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಭಾರತದಲ್ಲಿ ವಿದ್ಯುತ್ ಬೇಡಿಕೆ ಜೂನ್ 9ರಂದು ಸಾರ್ವಕಾಲಿಕ ದಾಖಲೆ 2,10,792 ಮೆಗಾವ್ಯಾಟ್ ದಾಖಲಾಗಿದೆ ಹಾಗೂ 4,712 ದಶಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗಿದೆ ಎಂದು ಅವರು ತಿಳಿಸಿದರು.
ಈ ಬೇಡಿಕೆ ಪೂರೈಸಲು ವಿದ್ಯುತ್ ಸ್ಥಾವರಗಳು ಪೂರ್ಣಪ್ರಮಾಣದಲ್ಲಿ ಕಾರ್ಯಾಚರಿಸಿವೆ. ಅಲ್ಲದೆ, ಮನೆಗಳಿಗೆ ವಿದ್ಯುತ್ ಪೂರೈಕೆಯ ಕೊರತೆ ನೀಗಿಸಲು ಕಲ್ಲಿದ್ದಲು ಆಮದಿಗೆ ಸರಕಾರ ಆದೇಶ ನೀಡಿದೆ ಎಂದು ಅವರು ತಿಳಿಸಿದ್ದಾರೆ.
''ಸಂಪೂರ್ಣ ವಿದ್ಯುತ್ ವಲಯ ( ಕಳೆದ 8 ವರ್ಷಗಳಲ್ಲಿ) ಬದಲಾವಣೆಯಾಗಿದೆ. ಈ ಹಿಂದೆ (2014) ವಿದ್ಯುತ್ ಕೊರತೆ, ಲೋಡ್ ಶೆಡ್ಡಿಂಗ್ ಸಾಮಾನ್ಯವಾಗಿತ್ತು'' ಎಂದು ಅವರು ಹೇಳಿದ್ದಾರೆ.
ಸರಕಾರೇತರ ಸಂಸ್ಥೆಯೊಂದರ ಸಮೀಕ್ಷೆಯ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ರಾಷ್ಟ್ರೀಯ ಮಟ್ಟದಲ್ಲಿ ಸರಾಸರಿ ಲಭ್ಯತೆ 12.5 ಗಂಟೆಗಳು ಇತ್ತು. ಇಂದು ಸರಾಸರಿ 22.5 ಗಂಟೆ ಲಭ್ಯವಾಗುತ್ತಿವೆ ಎಂದು ಅವರು ಹೇಳಿದ್ದಾರೆ.
ಕಳೆದ 8 ವರ್ಷಗಳಲ್ಲಿ ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು 4,00,000 ಮೆಗಾವ್ಯಾಟ್ (ಅಥವಾ 400 ಗಿಗಾವ್ಯಾಟ್)ಗೆ ತಲುಪಿಸಲು 1,69,000 ಮೆಗಾವ್ಯಾಟ್ ಸಾಮರ್ಥ್ಯವನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.