50 ವರ್ಷ ದಾಟಿದರೆ ಆರೋಗ್ಯದ ಮೇಲೆ ಇರಲಿ ಪುರುಷರಿಗೆ ಗಮನ : ಈ ಮೆಡಿಕಲ್ ಟೆಸ್ಟ್ ತಪ್ಪದೆ ಮಾಡುತ್ತಿರಿ ಆರೋಗ್ಯವಾಗಿರಬೇಕು ಅನ್ನೋದು ಪ್ರತಿಯೊಬ್ಬನ ಮನುಷ್ಯನ ಆಸೆ. ಆದರೆ ಇತ್ತೀಚಿನ ದಿನಗಳಲ್ಲಿ ಜೀವನ ಶೈಲಿ, ಆಹಾರ ಹೀಗೆ ವಿಧ ವಿಧದ ಕಾರಣಗಳಿಂದ ಮನುಷ್ಯ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾನೆ. ಈಗ ಆರೋಗ್ಯವೇ ಭಾಗ್ಯ ಎನ್ನುವ ಗಾದೆ ಮಾತು ಹೋಗಿ ಹಣವೇ ಭಾಗ್ಯ ಎನ್ನುವಂತಾಗಿದೆ. ನಿದ್ದೆ, ಊಟ ಬಿಟ್ಟು ಹಣದ ಹಿಂದಿನ ಓಟದಲ್ಲಿ ಮನುಷ್ಯನಿಗೆ ಹಲವು ಕಾಯಿಲೆಗಳು ಅಂಟುತ್ತಿದೆ. ನಾವು ಆರೋಗ್ಯವಾಗಿರಬೇಕು ಅಂದರೆ ನಮ್ಮ ಆರೋಗ್ಯವನ್ನು ಪರಿಶೀಲಿಸುತ್ತಿರಬೇಕು. ಅಟ್ ಲೀಸ್ಟ್ ವರ್ಷಕ್ಕೆ ಒಂದು ಬಾರಿಯಾದರೂ ಆರೋಗ್ಯದ ಬಗ್ಗೆ ಕಾಳಜಿ ಕೊಟ್ಟು ತಪಾಸಣೆ ನಡೆಸುತ್ತಿರಬೇಕು.
ಆರೋಗ್ಯ ತಪಾಸಣೆ ವಿಚಾರದಲ್ಲಿ ಮಹಿಳೆಯರಿಗೆ ಹೋಲಿಸಿದರೆ ಪುರುಷರು ಹಿಂದೆ ಬಿದ್ದಿದ್ದಾರೆ. ಅನಾರೋಗ್ಯ ಬಂದರೆ ಮಾತ್ರ ಆಸ್ಪತ್ರೆ ಕಡೆ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ಸಣ್ಣ ವಯಸ್ಸಿನಲ್ಲೇ ಪುರುಷರು ಪ್ರಾಣ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಲ್ಲದೇ ಅನೇಕ ರೋಗಗಳಿಗೂ ತುತ್ತಾಗುತ್ತಿರುವ ಬಗ್ಗೆ ಇತ್ತೀಚಿಗಿನ ವರದಿಗಳನ್ನು ನಾವು ಗಮನಿಸಬಹುದು. ಮಹಿಳೆಯರಿಗೆ ಹೋಲಿಸಿದರೆ ಪುರುಷರಿಗೆ ಆರೋಗ್ಯ ತಪಾಸಣೆ ನಡೆಸುವ ಬಗ್ಗೆ ಯೋಚನೆ ಇಲ್ಲವಂತೆ. ಹಾಗಾದರೆ ಆರೋಗ್ಯವನ್ನು ಉತ್ತಮವಾಗಿರಿಸಲು ಪುರುಷರು ಏನು ಮಾಡಬೇಕು? ಈ ರೀತಿಯ ತಪಾಸಣೆ ನಡೆಸಿದರೆ ರೋಗಗಳಿಂದ ಪುರುಷರು ದೂರ ಇರಬಹುದಾ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.
