HEALTH TIPS

ಕಾರ್ಯಾಚರಣೆಗಳನ್ನು ಇನ್ನೂ ನಿರೀಕ್ಷಿಸುವೆ: ಪಿಎಸ್‍ಎಲ್‍ವಿ-ಸಿ53 ಯಶಸ್ವಿ ಉಡಾವಣೆಗೆ ಅಭಿನಂದನೆ ಸಲ್ಲಿಸಿದ ಮುಖ್ಯಮಂತ್ರಿ

                ತಿರುವನಂತಪುರ: ಪಿಎಸ್‍ಎಲ್‍ವಿ-ಸಿ 53 ಯಶಸ್ವಿ ಉಡಾವಣೆ ಬಳಿಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಸ್ರೋಗೆ ಅಭಿನಂದನೆ ಸಲ್ಲಿಸಿದ್ದಾರೆ.

               ಪಿಎಸ್‍ಎಲ್‍ವಿ ಸಿ-53 ಉಡಾವಣೆಯು ಅಂತರರಾಷ್ಟ್ರೀಯ ಬಾಹ್ಯಾಕಾಶ ಸಹಕಾರಕ್ಕೆ ಭಾರತದ ಬದ್ಧತೆಗೆ ಮತ್ತೊಂದು ಉದಾಹರಣೆಯಾಗಿದೆ ಎಂದು ಅವರು ಹೇಳಿದರು. ಅವರು  ಟ್ವಿಟರ್ ಮೂಲಕ ಈ ಅಭಿನಂದನೆ ಸಲ್ಲಿಸಿದರು. 

          ಪಿ.ಎಸ್.ಎಲ್.ವಿ. ಸಿ 53 / ಡಿಎಸ್-ಇಡಿ ಮಿಷನ್ ಯಶಸ್ವಿಯಾಗಿ ಪೂರ್ಣಗೊಂಡಿದ್ದಕ್ಕಾಗಿ ಇಸ್ರೋಗೆ ಅಭಿನಂದನೆಗಳು. ಇಸ್ರೋದ 55ನೇ ಕಾರ್ಯಾಚರಣೆಯಾದ ಪಿಎಸ್‍ಎಲ್‍ವಿ ಸಿ-53 ಉಡಾವಣೆಯು ಅಂತರಾಷ್ಟ್ರೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಹಕಾರಕ್ಕೆ ಭಾರತದ ಬದ್ಧತೆಗೆ ಮತ್ತೊಂದು ಉದಾಹರಣೆಯಾಗಿದೆ.  ಇದೇ ರೀತಿಯ ಕಾರ್ಯಾಚರಣೆಗಳನ್ನು ಇನ್ನಷ್ಟು ನಿರೀಕ್ಷಿಸುವೆ ಎಂದು ಟ್ವಿಟರ್‍ನಲ್ಲಿ ಬರೆದಿದ್ದಾರೆ.

                    ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಿನ್ನೆ ಸಂಜೆ 7 ಗಂಟೆಗೆ ಪಿಎಸ್‍ಎಲ್‍ವಿ ಸಿ-53 ಅನ್ನು ಉಡಾವಣೆ ಮಾಡಲಾಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries