ಒಡಿಶಾ:ಭಾರತ ಜೂ.07 ರಂದು ಒಡಿಶಾದಿಂದ ಅಗ್ನಿ-4 ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಗೊಳಿಸಿದೆ.
ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯ ಈ ಪರೀಕ್ಷೆ ಯಶಸ್ವಿಯಾಗಿರುವುದರಿಂದ ದೇಶದ ಸೇನಾ ಸಾಮರ್ಥ್ಯ ವೃದ್ಧಿಸಿದೆ.
ರಕ್ಷಣಾ ಸಚಿವಾಲಯ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, "ಸಂಜೆ 7:30 ಕ್ಕೆ ಅಗ್ನಿ-4 ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದ್ದು ಮಿನಿಮಮ್ ಡೆಟರೆನ್ಸ್ ಸಾಮರ್ಥ್ಯವನ್ನು ಹೊಂದಿದೆ" ಹೇಳಿದೆ.
ಪರೀಕ್ಷೆ ಯಶಸ್ವಿಯಾಗಿರುವುದು ಕಾರ್ಯಾಚರಣೆಯ ಎಲ್ಲಾ ನಿಯತಾಂಕಗಳನ್ನು ಮೌಲ್ಯೀಕರಿಸಿದ್ದು, ಸೇನೆಯ ಸಾಮರ್ಥ್ಯ ವೃದ್ಧಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.