1.ಮಧುಮೇಹ ಪರೀಕ್ಷೆ : ಪುರುಷರು ಪ್ರಮುಖವಾಗಿ ಮಾಡಬೇಕಾದ ತಪಾಸಣೆ ಎಂದರೆ ಅದು ಬ್ಲಡ್ ಶುಗರ್ ಟೆಸ್ಟ್. ಹೌದು, ಪ್ರತೀ ವರ್ಷಕೊಮ್ಮೆ ಮಧುಮೇಹ ಪರೀಕ್ಷೆಯನ್ನು ಪುರುಷರು ನಡೆಸಬೇಕು. ಈ ಮೂಲಕ ಹೃದಯ ಕಾಯಿಲೆಯ ಅಪಾಯವನ್ನು ಮತ್ತು ಮೂತ್ರಪಿಂಡದ ಹಾನಿ ಮತ್ತು ನರಗಳ ಹಾನಿಯಿಂದಾಗಿ ಆಗುವ ದುರಂತಗಳನ್ನು ತಪ್ಪಿಸಿಕೊಳ್ಳಬಹುದು. ಇನ್ನು ಪರೀಕ್ಷೆ ನಡೆಸುವುದರಿಂದ ಆರಂಭದಲ್ಲಿ ರೋಗದ ಬಗ್ಗೆ ಮಾಹಿತಿ ಸಿಗುವುದರಿಂದ ಅದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಬಹುದು. ವ್ಯಾಯಾಮ, ಆಹಾರ ಕ್ರಮಗಳ ಮೂಲಕ ಇದನ್ನು ತಡೆಗಟ್ಟಬಹುದಾಗಿದೆ. ಹೀಗಾಗಿ ವರ್ಷಕ್ಕೆ ಒಂದು ಬಾರಿ ಶುಗರ್ ಟೆಸ್ಟ್ ಮಾಡುವುದು ಉತ್ತಮ.
2. ಚರ್ಮದ ತಪಾಸಣೆ: ಪುರುಷರು ಪ್ರತೀ ವರ್ಷಕೊಮ್ಮೆ ಚರ್ಮದ ತಪಾಸಣೆ ನಡೆಸುವುದು ಉತ್ತಮ. ಮಹಿಳೆಯರಿಗೆ ಹೋಲಿಸಿದರೆ ಹೆಚ್ಚಿನ ಸಮಯ ಪುರುಷರು ಬಿಸಿಲಿನಲ್ಲಿ ಸಮಯ ಕಳೆಯುತ್ತಾರೆ. ಹೀಗಾಗಿ ಕೆಲವರಿಗೆ ಚರ್ಮದ ಕ್ಯಾನ್ಸರ್ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಚರ್ಮದ ಪರೀಕ್ಷೆ ನಡೆಸಬೇಕು. ಅಲ್ಲದೇ, ವಂಶಪಾರಂಪರ್ಯವಾಗಿ ಅಥವಾ ಸಣ್ಣ ವಯಸ್ಸಿನಲ್ಲಿ ಯಾವುದೇ ರೀತಿಯ ಚರ್ಮದ ಸಮಸ್ಯೆ ಇದ್ದರೂ ಅದನ್ನು ತಪಾಸಣೆ ಮೂಲಕ ಕಂಡುಕೊಳ್ಳಬೇಕು. ಅಲ್ಲದೇ ಮೈ ಮೇಲೆ ಮಚ್ಚೆಯಂತಹ ಏನಾದರೂ ಕುರುಹುಗಳಿದ್ದರೂ ಅದನ್ನು ಸರಿ ಪಡಿಸಲು ಚರ್ಮ ಪರೀಕ್ಷೆ ನಡೆಸುವುದು ಉತ್ತಮ
3. ಪಿಎಸ್ಎ ಪರೀಕ್ಷೆ! ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಹೆಚ್ಚುತ್ತಿದೆ. ಹೀಗಾಗಿ ಪುರುಷರು ಪ್ರತೀ ವರ್ಷಕೊಮ್ಮೆ ಪಿಎಸ್ಎ ಪರೀಕ್ಷೆ ನಡೆಸುವುದು ಉತ್ತಮ. ಪ್ರಾಸ್ಟೇಟ್ ಕ್ಯಾನ್ಸರ್ ಅಮೆರಿಕನ್ ಪುರುಷರಲ್ಲಿ ಸಾಮಾನ್ಯವಾಗಿದ್ದು, ಏಳು ಪುರುಷರಲ್ಲಿ ಒಬ್ಬರಿಗೆ ಈ ಕಾಯಿಲೆ ಅಂಟುತ್ತಿದೆ. PSA ರಕ್ತದ ಮಟ್ಟದ ಪರೀಕ್ಷೆ, ಜೊತೆಗೆ ಡಿಜಿಟಲ್ ಗುದನಾಳದ ಪರೀಕ್ಷೆಗಳು (DREs) ಮಾಡುವ ಮೂಲಕ ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ಪತ್ತೆಹಚ್ಚಬಹುದಾಗಿದೆ. ಪುರುಷರು ತಮ್ಮ 40 ನೇ ವಯಸ್ಸಿನಲ್ಲೇ ಪಿಎಸ್ಎ ಪರೀಕ್ಷೆ ನಡೆಸಲು ಆರಂಭಿಸಬೇಕು. 50 ರಿಂದ 70 ವರ್ಷ ವಯಸ್ಸಿನ ಎಲ್ಲಾ ಪುರುಷರನ್ನು ವಾರ್ಷಿಕ ಆಧಾರದ ಮೇಲೆ ಪರೀಕ್ಷೇ ನಡೆಸಿದರೆ ಬಹಳ ಉತ್ತಮ. ( ಪ್ರಾಸ್ಟೇಟ್ ಕ್ಯಾನ್ಸರ್ ಅಂದರೆ ಪುರುಷರ ಜನನಾಂಗದಲ್ಲಿರುವ ಪ್ರಾಸ್ಟೇಟ್ ಗ್ರಂಧಿಯನ್ನು ಆವರಿಸುವ ಕ್ಯಾನ್ಸರ್, ವಯೋಸಹಜವಾಗಿ ಇದು ಬರುತ್ತದೆ)
ವರ್ಷಕೊಮ್ಮೆ ಮಾಡಬೇಕಾದ ತಪಾಸಣೆ! 4. ಕೊಲೊನೋಸ್ಕೋಪಿ ಪರೀಕ್ಷೆ! : ಪುರುಷರಿಗೆ 50 ವರ್ಷ ದಾಟುತ್ತಿದ್ದಂತೆ ಅನೇಕ ರೋಗಗಳು ಅವರ ದೇಹದೊಳಗೆ ಲಗ್ಗೆ ಇಡುತ್ತದೆ. ಈ ಪೈಕಿ ಕರುಳಿನ ಕ್ಯಾನ್ಸರ್ ಕೂಡ ಒಂದು. ಹೀಗಾಗಿ ಇದಕ್ಕೆ ಸಂಬಂಧಪಟ್ಟ ಕೊಲೊನೋಸ್ಕೋಪಿ ಪರೀಕ್ಷೆ ನಡೆಸುವುದು ಉತ್ತಮ. ಕುಟುಂಬದಲ್ಲಿ ಕ್ಯಾನ್ಸರ್ ಯಾರಿಗೂ ಇಲ್ಲದಿದ್ದರೂ 50 ವರ್ಷ ದಾಟುತ್ತಿದ್ದಂತೆ ಕರುಳಿನ ಕ್ಯಾನ್ಸರ್ ಸಂಬಂಧ ಪರೀಕ್ಷೆ ನಡೆಸುವುದು ಒಳ್ಳೆಯದು.
5.ವರ್ಷಕ್ಕೆ ಮಾಡುವ ಪರೀಕ್ಷೆ! ಇಂದಿನ ಜೀವನ ಶೈಲಿಯಲ್ಲಿ ಅಧಿಕ ರಕ್ತದೊತ್ತಡವು ಸಾಮಾನ್ಯವಾಗಿ ಬಿಟ್ಟಿದೆ. ಕೆಲಸದ ಒತ್ತಡ, ಇನ್ನಿತರ ಸಂಸ್ಯೆಗಳಿಂದ ಪುರುಷರಲ್ಲೂ ಬಿಪಿ ಸಾಮಾನ್ಯವಾಗಿ ಬಿಟ್ಟಿದೆ. ಅಧಿಕ ರಕ್ತದೊತ್ತಡದಿಂದ ಪಾರ್ಶ್ವವಾಯುವಂತಹ ದೊಡ್ಡ ಸಮಸ್ಯೆಗಳು ಕಾಡಬಹುದು. ಹೀಗಾಗಿ ಗಂಡಸರು 20 ವರ್ಷ ದಾಟುತ್ತಿದ್ದಂತೆ ಬಿಪಿ ಪರೀಕ್ಷೆ ನಡೆಸುವುದು ಒಳ್ಳೆಯದು. ಇನ್ನು 50 ವರ್ಷ ದಾಟುತ್ತಿದ್ದಂತೆ ಬಿಪಿ ಪರೀಕ್ಷೆ ಮಾಡಲೇಬೇಕು. ಈ ಮೂಲಕ ಇನ್ನಿತರ ರೋಗಗಳ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು. ಅಲ್ಲದೇ ಕೊಲೆಸ್ಟ್ರಾಲ್ ಪರೀಕ್ಷೆ ನಡೆಸುವುದು ಕೂಡ ಒಳ್ಳೆಯದು. ಯಾಕೆಂದರೆ ಕೊಲೆಸ್ಟ್ರಾಲ್ ಅಸಮತೋಲನದಿಂದ ಹೃದಯ ಸಂಬಂಧಿ ಕಾಯಿಲೆಗಳು ನಮ್ಮ ದೇಹಕ್ಕೆ ಲಗ್ಗೆ ಇಡಬಹುದು. 20 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರು ಪ್ರತಿ ಮೂರರಿಂದ ಐದು ವರ್ಷಗಳಿಗೊಮ್ಮೆ ಮತ್ತು ನಂತರ 50 ವರ್ಷ ವಯಸ್ಸಿನ ನಂತರ ತಮ್ಮ ಕೊಲೆಸ್ಟ್ರಾಲ್ ಅನ್ನು ಪರೀಕ್ಷಿಸಬೇಕು.
ಇದಲ್ಲದೇ ಕಣ್ಣು, ಹೃದಯಕ್ಕೆ ಸಂಬಂಧಪಟ್ಟ ಇಸಿಜಿ, ಕಿಡ್ನಿಗೆ ಸಂಬಂಧಪಟ್ಟ ಪರೀಕ್ಷೆಗಳನ್ನು ಕೂಡ ನಡೆಸುವುದರ ಮೂಲಕ ನಮ್ಮ ದೇಹವನ್ನು ನಾವು ಕಾಪಾಡಿಕೊಳ್ಳಬೇಕು. ನಮಗೆ ಯಾವುದೇ ಅಪಾಯ ಬಾರದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ಧಾರಿಯಾಗಿರುವ ಕಾರಣ ವೈದ್ಯಕೀಯ ತಪಾಸಣೆ ನಡೆಸುವುದು ಬಹಳ ಒಳಿತು.
ಉತ್ತಮ ಆರೋಗ್ಯಕ್ಕೆ ನೀವು ಮಾಡಬೇಕಾಗಿರುವುದು ಏನು? ವೈದ್ಯಕೀಯ ತಪಾಸಣೆ ಮಾತ್ರವಲ್ಲದೇ, ನಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಲು ನಮ್ಮ ಬಳಿ ಅನೇಕ ಸೂತ್ರಗಳಿವೆ ಅದನ್ನು ನಾವು ಸರಿಯಾಗಿ ಬಳಸಿದರೆ ಸಾಕು. ಈ ಮೂಲಕ ರೋಗಗಳಿಂದ ನಾವು ದೂರ ಇರಬಹುದು.
