ಶ್ರೀನಗರ: ಕಾಶ್ಮೀರದಲ್ಲಿ ಈ ವರ್ಷದ ಆರಂಭದಿಂದ ಈವರೆಗೆ ಉಗ್ರ ವಿರೋಧಿ ಕಾರ್ಯಾಚರಣೆಗಳಲ್ಲಿ 100 ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಇದರಲ್ಲಿ ಲಷ್ಕರ್-ಎ-ತೈಯಬಾ ಉಗ್ರ ಸಂಘಟನೆಯ ಅತಿಹೆಚ್ಚು 63 ಕೇಡರ್‌ಗಳು ಮತ್ತು ಜೈಶ್-ಎ-ಮೊಹಮ್ಮದ್ ಸಂಘಟನೆಯ 24 ಉಗ್ರರು ಸೇರಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.