ವ್ಯಾಯಾಮ ಮನುಷ್ಯನ ಜೀವಕ್ಕೆ ಮುಖ್ಯವಾಗಿ ಬೇಕಾಗಿರುವುದು ಸರಿಯಾದ ವ್ಯಾಯಮ. ಹೌದು, ಪ್ರತಿ ವಾರ ಮೂರರಿಂದ ನಾಲ್ಕು ಬಾರಿ ಅಂದರೆ 30 ರಿಂದ 45 ನಿಮಿಷಗಳವರೆಗೆ ವ್ಯಾಯಾಮ ಮಾಡಿ. ಹೃದಯ-ರಕ್ತನಾಳಕ್ಕೆ ಸಂಬಂಧಪಟ್ಟ ವ್ಯಾಯಾಮ ಮಾಡಬೇಕು. ಅಲ್ಲದೇ ತೂಕದಲ್ಲಿ ಸಮತೋಲನ ಕಾಪಾಡಿಕೊಳ್ಳುವ ಸಂಬಂಧವೂ ವ್ಯಾಯಮ ನಡೆಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.
ಸಮತೋಲಿತ ಆಹಾರ ಸೇವನೆ ಇನ್ನು ನಮ್ಮ ಆರೋಗ್ಯ ಹಾಗೂ ಆಹಾರಕ್ಕೆ ಭಾರೀ ಸಂಬಂಧವಿದೆ. ನಾವು ದಿನ ನಿತ್ಯ ಸಮತೋಲನವಿರುವ ಆಹಾರ ಸೇವಿಸಬೇಕು. ಹೆಚ್ಚು ಕೊಬ್ಬು ಇಲ್ಲದ, ಪ್ರೊಟಿನ್, ತರಕಾರಿಮ್, ಹಣ್ಣು ಹಂಪಲು, ಫೈಬರ್ ಇರುವ ಆಹಾರವನ್ನು ಸೇವಿಸಬೇಕು. ಅಲ್ಲದೇ ಹೆಚ್ಚು ನೀರು ಕುಡಿಯಬೇಕು ದೇಹವನ್ನು ಹೈಡ್ರೇಟ್ ಆಗಿರುವಂತೆ ಮಾಡಬೇಕು. ಜೊತೆಗೆ ಸಕ್ಕರೆ ಸೇವನೆಗೆ ಕಡಿವಾಣ ಹಾಕಬೇಕು. ಈ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಇದಲ್ಲದೇ ಧೂಮಪಾನದಿಂದ ದೂರ ಉಳಿದರೆ ಆರೋಗ್ಯ ಚೆನ್ನಾಗಿ ಇರುತ್ತದೆ. ತೊಂಬತ್ತು ಪ್ರತಿಶತ ಶ್ವಾಸಕೋಶದ ಕ್ಯಾನ್ಸರ್ ಗೆ ಧೂಮಪಾನ ಕಾರಣವಾಗಿದೆ. ಧೂಮಪಾನವು ಅನೇಕ ಇತರ ಕ್ಯಾನ್ಸರ್ ಮತ್ತು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೇ ಭಾರೀ ಮಧ್ಯಪಾನ ಕೂಡ ದೇಹಕ್ಕೆ ಒಳ್ಳೆಯದಲ್ಲ. ಜೊತೆಗೆ ಸಮಯಕ್ಕೆ ಸರಿಯಾಗಿ ಉತ್ತಮವಾಗಿ ನಿದ್ದೆಯಿಂದಲೂ ಉತ್ತಮ ಆರೋಗ್ಯ ವೃದ್ದಿಯಾಗುತ್ತದೆ.